ಕರುನಾಡು ಘರ್ಜನೆ ಸುದ್ದಿ ಗದಗ : ಮಾನ್ಯ ಶ್ರೀ ಬಿ.ಎಸ್. ನೇಮಗೌಡ ಪೊಲೀಸ್ ಅಧೀಕ ್ಷಕರು ಗದಗ ಜಿಲ್ಲೆ ಗದಗ ರವರು ಹಾಗೂ
ಶ್ರೀ
ಎಂ.ಬಿ.ಸAಕದ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರು ಹಾಗೂ ಶ್ರೀ ಜೆ.ಹೆಚ್.
ಇನಾಮದಾರ ಉಪ–ಅಧಿಕ್ಷಕರು ಗದಗ ಉಪ ವಿಭಾಗ ಗದಗ ರವರ ಮಾರ್ಗದರ್ಶನದಲ್ಲಿ ಶ್ರೀ ಧೀರಜ್ ಶಿಂಧೆ,
ಸಿಪಿಐ ಬೆಟಗೇರಿ ವೃತ್ತ ಮತ್ತು ಶ್ರೀ ಸಂಗಮೇಶ. ವ್ಹಿ. ಶಿವಯೋಗಿ, ಪಿ.ಐ. ಮುಳಗುಂದ ಪೊಲೀಸ್ ಠಾಣೆ ರವರ
ನೇತೃತ್ವದಲ್ಲಿ ಬೆಟಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ(ಕಾವಸು) ರವರಾದ ಶ್ರೀಮತಿ ನೂರಜಾನ ಸಾಬರ,
ಎಸ್.ಬಿ. ಜಾಂಬೋಟಿ. ಪಿ.ಎಸ್.ಐ (ಅ/ವಿ) ಹಾಗೂ ಸಿಬ್ಬಂದಿ ಜನರಾದ ಶ್ರೀ ಬಿ.ಎಫ್. ಯರಗುಪ್ಪಿ, ಎ.ಎಸ್.ಐ
ಬೆಟಗೇರಿ ವೃತ್ತ ಕಛೇರಿ, ಶ್ರೀ ಎಸ್.ಎ. ಗುಡ್ಡಿಮಠ, ಸಿಹೆಚ್.ಸಿ. ೯೧೯, ಐ.ಎ.ಮಿರ್ಜಾ, ಸಿ.ಹೆಚ್.ಸಿ. ೩೯೩, ಪಿ.ಆರ್.
ರಾಠೋಡ ಸಿಪಿಸಿ-೪೪೫, ಎಂ.ಎಸ್. ಗಾಣಿಗೇರ ಸಿಪಿಸಿ-೪೬೮, ಎಸ್.ಡಿ.ಬಳ್ಳಾರಿ ಸಿಪಿಸಿ-೪೮೧, ಎಂ.ಎಫ್.
ಅಸೂಟಿ ಸಿಪಿಸಿ-೧೦೭೧, ಸಿ.ಎನ್. ಮಾದರ ಸಿಪಿಸಿ-೧೨೪೧, ಪಿ.ಎಸ್. ದೊಡ್ಡಮನಿ, ಸಿಪಿಸಿ-೧೦೭೬ ಅಶೋಕ ಗದಗ
ಸಿಪಿಸಿ-೫೫೫, ನಾಗರಾಜ ಭರಡಿ ಸಿಪಿಸಿ-೭೪೩ ಹಾಗೂ ಟೆಕ್ನಿಕಲ್ ಸೆಲ್‌ನ ಶ್ರೀ ಗುರು ಬೂದಿಹಾಳ
ಎ.ಆರ್.ಎಸ್.ಐ ನೇದವರನ್ನೊಳಗೊಂಡ ತಂಡವನ್ನು ಪತ್ತೆ ಕುರಿತು ರಚಿಸಿ ಬೆಟಗೇರಿ ಪೊಲೀಸ್ ಠಾಣೆಯಲ್ಲಿ
ದಾಖಲಾದ ಗುನ್ನಾ ನಂಬರಗಳಾದ ೧] ೧೫/೨೦೨೪ ಕಲಂ: ೩೯೨ ಐಪಿಸಿ ೨] ೧೬/೨೦೨೪ ಕಲಂ: ೩೯೨ ಐಪಿಸಿ ನೇ
ಪ ್ರಕರಣಗಳಲ್ಲಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ದಿನಾಂಕ: ೧೬/೦೫/೨೦೨೪ ರಂದು ವಶಕ್ಕೆ
ಪಡೆದು ಅವನಿಂದ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಒಕ್ಕಲಗೇರಿ ಓಣಿ ಹಾಗೂ ಕಬಾಡಿ ರಸ್ತೆಯ ಆಶ್ವಿನಿ
ಆಸ್ಪತ್ರೆ ಹತ್ತಿರ ಪರ‍್ಯಾಧಿದಾರರ ಮನೆಯ ಹತ್ತಿರ ಮೋಟರಸೈಕಲ್‌ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ
ಮಾತನಾಡಿಸುತ್ತಾ ಪರ‍್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕೊರಳಲಿದ ್ದ ಸರಗಳನ್ನು ಕಿತ್ತುಕೊಂಡು ಹೋಗಿದ್ದು,
ಆ ಪೈಕಿ ಗುನ್ನಾ ನಂಬರ ೧೫/೨೦೨೪ ಕಲಂ: ೩೯೨ ಐಪಿಸಿ ರಲ್ಲಿ
೧] ಒಂದು ಕರಿಮಣಿಗಳುವಿರುವ ಬಂಗಾರದ ಮಾಂಗಲ್ಯ ಸರ ೨೦ ಗ್ರಾಂ ೩೦ ಮೀಲಿ ಗ್ರಾಂ ಅ:ಕಿ: ೮೦,೦೦೦/-
೨] ಒಂದು ಬಂಗಾರದ ಗುಂಡಿನ ಸರ ೨ ಗ್ರಾಂ ಅ:ಕಿ: ೨೦.೦೦೦/-ರೂಗಳು
ಹಾಗೂ ಬೆಟಗೇರಿ ಠಾಣೆಯ ಗುನ್ನಾ ನಂಬರ ೧೬/೨೦೨೪ ಕಲಂ: ೩೯೨ ಐಪಿಸಿ ನೇದ್ದರಲ್ಲಿ ಕಿತ್ತುಕೊಂಡು
ಹೋದ ವಸ್ತುಗಳಾದ-
೧] ಒಂದು ಕರಿಮಣಿಗಳುವಿರುವ ಸ್ವಸ್ತಿಕ್ ಲಾಕೇಟ್ ಇರುವ ಬಂಗಾರದ ಸರ ೧೧ ಗ್ರಾಂ ಅ:ಕಿ: ೫೦,೦೦೦/-ರೂಗಳು
ಹೀಗೆ ಒಟ್ಟು ೧,೫೦,೦೦೦/-ರೂಗಳ ಕಿಮ್ಮತ್ತಿನ ಬಂಗಾರದ ವಸ್ತುಗಳನ್ನು ಕಾನೂನು ಸಂಘರ್ಷಕ್ಕೆ
ಒಳಗಾದ ಬಾಲಕನಿಂದ ಜಪ್ತ ಮಾಡಿದ್ದು ಇರುತ್ತದೆ.
ಈ ಎರಡು ಪ್ರಕರಣಗಳಲ್ಲಿ ಆರೋಪಿತರಿಗೆ ಪತ್ತೆ ಹಚ್ಚಲು ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರ
ಕರ್ತವ್ಯವನ್ನು ಮಾನ್ಯ ಎಸ್.ಪಿ. ಸಾಹೇಬರು ಗದಗ ಜಿಲ್ಲೆ ರವರು ಶ್ಲಾಘಿಸಿದ್ದಾರೆ.