ಕರುನಾಡು ಘರ್ಜನೆ ಸುದ್ದಿ: ದಿ 02ಹರ್ಲಾಪುರ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಜನಗಳಿಗೆ ನಮ್ಮ ಸ್ವ ಸಹಾಯ ಸಂಘದ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಮಿತ್ತ ಒಕ್ಕೂಟದಲ್ಲಿ ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿಯವರು ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರ ಮೂಲಕ ಮಾಸಿಕ ಸಂತೆಯನ್ನು ಉದ್ಘಾಟಿಸಲಾಯಿತು. ಸಂತೆಯಲ್ಲಿ ಹರ್ಲಾಪುರ ಗ್ರಾಮ ಪಂಚಾಯಿತ ಮಟ್ಟದ ಸುತ್ತ ಮುತ್ತಲಿನ ಹಳ್ಳಿಯ ಸ್ವಸಹಾಯ ಸಂಘ ಸದಸ್ಯರು ತಮ್ಮ ವಿವಿಧ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಉತ್ತಮವಾದ ಆದಾಯವನ್ನು ಪಡೆದರು.
ಸಭೆಯಲ್ಲಿ ನಮ್ಮ ಸ್ವ ಸಹಾಯ ಸಂಘದ ಸದಸ್ಯರಗಳಿಗೆ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ರಾಷ್ಟ್ರೀಯ ಗ್ರಾಮೀಣ ಸಂವರ್ಧನ ಸಂಸ್ಥೆಯ ಮೂಲಕ ದೊರೆಯುವ ಎಲ್ಲಾ ಸೌಲಭ್ಯಗಳ ಕುರಿತು ಸಮಗ್ರವಾಗಿ ವಿವರಿಸಲಾಯಿತು. ಆ ಮೂಲಕ ಪ್ರತಿಯೊಬ್ಬರು ಜೀವನೋಪಾಯ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಉತ್ಪನ್ನಗಳನ್ನು ಸ್ಥಳಿಯ ಮಾರುಕಟ್ಟೆಗಳಾದ ವಾರದ ಸಂತೆ, ಮಾಸಿಕ ಸಂತೆ,ಹಾಗೂ ಡಿಜಿಟಲ್ ಮಾರುಕಟ್ಟೆಯನ್ನು ಉಪಯೋಗಿಸಿಕೊಂಡು ಉತ್ತಮವಾಗಿ ವ್ಯವಹಾರವನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢವಾಗಿ ಉತ್ತಮವಾದ ಜೀವನ ಮಟ್ಟದ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ವಿವರಿಸಲಾಯಿತು. ಹಾಗೂ ಹಳ್ಳಿ ರುಚಿಯ ಉತ್ಪನ್ನಗಳ ಮಾರಾಟ ಮತ್ತು ಮೌಲ್ಯಗಳ ಕುರಿತು ಸಮಗ್ರವಾಗಿ ವಿವರಿಸಲಾಯಿತು. ಸದರಿ ಸಂದರ್ಭದಲ್ಲಿ ಗವಿಸಿದ್ದಪ್ಪ.M. ಕಂದಗಲ್ ತಾಲೂಕ ಸಂಯೋಜಕರು ತಾಲೂಕು ಪಂಚಾಯತ್ ಗದಗ.ಶೋಭಾ ಪ್ರ. ಹಗೇದಾಳ ಸಂಪನ್ಮೂಲ ವ್ಯಕ್ತಿ ತಾಲೂಕು ಪಂಚಾಯತ್ ಗದಗಅಧ್ಯಕ್ಷರು , ಕೊಟ್ರಮ್ಮ ಹಡಪದ ಉಪಾಧ್ಯಕ್ಷರು, ಮಮತಾಜ ಬಾಲೇಸಾಬನವರು. ಕಾರ್ಯದರ್ಶಿ, ಆಸ್ಮಾ ನದಾಫ್. ಖಜಾಂಶಿ, ಕಸ್ತೂರಿ ಹೂಗಾರ. ಮತ್ತು ಸರ್ವ ಸದಸ್ಯರು, ಶೋಭಾ ಬಿದರಳ್ಳಿ, ಗಿರಿಜವ್ವ ತಳವಾರ, ಚನ್ನಮ್ಮ ಅಳಗವಾಡಿ ಹಾಗೂ ಸರ್ವ ಸದಸ್ಯರು ಮತ್ತು ಒಕ್ಕೂಟದ ಸಿಬ್ಬಂದಿಗಳು ಮುಖ್ಯ ಪುಸ್ತಕ ಬರಹಗಾರರು, ಕಾವೇರಿ ಹೂಗಾರ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ, ಸುಮಾ ಮೂಲಿಮನಿ, ಶೋಭಾ ಚಿಂಚಲಿ, ಕೃಷಿಸಖಿ, ಅನಸೂಯ ಜೈನರ, ಪಶುಸಖಿ ಲಕ್ಷ್ಮೀ ಅಣ್ಣಿಗೇರಿ ಒಕ್ಕೂಟದ ಪದಾಧಿಕಾರಿಗಳು ಗ್ರಾಮದ ಹಿರಿಯರು ಮತ್ತು ಉಪಸ್ಥಿತರಿದ್ದರು