ಕರುನಾಡು ಘರ್ಜನೆ ಸುದ್ದಿ ಗದಗ: ನಗರದ ಗಾರ್ಗಿ ಪೇಟೆ ಓಣಿಯಲ್ಲಿರುವ ಶ್ರೀ ವಿದ್ಯಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಲಿಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹಾಗೂ ಶ್ರೀ ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಮಹಾ ಅನ್ನಪ್ರಸಾದ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಓಣಿಯ ಹಿರಿಯರು, ಯುವಕರು ಹಾಗೂ ತಾಯಂದಿರು ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು. ಈ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಹಿರಿಯರಾದ ನಾರಾಯಣ ಸೂರಿ, ಬಾಬು ನರಸಾಪುರ, ಸಂತೋಷ ಹಳ್ಳಿ, ಚಂದ್ರು ಮಾನೇದ್, ರಾಕೇಶ್ ತುಕ್ಕಾ, ರಾಘವೇಂದ್ರ ಕೆಂಚಗುಂಡಿ, ಮಂಜು ಬಡಿಗೇರ್, ಮಂಜು ಹಳ್ಳಿ, ಅಶೋಕ್ ಗಾರ್ಗಿ, ರಾಘವೇಂದ್ರ ಮಾಗುಂಡ, ಚಂದ್ರು ಮಾಗೊಂಡೆ, ಪ್ರವೀಣ್ ಗಂಜಿ, ಕಿರಣ್ ಗಂಜಿ, ವಿಠ್ಠಲ್, ಪ್ರವೀಣ್ ಅಣಿಗೇರಿ ಹಾಗೂ ಶಿವು ಬಿಜಿಲಿ ಸೇರಿದಂತೆ ಹಲವು ಗಣ್ಯರು ಹಾಗೂ ಓಣಿಯ ನಿವಾಸಿಗಳು ಉಪಸ್ಥಿತರಿದ್ದರು.
ಶ್ರೀ ವಿದ್ಯಾ ವಿನಾಯಕ ದೇವಸ್ಥಾನದ ಪದಾಧಿಕಾರಿಗಳು ಹಾಗೂ ಓಣಿಯ ಮುಖಂಡರ ನೇತೃತ್ವದಲ್ಲಿ ನಡೆದ ಈ ಮಹಾ ಅನ್ನಪ್ರಸಾದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
– ಶ್ರೀ ವಿದ್ಯಾ ವಿನಾಯಕ ದೇವಸ್ಥಾನದ ಪದಾಧಿಕಾರಿಗಳು