Monday, 2 November 2026 Karunadu Gharjane — Edition

Karunadu Gharjane

News website

ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಜಿಲ್ಲೆ ಸಿರುಗುಪ್ಪ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ ಜಿಲ್ಲೆ ಬೆಂಗಳೂರು I ಜನರ ಜೇಬಿಗೆ ಕತ್ತರಿ, : ಹಾಲು–ಬಸ್ ದರ ಏರಿಕೆಗೆ ಮುಂದಾದ ಸರ್ಕಾರದ ಕ್ರಮ ಖಂಡನೀಯ – ವೆಲ್ಫೇರ್ ಪಾರ್ಟಿ ಗದಗ ಕರುನಾಡು ಘರ್ಜನೆ ಪತ್ರಿಕೆ ಹಾಗೂ ಕೆ.ಜಿ. ನ್ಯೂಸ್ 5ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಕಲ ಸಿದ್ಧತೆ – ನವೆಂಬರ್ 1ರಂದು ಅದ್ಧೂರಿ ಸಮಾರಂಭಕ್ಕೆಸರ್ವರಿಗೂ ಹೃತ್ಪೂರ್ವಕ ಸ್ವಾಗತ ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಜಿಲ್ಲೆ ಸಿರುಗುಪ್ಪ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ ಜಿಲ್ಲೆ ಬೆಂಗಳೂರು I ಜನರ ಜೇಬಿಗೆ ಕತ್ತರಿ, : ಹಾಲು–ಬಸ್ ದರ ಏರಿಕೆಗೆ ಮುಂದಾದ ಸರ್ಕಾರದ ಕ್ರಮ ಖಂಡನೀಯ – ವೆಲ್ಫೇರ್ ಪಾರ್ಟಿ ಗದಗ ಕರುನಾಡು ಘರ್ಜನೆ ಪತ್ರಿಕೆ ಹಾಗೂ ಕೆ.ಜಿ. ನ್ಯೂಸ್ 5ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಕಲ ಸಿದ್ಧತೆ – ನವೆಂಬರ್ 1ರಂದು ಅದ್ಧೂರಿ ಸಮಾರಂಭಕ್ಕೆಸರ್ವರಿಗೂ ಹೃತ್ಪೂರ್ವಕ ಸ್ವಾಗತ ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ
ಜಿಲ್ಲೆ

ಸಿರುಗುಪ್ಪ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ

ಕರುನಾಡು ಘರ್ಜನೆ ಸುದ್ದಿ ಸಿರುಗುಪ್ಪ  :ಕರ್ನಾಟಕ ರಾಜ್ಯ ಕುರುಬರ ಸಂಘ (ರಿ.) ಒಕ್ಕೂಟ, ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ. ಶ್ರೀ ಪ್ರಭುಲಿಂಗ ದೊಡ್ಣಿಣಿ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದದ ಮೇರೆಗೆ, ಸಿರುಗುಪ್ಪ ತಾಲೂಕು ಘಟಕ ಕುರುಬರ ಸಂಘದ ವತಿಯಿಂದ ನೂತನ ಪದಾಧಿಕಾರಿಗಳಿಗೆ…

ಕರುನಾಡು ಘರ್ಜನೆ ಸುದ್ದಿ ಸಿರುಗುಪ್ಪ  :ಕರ್ನಾಟಕ ರಾಜ್ಯ ಕುರುಬರ ಸಂಘ (ರಿ.) ಒಕ್ಕೂಟ, ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ. ಶ್ರೀ ಪ್ರಭುಲಿಂಗ ದೊಡ್ಣಿಣಿ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದದ ಮೇರೆಗೆ, ಸಿರುಗುಪ್ಪ ತಾಲೂಕು ಘಟಕ ಕುರುಬರ ಸಂಘದ ವತಿಯಿಂದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ, ಜವಾಬ್ದಾರಿ ಸ್ವೀಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ 01-11-2026ರ ಭಾನುವಾರ ಬೆಳಿಗ್ಗೆ 10:30ಕ್ಕೆ ಸಿರುಗುಪ್ಪ ನಗರದ ಆದೋನಿ ರಸ್ತೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಎದುರುಗಡೆಯಿರುವ ಎಸ್.ಎಲ್.ವಿ. ಶಶಿಕಲಾ ಲಾಡ್ಜ್‌ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಸಂಘಟನೆಯ ಜವಾಬ್ದಾರಿಯನ್ನು ಪದಾಧಿಕಾರಿಗಳು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಗೊಂಡ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ, ಶಾಲು ಹೊದಿಸಿ ಗೌರವಿಸಲಾಯಿತು.

ನೂತನ ಪದಾಧಿಕಾರಿಗಳ ವಿವರ

1. ಶ್ರೀ ಕೆ. ನಾಗರುದ್ರ – ಸಿರಿಗೇರಿ: ಅಧ್ಯಕ್ಷರು, ಸಿರುಗುಪ್ಪ ತಾಲೂಕು.
2. ಶ್ರೀ ಕೆ. ಮುದುಕಪ್ಪ – ರಾರಾವಿ: ಉಪಾಧ್ಯಕ್ಷರು.
3. ಶ್ರೀ ಕೆ. ಮಲ್ಲಯ್ಯ – ಸೂಗೂರು: ಉಪಾಧ್ಯಕ್ಷರು.
4. ಶ್ರೀ ಎ. ನಾಗರಾಜ – ಹರಿವಾಣ: ಗೌರವಾಧ್ಯಕ್ಷರು.
5. ಶ್ರೀ ಕೆ. ಪೂಜಾರಿ ಪೆಟ್ಟಪ್ಪ – ಸಿರುಗುಪ್ಪ ನಗರ: ನ್ಯಾಯ ಘಟಕ ಸಂಚಾಲಕರು.
6. ಶ್ರೀ ಕೆ. ಊಲ್ತಿ ಭೀಮಣ್ಣ – ಬಾಗೇವಾಡಿ: ಹಿರಿಯ ಮುಖಂಡರು.
7. ಶ್ರೀ ಕೆ. ಹಲ್ಲಿಗದೆ ಶಿವಣ್ಣ – ಬಾಗೇವಾಡಿ: ಮುಖಂಡರು.
8. ಶ್ರೀ ಕೆ.ಯು. ರಾಮಚಂದ್ರಪ್ಪ – ಸಿರುಗುಪ್ಪ ನಗರ: ನಿರ್ದೇಶಕರು ಹಾಗೂ ಹಿರಿಯ ಮುಖಂಡರು.
9. ಶ್ರೀ ಕೆ. ಕಾಳಿಂಗ – ವೆಂಕಟಾಪುರ: ನಿರ್ದೇಶಕರು.
10. ಶ್ರೀ ಯರ್ರೆಪ್ಪ – ಬಗ್ಗೂರು: ಕಾರ್ಯಕ್ರಮ ಸಂಯೋಜಕರು.
11. ಶ್ರೀ ಕೆ. ಲಿಂಗಣ್ಣ – ಕುಡುದ್ರಾಳು: ಲೆಕ್ಕ ಪರಿಶೋಧಕರು.
12. ಶ್ರೀ ಕೆ. ವೀರೇಶ್ – ಸಿರಿಗೇರಿ: ತಾಲೂಕು ಕಾರ್ಯದರ್ಶಿಗಳು.
13. ಶ್ರೀ ಪಿ. ನಾಗರಾಜ – ರಾವಿಹಾಳು: ಕಾನೂನು ಸಲಹೆಗಾರರು.
14. ಶ್ರೀ ಕೆ. ಷಣ್ಮುಖ – ಸಿರಿಗೇರಿ: ಸಂಘಟನೆಯ ಕಾರ್ಯಾಧ್ಯಕ್ಷರು.
15. ಶ್ರೀ ಕೆ. ಹೊಳಗುಂದಿ ದ್ಯಾವಣ್ಣ – ಸಿರಿಗೇರಿ: ಕಾರ್ಯಕ್ರಮ ನಿರ್ದೇಶಕರು.
16. ಶ್ರೀ ಕೆ. ಮುರಳಿ ಕೃಷ್ಣ – ಕರೂರು: ಹೋಬಳಿ ಘಟಕದ ಸಂಯೋಜಕರು.
17. ಶ್ರೀ ಕೆ. ಅಂಗಡಿ ಆದೇಪ್ಪ – ಕರೂರು: ತಾಲೂಕು ಕಚೇರಿ ಉಸ್ತುವಾರಿಗಳು.

ಸಂಘಟನೆಯ ಉದ್ದೇಶ ಮತ್ತು ಸಂದೇಶ

ಈ ಸಂದರ್ಭದಲ್ಲಿ ಹಿರಿಯ ನಾಗರಿಕರು, ಸಮಾಜದ ಮುಖಂಡರು ಹಾಗೂ ನೂತನ ಪದಾಧಿಕಾರಿಗಳು ಭಾಗವಹಿಸಿ ಸಂಘಟನೆಯ ಬೆಳವಣಿಗೆ, ಸಮಾಜದ ಒಗ್ಗಟ್ಟು, ಶೈಕ್ಷಣಿಕ ಪ್ರಗತಿ, ಸಾಮಾಜಿಕ ನ್ಯಾಯ ಮತ್ತು ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸುವ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಂಘಟನೆಯ ಪ್ರತಿಯೊಬ್ಬ ಪದಾಧಿಕಾರಿಯೂ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂಬ ಸಂದೇಶವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಸಮಾಜದ ಮುಖಂಡರು ಹಾಗೂ ವಿವಿಧ ಗ್ರಾಮಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Editor

Leave a comment