Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ ಜಿಲ್ಲಾ ಕಾಂಗ್ರೆಸ್ ಸಾರಥ್ಯಕ್ಕೆ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಸಂಘಟನಾ ಚತುರ ಶ್ರೀ ಸಚಿನ್ ಡಿ. ಪಾಟೀಲ ಅತ್ಯಂತ ಅನಿವಾರ್ಯ: ಕೃಷ್ಣಾ ಹಡಪದ ಒತ್ತಾಯ

ಕರುನಾಡು ಘರ್ಜನೆ ಸುದ್ದಿ ಗದಗ (ಆಗಸ್ಟ್ 09): ಗದಗ ಜಿಲ್ಲೆಯ ಐತಿಹಾಸಿಕ ಸಹಕಾರಿ ಚಳವಳಿಯ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಲು, ಮುಂಬರುವ ಸಾರ್ವತ್ರಿಕ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಅತ್ಯಂತ ಬಲಿಷ್ಠವಾಗಿ ಸಂಘಟಿಸಲು ಶ್ರೀ ಸಚಿನ್ ಡಿ. ಪಾಟೀಲ…

ಕರುನಾಡು ಘರ್ಜನೆ ಸುದ್ದಿ ಗದಗ (ಆಗಸ್ಟ್ 09): ಗದಗ ಜಿಲ್ಲೆಯ ಐತಿಹಾಸಿಕ ಸಹಕಾರಿ ಚಳವಳಿಯ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಲು, ಮುಂಬರುವ ಸಾರ್ವತ್ರಿಕ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಅತ್ಯಂತ ಬಲಿಷ್ಠವಾಗಿ ಸಂಘಟಿಸಲು ಶ್ರೀ ಸಚಿನ್ ಡಿ. ಪಾಟೀಲ ಅವರ ನಾಯಕತ್ವ ಜಿಲ್ಲೆಗೆ ಅತ್ಯಂತ ಅನಿವಾರ್ಯವಾಗಿದೆ. ಆದ್ದರಿಂದ, ಎಐಸಿಸಿ ವೀಕ್ಷಕರು ಹಾಗೂ ಪಕ್ಷದ ಹೈಕಮಾಂಡ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಶ್ರೀ ಸಚಿನ್ ಡಿ. ಪಾಟೀಲ ಅವರಿಗೆ ವಹಿಸಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಷ್ಠಾವಂತ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ಪತ್ರಿಕಾ ಹೇಳಿಕೆಯ ಮೂಲಕ ಅತ್ಯಂತ ಬಲವಾಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ನಿರ್ದೇಶನದಂತೆ ಗದಗ ಜಿಲ್ಲೆಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸುತ್ತಿರುವ ಎಐಸಿಸಿ ಕಾರ್ಯದರ್ಶಿಗಳು ಹಾಗೂ ಮುಖ್ಯ ವೀಕ್ಷಕರಾದ ಶ್ರೀ ವಿವೇಕ್ ಬನ್ಸಾಲ್, ಮಾಜಿ ಶಾಸಕರಾದ ಶ್ರೀ ಮಲ್ಲಿಕಾರ್ಜುನ ಆಕ್ಕಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸತೀಶ್ ಮಹರವಾಡೆ ಮತ್ತು ಶ್ರೀ ರಾಬರ್ಟ್ ದದ್ದಾಪುರಿ ಅವರ ಉನ್ನತ ಮಟ್ಟದ ನಿಯೋಗಕ್ಕೆ ಜಿಲ್ಲೆಯ ಸಮಸ್ತ ಕಾರ್ಯಕರ್ತರ ಭಾವನೆ ಹಾಗೂ ಒಮ್ಮತದ ಆಶಯವನ್ನು ಅಧಿಕೃತವಾಗಿ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.
*ಶೈಕ್ಷಣಿಕ ಕ್ರಾಂತಿ ಹಾಗೂ ಸಾಮಾಜಿಕ ಬದ್ಧತೆಯ ಸಾಕಾರ ಮೂರ್ತಿ:*
ಶ್ರೀ ಸಚಿನ್ ಡಿ. ಪಾಟೀಲ ಅವರು ಕೇವಲ ಸಕ್ರಿಯ ರಾಜಕಾರಣಕ್ಕಷ್ಟೇ ಸೀಮಿತವಾಗದೆ, ಶಿಕ್ಷಣ ಕ್ಷೇತ್ರದ ಮೂಲಕ ಸಮಾಜದ ಬೌದ್ಧಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಅತ್ಯುನ್ನತ ಸಂಸ್ಥೆಗಳಾದ ಕೆ.ಎಚ್. ಪಾಟೀಲ (ಕೆ.ಎಚ್.ಪಿ) ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಅತ್ಯಂತ ಯಶಸ್ವಿ ಆಡಳಿತಗಾರರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಗ್ರಾಮೀಣ ಭಾಗದ ಬಡ, ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಡೊನೇಷನ್ ಇಲ್ಲದೆಯೇ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದಾರೆ. ಬಡವರ ಕಣ್ಣೀರೊರೆಸುವ ಇವರ ಈ ಶೈಕ್ಷಣಿಕ ಉಚಿತ ದಾಸೋಹ ಇಡೀ ಜಿಲ್ಲೆಯಾದ್ಯಂತ ಪ್ರತಿಯೊಬ್ಬ ನಾಗರಿಕರ ಅಪಾರ ಗೌರವ ಹಾಗೂ ಶ್ಲಾಘನೆಗೆ ಪಾತ್ರವಾಗಿದೆ ಎಂದು ಕೃಷ್ಣಾ ಎಚ್ ಹಡಪದ ಪ್ರಶಂಸಿಸಿದ್ದಾರೆ.
*ಪರಂಪರೆಯ ಹಿನ್ನೆಲೆಯಿದ್ದರೂ ತಲೆಬಾಗುವ ಅಸಾಧಾರಣ ಸರಳತೆ:*
ಕರ್ನಾಟಕದ ಸಹಕಾರಿ ರಂಗದ ಜನಕ, ಧೀಮಂತ ರಾಜಕೀಯ ಮುತ್ಸದ್ದಿ ಸನ್ಮಾನ್ಯ ದಿ. ಕೆ.ಎಚ್. ಪಾಟೀಲ ಅವರ ಮೊಮ್ಮಗನಾಗಿ, ಸತತ ನಾಲ್ಕು ಬಾರಿ ಶಾಸಕರಾಗಿ ಗದಗ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಜನಮನ್ನಣೆ ಗಳಿಸಿರುವ ಹಿರಿಯ ಧುರೀಣ ಶ್ರೀ ಡಿ.ಆರ್. ಪಾಟೀಲ ಅವರ ಸುಪುತ್ರನಾಗಿ ಹಾಗೂ ರಾಜ್ಯದ ಹೆಮ್ಮೆಯ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲ ಸಾಹೇಬರ ರಾಜಕೀಯ ನೆರಳಿನಲ್ಲಿ ಬೆಳೆದಿರುವ ಶ್ರೀ ಸಚಿನ್ ಡಿ. ಪಾಟೀಲ ಅವರಿಗೆ ಕೌಟುಂಬಿಕ ಹಿನ್ನೆಲೆ ಅಥವಾ ಅಧಿಕಾರದ ಯಾವುದೇ ಹಮ್ಮು-ಬಿಮ್ಮುಗಳಿಲ್ಲ. ಸಾಮಾನ್ಯ ಕಾರ್ಯಕರ್ತನ ಹೆಗಲ ಮೇಲೆ ಕೈಹಾಕಿ ಪಕ್ಷದ ಕೆಲಸ ಮಾಡುವ ಇವರ ಅಸಾಧಾರಣ ಸರಳತೆ ಮತ್ತು ನಿರಂತರ ಸಾರ್ವಜನಿಕ ಲಭ್ಯತೆಯೇ ಜಿಲ್ಲೆಯ ಸಮಸ್ತ ಕಾರ್ಯಕರ್ತರು ಹಾಗೂ ಲಕ್ಷಾಂತರ ಯುವ ಜನತೆಗೆ ದೊಡ್ಡ ಶಕ್ತಿಯಾಗಿದೆ.
*ಕಾರ್ಯಕರ್ತರನ್ನು ನಾಯಕರನ್ನಾಗಿ ಪರಿವರ್ತಿಸುವ ಸಂಘಟನಾ ಶಕ್ತಿ:*
ಯುವ ಕಾಂಗ್ರೆಸ್ ದಿನಗಳಿಂದ ಹಿಡಿದು ಇಂದಿನವರೆಗೂ ಜಿಲ್ಲೆಯ ಪ್ರತಿ ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿರುವ ಸಚಿನ್ ಪಾಟೀಲ ಅವರು ವಾಸ್ತವ ರಾಜಕಾರಣದ ಹಿಡಿತವಿರುವ ನಾಯಕರಾಗಿದ್ದಾರೆ. ಇವರ ನಿರಂತರ ಶ್ರಮದ ಫಲವಾಗಿಯೇ ಇಂದು ಜಿಲ್ಲೆಯ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸೇರಿದಂತೆ ನಗರಸಭೆ ಮತ್ತು ಪುರಸಭೆಗಳಲ್ಲಿ ನೂರಾರು ಸಾಮಾನ್ಯ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಗೆದ್ದು ಬಂದು ಯಶಸ್ವಿ ಜನಪ್ರತಿನಿಧಿಗಳಾಗಿ ಹೊರಹೊಮ್ಮಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಪ್ರೀತಿ ಮತ್ತು ವಿಶ್ವಾಸದಿಂದ ಬಗೆಹರಿಸಿ, ಇಡೀ ಜಿಲ್ಲಾ ಕಾಂಗ್ರೆಸ್ ಅನ್ನು ಒಂದೇ ತಾಯಿಯ ಮಕ್ಕಳಂತೆ ಮುನ್ನಡೆಸುವ ಹಾಗೂ ಯಾವುದೇ ಸಮಸ್ಯೆಗಳಿದ್ದರೂ ಕ್ಷಣಾರ್ಧದಲ್ಲಿ ನಿವಾರಿಸುವ ಅಸಾಧಾರಣ ಚಾಣಕ್ಯತನ ಇವರಲ್ಲಿದೆ. ಒಬ್ಬ ಆದರ್ಶ ಜಿಲ್ಲಾಧ್ಯಕ್ಷನಿಗೆ ಇರಬೇಕಾದ ಬಲಿಷ್ಠ ಜನಪ್ರಿಯತೆ, ಶೈಕ್ಷಣಿಕ ಕಳಕಳಿ ಮತ್ತು ಪಕ್ಷದ ಶಿಸ್ತನ್ನು ಶ್ರೀ ಸಚಿನ್ ಡಿ. ಪಾಟೀಲ ಅವರು ಸಂಪೂರ್ಣವಾಗಿ ಮೇಳೈಸಿಕೊಂಡಿದ್ದಾರೆ. ಅವರ ನೇತೃತ್ವವು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ವೈಭವದ ಶಿಖರಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ, ಪೂಜ್ಯ ವೀಕ್ಷಕರು ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರ ಒಮ್ಮತದ ಧ್ವನಿಗೆ ಕಿವಿಗೊಟ್ಟು ಸಚಿನ್ ಡಿ. ಪಾಟೀಲ ಅವರಿಗೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಸಾರಥ್ಯವನ್ನು ನೀಡಬೇಕು ಎಂದು ಕೃಷ್ಣಾ ಎಚ್. ಹಡಪದ. ಹಾಗೂ ಶ್ರೀ ಸಚಿನ್ ಡಿ. ಪಾಟೀಲರ ಸಾವಿರಾರು ಅಭಿಮಾನಿಗಳು ಮಾಧ್ಯಮಗಳ ಮೂಲಕ ಹೈಕಮಾಂಡ್‌ಗೆ ಅತ್ಯಂತ ಕಳಕಳಿಯ ಒತ್ತಾಯ ಮಾಡಿದ್ದಾರೆ.

*ಬಾಕ್ಸ್ ಹೇಳಿಕೆ*
*ಬಿ.ಕೆ. ಹರಿಪ್ರಸಾದ್ ಸಾಹೇಬರ ರಾಜಕೀಯ ಸಿದ್ಧಾಂತಕ್ಕೆ ಸಚಿನ್ ಪಾಟೀಲ ನಾಯಕತ್ವವೇ ಪೂರಕ:*
ಸದಾ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಏಳಿಗೆ ಹಾಗೂ ತಳಮಟ್ಟದ ನಿಷ್ಠಾವಂತ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವ ರಾಜ್ಯದ ಹಿರಿಯ ಮುತ್ಸದ್ದಿ ನಾಯಕ ಬಿ.ಕೆ. ಹರಿಪ್ರಸಾದ್ ಸಾಹೇಬರ ಸಿದ್ಧಾಂತ ಹಾಗೂ ಆಶಯಗಳಿಗೆ ಗದಗ ಜಿಲ್ಲೆಯಲ್ಲಿ ಶ್ರೀ ಸಚಿನ್ ಡಿ. ಪಾಟೀಲ ಅವರ ನಾಯಕತ್ವವೇ ಅತ್ಯಂತ ಸೂಕ್ತ ಹಾಗೂ ಪೂರಕವಾಗಿದೆ
— ಹನುಮಂತಪ್ಪ ರಾಂಪೂರ, ಹಿರಿಯ ಕಾರ್ಯಕರ್ತರು, ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷ.
….
2) ಸಚಿನ್ ಡಿ. ಪಾಟೀಲ ಅವರು ಕೇವಲ ಒಂದು ಐತಿಹಾಸಿಕ ಮನೆತನದ ಹೆಸರಿನಿಂದ ಗುರುತಿಸಿಕೊಂಡವರಲ್ಲ; ಅವರು ಬಿ.ಕೆ. ಹರಿಪ್ರಸಾದ್ ಅವರಂತೆಯೇ ಸಾಮಾನ್ಯ ಕಾರ್ಯಕರ್ತರನ್ನು ಪ್ರೀತಿಸುವ, ಬೂತ್ ಮಟ್ಟದಲ್ಲಿ ಪಕ್ಷ ಕಟ್ಟುವ ಶಿಸ್ತಿನ ಸಿಪಾಯಿಯಾಗಿದ್ದಾರೆ. ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗಗಳ ಸಾವಿರಾರು ವಿದ್ಯಾರ್ಥಿಗಳಿಗೆ ಯಾವುದೇ ಡೊನೇಷನ್ ಇಲ್ಲದೆಯೇ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಚಿನ್ ಅವರ ಸಾಮಾಜಿಕ ಕಳಕಳಿ ಅಪಾರವಾದದ್ದು. ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಬಲವರ್ಧನೆಗೆ ಮತ್ತು ಸರ್ವ ಜನಾಂಗದ ಒಗ್ಗಟ್ಟಿಗೆ ಸಚಿನ್ ಡಿ. ಪಾಟೀಲ ಅವರಿಗೆ ಜಿಲ್ಲಾಧ್ಯಕ್ಷ ಪಟ್ಟ ನೀಡುವುದು ಅತ್ಯಂತ ಅನಿವಾರ್ಯ
— ಅರೂಣ ರಾಂಪೂರ, ಕಾರ್ಯಕರ್ತರು, ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷ.

Editor

Leave a comment