Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಪ್ರಾಣಾಂತಕ ಚೈನೀಸ್ ಮಾಂಜಾ ಮುಕ್ತ ಸಮಾಜಕ್ಕೆ ಗದಗಿನಲ್ಲಿ ಶಂಖನಾದ: ಮರೆಯಾಗುತ್ತಿರುವ ದೇಶೀಯ ಆಟಗಳ ಪುನರುತ್ಥಾನಕ್ಕೆ ‘ದಾರಿದೀಪ’ ಸಂಸ್ಥೆಯ ಕರೆ!

ಕರುನಾಡು ಘರ್ಜನೆ ಸುದ್ದಿ  ಗದಗ 25: ಇಂದಿನ ಆಧುನಿಕತೆ ಮತ್ತು ತಂತ್ರಜ್ಞಾನದ ಅಬ್ಬರದಲ್ಲಿ ನಮ್ಮ ಹೆಮ್ಮೆಯ ಸಾಂಪ್ರದಾಯಿಕ ದೇಶೀಯ ಆಟಗಳು ಇತಿಹಾಸದ ಪುಟಗಳನ್ನು ಸೇರುತ್ತಿದ್ದು, ಅವುಗಳ ಜಾಗವನ್ನು ಆಕ್ರಮಿಸಿಕೊಂಡಿರುವ ಪ್ರಾಣಾಂತಕ ಪ್ಲಾಸ್ಟಿಕ್ ಚೈನೀಸ್ ಮಾಂಜಾ ದಾರಗಳು ಇಡೀ ಜೀವಸಂಕುಲಕ್ಕೆ ಯಮಸ್ವರೂಪಿಯಾಗಿ ಪರಿಣಮಿಸಿವೆ…

ಕರುನಾಡು ಘರ್ಜನೆ ಸುದ್ದಿ  ಗದಗ 25: ಇಂದಿನ ಆಧುನಿಕತೆ ಮತ್ತು ತಂತ್ರಜ್ಞಾನದ ಅಬ್ಬರದಲ್ಲಿ ನಮ್ಮ ಹೆಮ್ಮೆಯ ಸಾಂಪ್ರದಾಯಿಕ ದೇಶೀಯ ಆಟಗಳು ಇತಿಹಾಸದ ಪುಟಗಳನ್ನು ಸೇರುತ್ತಿದ್ದು, ಅವುಗಳ ಜಾಗವನ್ನು ಆಕ್ರಮಿಸಿಕೊಂಡಿರುವ ಪ್ರಾಣಾಂತಕ ಪ್ಲಾಸ್ಟಿಕ್ ಚೈನೀಸ್ ಮಾಂಜಾ ದಾರಗಳು ಇಡೀ ಜೀವಸಂಕುಲಕ್ಕೆ ಯಮಸ್ವರೂಪಿಯಾಗಿ ಪರಿಣಮಿಸಿವೆ ಎಂದು ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷೀಣಿಯವರಾದ ಶ್ರೀಮತಿ ಶಕುಂತಲಾ ಮುಳುಗುಂದ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಅವರು ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ಗದಗಿನ ಸಿದ್ದಲಿಂಗ ನಗರದಲ್ಲಿರುವ ಸರಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್ 15 ರಲ್ಲಿ “ಪ್ಲಾಸ್ಟಿಕ್ ಚೈನೀಸ್ ಮಾಂಜಾ ದಾರ ತ್ಯಜಿಸಿ, ಶುದ್ಧ ಹತ್ತಿ ನೂಲು (ಕಾಟನ್ ಥ್ರೆಡ್) ದಾರಗಳನ್ನು ಮಾತ್ರ ಉಪಯೋಗಿಸಿ; ಪರಿಸರ ಮತ್ತು ಜೀವ ಉಳಿಸಿ” ಎಂಬ ಅತ್ಯಂತ ಅರ್ಥಪೂರ್ಣವಾದ ಬೃಹತ್ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಅಪಾಯಕಾರಿ ವ್ಯವಸ್ಥೆಯ ವಿರುದ್ಧ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಸಂಸ್ಕೃತಿ ಮತ್ತು ಅಮೂಲ್ಯ ಜೀವಗಳು ಸಂಪೂರ್ಣ ನಾಶವಾಗಲಿವೆ ಎಂದು ಕರೆ ನೀಡಿ ಮಾತನಾಡಿ ಗಾಳಿಪಟ ಆಡುವುದು ನಮ್ಮ ಸಂಸ್ಕೃತಿಯ ಒಂದು ಭಾಗ. ಆದರೆ ನಮ್ಮ ಆಟದ ಸಂಭ್ರಮ ಮತ್ತೊಬ್ಬರ ಸಾವಿಗೆ ಕಾರಣವಾಗಬಾರದು. ಚೈನೀಸ್ ಮಾಂಜಾ ಎಂಬ ಯಮಪಾಶವನ್ನು ಸಂಪೂರ್ಣವಾಗಿ ತ್ಯಜಿಸಿ, ಸಾಂಪ್ರದಾಯಿಕ ಹಾಗೂ ಜೀವಕ್ಕೆ ಹಾನಿ ಮಾಡದ ಶುದ್ಧ ಹತ್ತಿ ನೂಲಿನ ದಾರಗಳನ್ನು ಮಾತ್ರ ಬಳಸುವ ಮೂಲಕ ಗಾಳಿಪಟ ಆಟದ ಅಸ್ತಿತ್ವವನ್ನು ನಾವೆಲ್ಲರೂ ಉಳಿಸಬೇಕಾಗಿದೆ. ಈ ಮೂಲಕ ನಮ್ಮ ದೇಶೀಯ ಆಟಗಳಲ್ಲಿ ಕನಿಷ್ಠ ಇದೊಂದನ್ನಾದರೂ ಜೀವಂತವಾಗಿ ಮುಂದಿನ ಪೀಳಿಗೆಗೆ ದಾಟಿಸಬೇಕಿದೆ ಎಂದು ಹೇಳಿದರು
ಮುಖ್ಯೋಪಾಧ್ಯಾಯರಾದ ವಿ.ಎನ್. ಬಸಾಪುರ ಅವರು ಮಾತನಾಡಿ ಒಂದು ಕಾಲದಲ್ಲಿ ನಮ್ಮ ಬಾಲ್ಯವನ್ನು ರಂಜಿಸುತ್ತಿದ್ದ ದೇಶೀಯ ಆಟಗಳು ಇಂದಿನ ಸಮಾಜದಲ್ಲಿ ಹೇಳಹೆಸರಿಲ್ಲದಂತೆ ಮರೆಯಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಮರೆಯಾಗುತ್ತಿರುವ ಆಟಗಳ ಪಟ್ಟಿಗೆ ಈಗ ಸಾಂಪ್ರದಾಯಿಕ ಗಾಳಿಪಟ ಆಟವೂ ಸೇರುತ್ತಿರುವುದು ನೋವಿನ ಸಂಗತಿ. ದಾರಿದೀಪ ಸಂಸ್ಥೆಯು ಹಮ್ಮಿಕೊಂಡಿರುವ ಈ ಜಾಗೃತಿ ಅಭಿಯಾನವು ವ್ಯವಸ್ಥೆಯ ಕಣ್ಣು ತೆರೆಸುವಂತಹ ರಚನಾತ್ಮಕ ಹಾಗೂ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದರು
ಗುರುಮಾತೆಯವರಾದ ಬಿ.ಯಶೋಧ ಅವರು ಮಾತನಾಡಿ ನಿಷೇಧವಿದ್ದರೂ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಮತ್ತು ಕಳ್ಳದಾರಿಯಲ್ಲಿ ಚೈನೀಸ್ ಮಾಂಜಾ ದಾರ ರಾಜಾರೋಷವಾಗಿ ಸಿಗುತ್ತಿರುವುದು ನಮ್ಮ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. ಈ ಕಣ್ಣಾಮುಚ್ಚಾಲೆ ಆಟದಿಂದಾಗಿ ಈಗಾಗಲೇ ಸಾಕಷ್ಟು ಅಮಾಯಕ ಹಕ್ಕಿಗಳು, ಪ್ರಾಣಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಕುತ್ತಿಗೆ ಸೀಳಿ ರಕ್ತದ ಮಡುವಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪ್ರಾಣಾಂತಕ ದಾರಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಸರಕಾರ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು
ಗುರುಮಾತೆಯವರಾದ ವಿ.ಬಿ. ಕರಿಬಸನಗೌಡರ ಅವರು ಮಾತನಾಡಿ ಹಿಂದೆ ನಮ್ಮ ಗಲ್ಲಿಗಳಲ್ಲಿ ಮಕ್ಕಳು ಒಟ್ಟಾಗಿ ಆಡುತ್ತಿದ್ದ ಬಗರಿ ಆಟ, ಚಿಣ್ಣಿಪೋಣಿ, ಗುಂಡು ಆಟ, ಲಗೋರಿ ಮುಂತಾದ ದೇಶೀಯ ಆಟಗಳು ಕೇವಲ ಮನರಂಜನೆಯಾಗಿರದೆ, ಮಕ್ಕಳಲ್ಲಿ ದೈಹಿಕ ಶಕ್ತಿ, ಮಾನಸಿಕ ವಿಕಾಸ ಮತ್ತು ಒಗ್ಗಟ್ಟಿನ ಭಾವನೆಯನ್ನು ಮೂಡಿಸುತ್ತಿದ್ದವು. ಆ ಎಲ್ಲಾ ಸುಂದರ ಸಂಸ್ಕೃತಿಯನ್ನು ಮರೆತು ಇಂದು ಮಕ್ಕಳು ಪ್ರಾಣಕ್ಕೆ ಕಂಟಕವಾಗುವ ದಾರ ಹಿಡಿದು ನಿಂತಿರುವುದು ದುರಂತ. ನಾವು ನಮ್ಮ ಹಳೆಯ ಪದ್ಧತಿಗಳನ್ನು ಮತ್ತೆ ಬೆಳೆಸಬೇಕಾಗಿದೆ. ಎಂದು ಕಾರ್ಮಿಕವಾಗಿ ನೀಡಿದರು
ದಿ ಕಾರ್ಪೊರೇಷನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಉಪಾಧ್ಯಕ್ಷರಾದ ನಾಗರಾಜ ದಾವಡಿ ಅವರು ಮಾತನಾಡಿ ಅಪಾಯಕಾರಿ ಮಾಂಜಾ ದಾರವನ್ನು ಕೇವಲ ನಿಷೇಧಿಸಿದರೆ ಸಾಲದು; ಅದನ್ನು ಮಾರುವವರು ಮತ್ತು ಖರೀದಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತಹ ಕಟ್ಟುನಿಟ್ಟಾದ ಕಾನೂನು ರೂಪಿಸಬೇಕು ಒಂದು ಸರ್ಕಾರಕ್ಕೆ ಬಲವಾಗಿ ಪ್ರತಿಪಾದಿಸಿದರು
ಸಂಸ್ಥೆಯ ಪ್ರಮುಖ ಪದಾಧಿಕಾರಿಗಳಾದ ಜ್ಯೋತಿ ದೇಸಾಯಿಗೌಡರ ಮಾತನಾಡಿ ಪ್ಲಾಸ್ಟಿಕ್ ಚೈನೀಸ್ ಮಾಂಜಾ ದಾರವು ಕೇವಲ ಗಾಳಿಪಟ ಹಾರಿಸುವ ಸಾಧನವಲ್ಲ, ಅದು ಪ್ರಕೃತಿಯ ಪಾಲಿಗೆ ಮಾರಕವಾದ ಅಸ್ತ್ರವಾಗಿದೆ. ಮಣ್ಣಿನಲ್ಲಿ ಸುಲಭವಾಗಿ ಕೊಳೆಯದ ಈ ಪ್ಲಾಸ್ಟಿಕ್ ದಾರಗಳು ವರ್ಷಗಟ್ಟಲೆ ಪರಿಸರದಲ್ಲಿ ಉಳಿದು ಮಣ್ಣಿನ ಫಲವತ್ತತೆಯನ್ನು ಹಾಳುಮಾಡುತ್ತವೆ. ಆದ್ದರಿಂದ ಪರಿಸರ ರಕ್ಷಣೆಯ ದೃಷ್ಟಿಯಿಂದ ನಾವೆಲ್ಲರೂ ಚೈನೀಸ್ ಮಾಂಜಾವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕಾಗಿದೆ ಎಂದರು
ದೀಪಾ ಉಗಲಾಟದ ಅವರು ಮಾತನಾಡಿ ಪ್ರತಿ ವರ್ಷ ಗಾಳಿಪಟ ಹಾರಿಸುವ ಹಬ್ಬದ ದಿನಗಳಲ್ಲಿ ನೂರಾರು ಅಮಾಯಕ ಪಕ್ಷಿಗಳು ಈ ಚೈನೀಸ್ ಮಾಂಜಾ ದಾರಕ್ಕೆ ಸಿಲುಕಿ ರೆಕ್ಕೆಗಳನ್ನು ಕಳೆದುಕೊಂಡು, ರಕ್ತ ಹೆಪ್ಪುಗಟ್ಟಿ ಪ್ರಾಣ ಬಿಡುತ್ತಿವೆ. ಆಕಾಶದಲ್ಲಿ ಮುಕ್ತವಾಗಿ ಹಾರಾಡುವ ಹಕ್ಕಿಗಳ ಜೀವಕ್ಕೆ ಕಂಟಕವಾಗಿರುವ ಈ ಮಾರಕ ದಾರವನ್ನು ಬಳಸಿ ನಾವು ಸಂಭ್ರಮಿಸುವುದು ಸರಿಯಲ್ಲ. ಹಕ್ಕಿಗಳ ಜೀವ ಉಳಿಸಲು ಹತ್ತಿ ನೂಲನ್ನೇ ಬಳಸುವುದು ಸೂಕ್ತ ಎಂದರು
ವಿಜಯಲಕ್ಷ್ಮಿ ಅಸೂಟಿ ಅವರು ಮಾತನಾಡಿ ಚೈನೀಸ್ ಮಾಂಜಾ ದಾರವು ಕೇವಲ ಪ್ರಾಣಿ-ಪಕ್ಷಿಗಳಿಗೆ ಮಾತ್ರವಲ್ಲ, ರಸ್ತೆಯಲ್ಲಿ ಚಲಿಸುವ ವಾಹನ ಸವಾರರಿಗೂ ಯಮಸ್ವರೂಪಿಯಾಗಿದೆ. ಗಾಳಿಯಲ್ಲಿ ತೇಲಿ ಬರುವ ಈ ಹರಿತವಾದ ದಾರಗಳು ಕುತ್ತಿಗೆಗೆ ಸಿಲುಕಿ ಅನೇಕ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಮಾನವನ ಜೀವಕ್ಕೆ ಸಂಚಕಾರ ತರುವ ಇಂತಹ ಅಪಾಯಕಾರಿ ದಾರಗಳ ಬಳಕೆಯನ್ನು ನಾವಿಂದೇ ನಿಲ್ಲಿಸಬೇಕಿದೆ. ಎಂದು ಹೇಳಿದರು
ಸುಪ್ರಿಯ ಅಯ್ಯನಗೌಡರ ಅವರು ಮಾತನಾಡಿ ಮಕ್ಕಳೇ ಮತ್ತು ಪೋಷಕರೇ, ನಮ್ಮ ಹಬ್ಬದ ಆಚರಣೆಗಳು ಮತ್ತೊಬ್ಬರಿಗೆ ನೋವು ನೀಡುವಂತಿರಬಾರದು. ಚೈನೀಸ್ ಮಾಂಜಾ ದಾರಕ್ಕೆ ಗಾಜಿನ ಪುಡಿಯನ್ನು ಸವರಿರುವುದರಿಂದ ಅದು ಇಡೀ ಜೀವಸಂಕುಲಕ್ಕೆ ಮಾರಕವಾಗಿದೆ. ಇದರ ಬದಲಾಗಿ ಸಾಂಪ್ರದಾಯಿಕ, ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾದ ಶುದ್ಧ ಹತ್ತಿ ನೂಲಿನ (ಕಾಟನ್ ಥ್ರೆಡ್) ದಾರಗಳನ್ನು ಮಾತ್ರ ಉಪಯೋಗಿಸುವ ಸಂಕಲ್ಪ ಮಾಡೋಣ ಎಂದರು.
ತನುಜಾ ವಿವರಣೆಕರ ಅವರು ಮಾತನಾಡಿ ಪ್ಲಾಸ್ಟಿಕ್ ಮಾಂಜಾ ದಾರಗಳನ್ನು ತಯಾರಿಸುವಾಗ ಬಳಸುವ ರಾಸಾಯನಿಕಗಳು ಪರಿಸರ ಮಾಲಿನ್ಯಕ್ಕೆ ದೊಡ್ಡ ಕಾರಣವಾಗಿವೆ. ಒಮ್ಮೆ ಬಳಸಿ ಬಿಸಾಡಿದ ಈ ದಾರಗಳು ಚರಂಡಿಗಳಲ್ಲಿ, ಗಿಡಗಂಟಿಗಳಲ್ಲಿ ಸಿಲುಕಿ ದೀರ್ಘಕಾಲದ ಮಾಲಿನ್ಯವನ್ನು ಸೃಷ್ಟಿಸುತ್ತವೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಈ ಪ್ಲಾಸ್ಟಿಕ್ ಮಾಂಜಾವನ್ನು ತ್ಯಜಿಸಿ, ಪ್ರಕೃತಿಯನ್ನು ರಕ್ಷಿಸುವ ಜವಾಬ್ದಾರಿ ಹೊರಬೇಕಿದೆ ಒಂದು ಪ್ರತಿಪಾದಿಸಿದರು
ಪ್ರತಿಭಾ ಇನಾಮತಿ ಅವರು ಮಾತನಾಡಿ ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಗಾಳಿಪಟ ಕೊಡಿಸುವಾಗ ಚೈನೀಸ್ ಮಾಂಜಾ ದಾರವನ್ನು ಕೊಡಿಸದಂತೆ ಜಾಗೃತಿ ವಹಿಸಬೇಕು. ಶಾಲಾ ಹಂತದಲ್ಲಿಯೇ ಇಂತಹ ಜಾಗೃತಿ ಮೂಡುವುದರಿಂದ ಮುಂದಿನ ಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಬೆಳೆಯುತ್ತದೆ. ಜೀವ ಮತ್ತು ಜಗತ್ತನ್ನು ಉಳಿಸಲು ದಾರಿದೀಪ ಸಂಸ್ಥೆಯ ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸೋಣ. ಎಂದು ಹೇಳಿದರು
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಶಾಲಾ ಗುರುಗಳು ಗುರು ಮಾತೆಯರು ನೂರಾರು ಮುದ್ದು ಮಕ್ಕಳು ಉಪಸ್ಥಿತರಿದ್ದರು

ವರದಿ- ಕೃಷ್ಣಾ ಎಚ್ ಹಡಪದ
9845650612

Editor

Leave a comment