Tuesday, 3 November 2026 Karunadu Gharjane — Edition

Karunadu Gharjane

News website

ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಜಿಲ್ಲೆ ಸಿರುಗುಪ್ಪ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ ಜಿಲ್ಲೆ ಬೆಂಗಳೂರು I ಜನರ ಜೇಬಿಗೆ ಕತ್ತರಿ, : ಹಾಲು–ಬಸ್ ದರ ಏರಿಕೆಗೆ ಮುಂದಾದ ಸರ್ಕಾರದ ಕ್ರಮ ಖಂಡನೀಯ – ವೆಲ್ಫೇರ್ ಪಾರ್ಟಿ ಗದಗ ಕರುನಾಡು ಘರ್ಜನೆ ಪತ್ರಿಕೆ ಹಾಗೂ ಕೆ.ಜಿ. ನ್ಯೂಸ್ 5ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಕಲ ಸಿದ್ಧತೆ – ನವೆಂಬರ್ 1ರಂದು ಅದ್ಧೂರಿ ಸಮಾರಂಭಕ್ಕೆಸರ್ವರಿಗೂ ಹೃತ್ಪೂರ್ವಕ ಸ್ವಾಗತ ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಅಪರಾಧ ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ. ಗದಗ ಗದಗ I ಗದಗ ನಗರದ ವಿವಿಧೆಡೆ ನೀರು ಪೂರೈಕೆ. ಗದಗ ಗದಗ I ದೀಪಾವಳಿ ಹಬ್ಬದ ಪ್ರಯುಕ್ತ 340 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಜಿಲ್ಲೆ ಸಿರುಗುಪ್ಪ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ ಜಿಲ್ಲೆ ಬೆಂಗಳೂರು I ಜನರ ಜೇಬಿಗೆ ಕತ್ತರಿ, : ಹಾಲು–ಬಸ್ ದರ ಏರಿಕೆಗೆ ಮುಂದಾದ ಸರ್ಕಾರದ ಕ್ರಮ ಖಂಡನೀಯ – ವೆಲ್ಫೇರ್ ಪಾರ್ಟಿ ಗದಗ ಕರುನಾಡು ಘರ್ಜನೆ ಪತ್ರಿಕೆ ಹಾಗೂ ಕೆ.ಜಿ. ನ್ಯೂಸ್ 5ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಕಲ ಸಿದ್ಧತೆ – ನವೆಂಬರ್ 1ರಂದು ಅದ್ಧೂರಿ ಸಮಾರಂಭಕ್ಕೆಸರ್ವರಿಗೂ ಹೃತ್ಪೂರ್ವಕ ಸ್ವಾಗತ ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ.
ಅಪರಾಧ

ಗದಗ I ನಾಲ್ಕು ಕಳ್ಳತನ ಪ್ರಕರಣ ಭೇದಿಸಿದ ಲಕ್ಷ್ಮೇಶ್ವರ ಪೊಲೀಸರು! ಐವರು ಆರೋಪಿಗಳ ಬಂಧನ – 2.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ.

ಕರುನಾಡು ಘರ್ಜನೆ ಸುದ್ದಿ GADAG : ಲಕ್ಷ್ಮೇಶ್ವರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ನಡೆದಿದ್ದ ನಾಲ್ಕು ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಲಕ್ಷ್ಮೇಶ್ವರ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 1.30 ಲಕ್ಷ ರೂ. ಮೌಲ್ಯದ…

ಕರುನಾಡು ಘರ್ಜನೆ ಸುದ್ದಿ GADAG : ಲಕ್ಷ್ಮೇಶ್ವರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ನಡೆದಿದ್ದ ನಾಲ್ಕು ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಲಕ್ಷ್ಮೇಶ್ವರ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 1.30 ಲಕ್ಷ ರೂ. ಮೌಲ್ಯದ ಬಂಗಾರದ ಚೈನ್ ಹಾಗೂ 1,18,500 ರೂ. ನಗದು ಹಣ ಸೇರಿದಂತೆ ಒಟ್ಟು 2,48,500 ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ನಾಲ್ಕು ಪ್ರಕರಣಗಳ ಹಿನ್ನೆಲೆ

2026ರ ಫೆಬ್ರವರಿ 10ರಂದು ಹಾವೇರಿಯಿಂದ ಲಕ್ಷ್ಮೇಶ್ವರಕ್ಕೆ ಬಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಕೈಚೀಲದಲ್ಲಿದ್ದ ಸುಮಾರು 15 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿತ್ತು. ಈ ಕುರಿತು ಫೆಬ್ರವರಿ 19ರಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನು ಮೇ 6ರಂದು ಸೋಗಿಹಾಳ ಗ್ರಾಮದ ಹೊರವಲಯದ ಶೆಡ್‌ನಲ್ಲಿ ಕಟ್ಟಿದ್ದ ಎರಡು ಎತ್ತುಗಳು ಹಾಗೂ ಒಂದು ಹಸುವನ್ನು ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ಮೇ 10ರಂದು ಪ್ರಕರಣ ದಾಖಲಾಗಿತ್ತು.

ಅದೇ ರೀತಿ ಆಗಸ್ಟ್ 13ರಂದು ಲಕ್ಷ್ಮೇಶ್ವರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ರೈತನೊಬ್ಬ ಮಾರಾಟ ಮಾಡಿ ಬಂದಿದ್ದ 77,500 ರೂ. ನಗದು ಹಣ ಕಳ್ಳತನವಾಗಿತ್ತು. ಆಗಸ್ಟ್ 14ರಂದು ಪ್ರಕರಣ ದಾಖಲಿಸಲಾಗಿತ್ತು.

ಸೆಪ್ಟೆಂಬರ್ 24ರಂದು ಗುತ್ತಲಕ್ಕೆ ತೆರಳುವ ಬಸ್ ಹತ್ತುವ ಸಂದರ್ಭದಲ್ಲಿ ಮತ್ತೊಬ್ಬ ರೈತನ ಜೇಬು ಕತ್ತರಿಸಿ 48 ಸಾವಿರ ರೂ. ಹಣ ಕಳ್ಳತನ ಮಾಡಲಾಗಿತ್ತು. ಈ ಕುರಿತು ಕೂಡ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಕಾರ್ಯಾಚರಣೆ – ಐವರು ಅಂದರ್

ನಾಲ್ಕು ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಲು ಗದಗ ಉಪವಿಭಾಗದ ಡಿವೈಎಸ್ಪಿ ಶ್ರೀ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಶಿರಹಟ್ಟಿ ವೃತ್ತದ ಸಿಪಿಐ ಶ್ರೀ ಬಿ.ವಿ. ನ್ಯಾಮಗೌಡ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.

ಪಿಎಸ್‌ಐಗಳಾದ ಶ್ರೀ ಆನಂದ ಸಿ. ಕ್ಯಾರಕಟ್ಟಿ ಹಾಗೂ ಶ್ರೀ ಟಿ.ಕೆ. ರಾಠೋಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ

ಅನೀಲ @ ಗಂಗ್ಯಾ, 40 ವರ್ಷ, ಹುಬ್ಬಳ್ಳಿ.

ಅಲ್ತಾಫ್, 33 ವರ್ಷ, ತಡಸ, ಕುಂದಗೋಳ ತಾಲೂಕು.

ನೂರಬಾದಶಹ, 33 ವರ್ಷ, ತಡಸ, ಕುಂದಗೋಳ ತಾಲೂಕು.

ಇಮಾಮಹುಸೇನ, 23 ವರ್ಷ, ತಡಸ, ಕುಂದಗೋಳ ತಾಲೂಕು.

ಸಾಹಿಲ್ ಅಕ್ರಂ, 23 ವರ್ಷ, ನಿಟುವಳ್ಳಿ, ದಾವಣಗೆರೆ.

ಬಂಧಿತ ಆರೋಪಿಗಳಿಂದ 1,30,000 ರೂ. ಮೌಲ್ಯದ ಬಂಗಾರದ ಚೈನ್ ಹಾಗೂ 1,18,500 ರೂ. ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ಇಲಾಖೆಗೆ ಎಸ್ಪಿ ಮೆಚ್ಚುಗೆ

ಈ ನಾಲ್ಕು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಶಿರಹಟ್ಟಿ ವೃತ್ತದ ಸಿಪಿಐ ಬಿ.ವಿ. ನ್ಯಾಮಗೌಡ, ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐಗಳಾದ ಆನಂದ ಸಿ. ಕ್ಯಾರಕಟ್ಟಿ, ಟಿ.ಕೆ. ರಾಠೋಡ, ಎಎಸ್‌ಐ ವೈ.ಸಿ. ದೊಡ್ಡಮನಿ ಹಾಗೂ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಮತ್ತು ಗದಗ ತಾಂತ್ರಿಕ ವಿಭಾಗದ ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದಾರೆ.

ಪೊಲೀಸ್ ತಂಡದ ಉತ್ತಮ ಕಾರ್ಯಾಚರಣೆಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಲ್ಕು ಕಳ್ಳತನ ಪ್ರಕರಣಗಳನ್ನು ಭೇದಿಸಿ ಐವರು ಆರೋಪಿಗಳನ್ನು ಬಂಧಿಸುವ ಮೂಲಕ ಲಕ್ಷ್ಮೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದ್ದಾರೆ.

Editor

Leave a comment