ಕರುನಾಡು ಘರ್ಜನೆ ಸುದ್ದಿ:ಬೆಂಗಳೂರು ದೇಶದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಪ್ರಜಾಪ್ರಭುತ್ವ ಮತ್ತು ನಾಗರಿಕರ ಬೆನ್ನಿಗೆ ಚೂರಿ ಹಾಕಿದ್ದಾರೆ, ಇವರನ್ನು ತಕ್ಷಣ ವಜಾಗೊಳಿಸಬೇಕೆಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಕೋಶ ವೇಕ್ತ ಪಡಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಅವರು
The Indian Express ನಡೆಸಿದ ತನಿಖೆಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ, ಮತದಾರರ ಪಟ್ಟಿ ಮತ್ತು ಚುನಾವಣಾ ಡೇಟಾ ನಿರ್ವಹಣೆ ಕುರಿತು ಹಲವು ಗಂಭೀರ ಅಂಶಗಳು ಬಹಿರಂಗವಾಗಿವೆ.
ಆಯೋಗದೊಳಗೇ ಭಿನ್ನಾಭಿಪ್ರಾಯಗಳು
ಮೂರು ಸದಸ್ಯರ ಚುನಾವಣಾ ಆಯೋಗದಲ್ಲಿ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಸುಮಾರು 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಆಕ್ಷೇಪಗಳನ್ನು ದಾಖಲಿಸಿದ್ದಾರೆ ಎಂದು ವರದಿ ತಿಳಿಇರುವುದು ಅತ್ಯಂತ ಗಂಭೀರ ಮತ್ತು ಚಿಂತಾಜನಕ ವಿಷಯವಾಗಿದೆ ಯಂದು ಹೇಳಿದ್ದಾರೆ.
ಹೊಸ ಮತದಾರರ ನೋಂದಣಿಗಾಗಿ ಬಳಸುವ Form-6ನಲ್ಲಿ ಹಿಂದಿನ SIR ಮತದಾರರ ಪಟ್ಟಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಕೇಳುವ ರೀತಿಯಲ್ಲಿ ಬದಲಾವಣೆ ಮಾಡಲಾಗಿತ್ತು.
ಈ ಬದಲಾವಣೆಯ ಕಾನೂನುಬದ್ಧತೆಯ ಬಗ್ಗೆ ಇಬ್ಬರು ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ಹೇಳುತ್ತದೆ.
ಮತದಾರರ ಪಟ್ಟಿಯ ಡೇಟಾಬೇಸ್ ಮತ್ತು ಅದರ ನಿರ್ವಹಣೆಯನ್ನು ಕೇಂದ್ರೀಕರಿಸುವ ಪ್ರಕ್ರಿಯೆ ಕುರಿತು ಆಯೋಗದೊಳಗೇ ಆತಂಕ ವ್ಯಕ್ತವಾಗಿದೆ. ತಳಲಮಟ್ಟದ ಅಧಿಕಾರಿಗಳ ನಿರ್ಧಾರಗಳ ಮೇಲೆ ಕೇಂದ್ರೀಕೃತ IT ವ್ಯವಸ್ಥೆಯ ಪ್ರಭಾವದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ECINet ವ್ಯವಸ್ಥೆಯ ಮೂಲಕ ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಯ ನಿರ್ವಹಣೆ ಮತ್ತು ಬದಲಾವಣೆ ಹೇಗೆ ನಡೆಯುತ್ತದೆ ಎಂಬುದರ ಕುರಿತು ಹೆಚ್ಚಿನ ಪಾರದರ್ಶಕತೆ ಅಗತ್ಯ ಎಂಬ ಪ್ರಶ್ನೆ ಎದುರಾಗಿದೆ.
ಮತದಾರರ ಡೇಟಾ ನಿರ್ವಹಣೆ, IT ವ್ಯವಸ್ಥೆ ಮತ್ತು ಕೆಲಸದ ಹಂಚಿಕೆ ಕುರಿತ ವಿಷಯಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರು Cabinet Secretaryಗೆ ಪತ್ರ ಬರೆದಿದ್ದಾರೆ ಎಂದು ವರದಿ ತಿಳಿಸುತ್ತದೆ.
ಅದೇರೀತಿ ಪಶ್ಚಿಮ ಬಂಗಾಳದಲ್ಲಿ ಸುಮಾರು 16.10 ಲಕ್ಷ ಮತದಾರರ ವಿರುದ್ಧ appeals ಸಲ್ಲಿಕೆಯಾದ ಪ್ರಕ್ರಿಯೆಯ ಕುರಿತು ಕೂಡ The Indian Express ಪ್ರಶ್ನೆಗಳನ್ನು ಎತ್ತಿದೆ. ಈ appeals ಯಾರು ಮತ್ತು ಯಾವ ಪ್ರಕ್ರಿಯೆಯ ಮೂಲಕ ಸಲ್ಲಿಸಿದರು ಎಂಬುದು ಸ್ಪಷ್ಟವಾಗಬೇಕಿದೆ.
7. Full Commission ಸಭೆಗಳ ಕುರಿತು ಪ್ರಶ್ನೆ
ಚುನಾವಣಾ ಆಯೋಗಕ್ಕೆ ನಮ್ಮ 6 ನೇರ ಪ್ರಶ್ನೆಗಳು
1. ಇಬ್ಬರು ಚುನಾವಣಾ ಆಯುಕ್ತರು 14 ಬಾರಿ ಆಕ್ಷೇಪ ದಾಖಲಿಸಿರುವುದಾದರೆ, ಆ ಆಕ್ಷೇಪಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಲಾಗುವುದೇ?
2. Form-6ನಲ್ಲಿ ಮಾಡಲಾದ ಬದಲಾವಣೆ ಯಾವ ಕಾನೂನು ಮತ್ತು ನಿಯಮದ ಆಧಾರದ ಮೇಲೆ ಮಾಡಲಾಯಿತು?
3. ಮತದಾರರ ಡೇಟಾಬೇಸ್‌ನ ಅಂತಿಮ ನಿಯಂತ್ರಣ ಯಾರ ಕೈಯಲ್ಲಿದೆ ಮತ್ತು ಯಾವುದೇ ಬದಲಾವಣೆಗೆ ಸಂಪೂರ್ಣ audit trail ಇದೆಯೇ?
4. ECINet ವ್ಯವಸ್ಥೆಯು ನೆಲಮಟ್ಟದ ಚುನಾವಣಾ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸಲು ಅಥವಾ override ಮಾಡಲು ಸಾಧ್ಯವೇ?
5. ಪಶ್ಚಿಮ ಬಂಗಾಳದ 16.10 ಲಕ್ಷ appeals ಸಲ್ಲಿಕೆಯ ಸಂಪೂರ್ಣ ದಾಖಲೆ ಮತ್ತು ಪ್ರಕ್ರಿಯೆಯನ್ನು ಸಾರ್ವಜನಿಕಗೊಳಿಸಲಾಗುವುದೇ?
6. ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಲು, ಈ ಎಲ್ಲಾ ಆಕ್ಷೇಪಗಳು ಮತ್ತು ನಿರ್ಧಾರಗಳ ಕುರಿತು ಚುನಾವಣಾ ಆಯೋಗವು ಸ್ವತಂತ್ರ ಹಾಗೂ ಸಂಪೂರ್ಣ ಪಾರದರ್ಶಕ ವಿವರಣೆ ನೀಡಲು ಸಿದ್ಧವಿದೆಯೇ?
ನಾವು ಚುನಾವಣಾ ಆಯೋಗದ ಸಂವಿಧಾನಾತ್ಮಕ ಸ್ವಾಯತ್ತತೆಯನ್ನು ಗೌರವಿಸುತ್ತೇವೆ. ಆದರೆ ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಪಾರದರ್ಶಕತೆ, ಕಾನೂನುಬದ್ಧತೆ ಮತ್ತು ಹೊಣೆಗಾರಿಕೆ ಅತ್ಯಗತ್ಯ.
ಆದ್ದರಿಂದ The Indian Express ತನಿಖೆಯಲ್ಲಿ ಬಹಿರಂಗವಾಗಿರುವ ವಿಷಯಗಳ ಕುರಿತು ಚುನಾವಣಾ ಆಯೋಗವು ಸಾರ್ವಜನಿಕರಿಗೆ ಸ್ಪಷ್ಟ ಉತ್ತರ ನೀಡಬೇಕು.
ಮತದಾರರ ಪಟ್ಟಿ ಕೇವಲ ಆಡಳಿತಾತ್ಮಕ ದಾಖಲೆ ಅಲ್ಲ — ಅದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕಿನ ಆಧಾರವಾಗಿದೆ.
ಮತದಾರರ ಹಕ್ಕು ರಕ್ಷಿಸಬೇಕು.
ಮತದಾರರ ಪಟ್ಟಿ ಪಾರದರ್ಶಕವಾಗಬೇಕು.
ಚುನಾವಣಾ ಪ್ರಕ್ರಿಯೆಯ ಮೇಲಿನ ಜನರ ವಿಶ್ವಾಸ ಉಳಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.