ಕರುನಾಡು ಘರ್ಜನೆ ಸುದ್ದಿ 5 ಗದಗ ಬೆಟಗೇರಿ ಶಹರದ ಸಮಸ್ತ ಮುಸ್ಲಿಂ ಭಾಂದವರು ಮತ್ತು ಅಂಜುಮನ್ ಸಂಸ್ಥೆಯ ಸದಸ್ಯರು (ಮತದಾರರು) ತಮ್ಮಲ್ಲಿ ವಿನಂತಿ ಏನೆಂದರೆ ಗದಗ ಶಹರದಲ್ಲಿ ಅತ್ಯಂತ ದೊಡ್ಡ ಮುಸ್ಲಿಂ ಸಮುದಾಯ ಹೊಂದಿರುವಂತಹ ನಗರದಲ್ಲಿ ಅಂಜುಮನ್ ಸಂಸ್ಥೆ ಕಳೆದ 15 ವರ್ಷ ಗಳಿಂದ ಹೊಸ ಪದಾಧಿಕಾರಿಗಳ ಚುನಾವಣೆ ಆಗದ ಪದಾಧಿಕಾರಿಗಳು ಇಲ್ಲದೆ ಅಂಜುಮನ್ ಸಂಸ್ಥೆ ಆಮೆ ಗತಿಯಲ್ಲಿ ಸಾಗುತ್ತಿರುವುದು ಖಂಡನೀಯ ವಿಷಯ ಆಗಿರುತ್ತದೆ. ಅಂಜುಮನ್ ಸಂಸ್ಥೆಗೆ ಚುನಾವಣೆ ಪ್ರಕ್ರಿಯೆ ಮಾಡದೆ ಅಂಜುಮನ್ ಸಂಸ್ಥೆಗೆ ಅಡಾಕ್ ಕಮೀಟಿ ರಚಿಸಿ 10 ವರ್ಷ ಕಳೆದಿದೆ. ಅಂಜುಮನ್ ಕಮೀಟಿಗೆ ಚುನಾವಣೆ ನಡೆಸದೇ 15 ವರ್ಷಗಳೇ ಕಳೆದಿವೆ. ಅಡಾಕ್ ಕಮೀಟಿಗೆ ಕೇವಲ 11 ತಿಂಗಳು ಅಧಿಕಾರವಿದ್ದು , ಆ ಅವಧಿ ಮುಗಿದು ವರ್ಷಗಳೇ ಕಳೆದರು ಚುನಾವಣೆ ಘೋಷಿಸಬೇಕಾದ 6 ಬೋರ್ಡ ಇಲಾಖೆ ಅಧಿಕಾರಿಗಳು ಹಾಗೂ ಬೋರ್ಡ ಚೇರಮನ್ನರು ರಾಜಕೀಯ ಒತ್ತಡಕ್ಕೆ ಸಿಲುಕಿ ಮೌನ ವಹಿಸಿ ತಟಸ್ಥ ನೀತಿ ಅನುಸರಿಸುತ್ತಿರುವುದರಿಂದ ಗದಗ ಶಹರದ ಮುಸ್ಲಿಂ ಸಮಾಜಕ್ಕೆ ಸರ್ಕಾರದ ಯೋಜನೆಗಳು ಸದುಪಯೋಗ ಪಡೆದುಕೊಳ್ಳುವಲ್ಲಿ ಸಂಪೂರ್ಣ ವಿಪಲವಾಗಿರುತ್ತದೆ .ಆದರೆ ಅಂಜುಮನ್ ಸಂಸ್ಥೆಯ ಚುನಾವಣೆ ಆಗ್ರಹಿಸಿ ಸಾಕಷ್ಟು ಸಂಘ ಸಂಸ್ಥೆಗಳು ಅನೇಕ ಬಾರಿ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಆಡಳಿತ (CEO) ಮತ್ತು ಗದಗ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ವಿನಂತಿಸಿ ಕೊಂಡಿರುತ್ತಾರೆ. ಆದರೆ ಸದರಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಚುನಾವಣೆ ಪ್ರಕ್ರಿಯೆ ಮುಂದುಡುತ್ತಾ ಅಡಕ್ ಕಮಿಟಿ ಮುಂದುವರಿಸಿಕೊಂಡು ಬಂದಿರುವುದು ಈಗಾಗಲೇ ಗದಗ ಶಹರದ ಜನತೆಗೆ ಅವಗಾಹನೆಗೆ ಬಂದಿರುವ ವಿಷಯವಾಗಿದೆ. ಅಲ್ಲದೆ ಸದರಿ ವಿಷಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೋದ್ಯಮ ದಲ್ಲಿ,ಚರ್ಚೆಗೆ ಬಂದಿರುವ ವಿಷಯ ತಮಗೆ ಈಗಾಗಲೇ ತಿಳಿದಿದ್ದು ಇರುತ್ತದೆ. ಆದ್ದರಿಂದ ಅವಳಿ ನಗರದ ಮುಸ್ಲಿಂ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಉನ್ನತೀಕರಣ ಹಿತದೃಷ್ಟಿಯಿಂದ ಹಾಗೂ ಅಭಿವೃದ್ಧಿಗಾಗಿ ಗದಗ- ಬೆಟಗೇರಿ ಅಂಜುಮನ್-ಎ ಇಸ್ಲಾಂ ಸಂಸ್ಥೆಯನ್ನು ಗಟ್ಟಿಗೊಳಿಸಿ( ಬಲ ಪಡಿಸುವ) ಅವಶ್ಯಕತೆ ಇದ್ದುದರಿಂದ ನೂತನ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಆರಂಭಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಂಜುಮನ್ ಸಂಸ್ಥೆಯ ದೈಯೋದ್ದೇಶ್ ಪೂರ್ಣಗೊಳಿಸಲು ಈ ಮನವಿ ಸಲ್ಲಿಸುತ್ತಿದ್ದು, ಈ ಮನವಿ ಪಡೆದ ತಾವು ತುರ್ತಾಗಿ ಚುನಾವಣೆ ಪ್ರಕ್ರಿಯೆ ನಡೆಸಬೇಕು ಮತ್ತು 15 ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಪಡಿಸಿ ಒಂದು ತಿಂಗಳು ಸದಸ್ಯತ್ವ ಅಭಿಯಾನ ನಡೆಸಿ, ಚುನಾವಣಾ ಅಧಿಕಾರಿಗಳನ್ನು ನೇಮಿಸಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
ಸಂಸ್ಥೆಯ ಅಡಾಕ್ ಕಮೀಟಿ ಅವಧಿ ಮುಗಿದರೂ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸದಿರುವ ವಕ್ಫ್ ಅಧಿಕಾರಿಗಳು ಹಾಗೂ ಚೇರ್ಮನರ ವಿರುದ್ಧ ಈಗಾಗಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೂಡಲೇ ಸಂಸ್ಥೆಗೆ ಚುನಾವಣೆ ಘೋಷಿಸಲು ಹದಿನೈದು ದಿನಗಳ ಗಡುವು ನೀಡುತಿದ್ದೇವೆ. ಚುನಾವಣೆಗೆ ಸಂಬಂಧ ಪಟ್ಟ ತಾಂತ್ರಿಕ ಸಮಸ್ಯೆಗಳು ನಿವಾರಿಸಿ, ಚುನಾವಣೆ ಘೋಷಿಸದಿದ್ದರೆ ವಕ್ಫ್ ಆಫೀಸ್ ಗೆ ಬೀಗ ಜಡೆದು ಕಛೇರಿ ಎದುರು ನಿರಂತರ ಧರಣಿ ನಡೆಸಲಾಗುವುದು ಮತ್ತು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಲಾಗುವುದು ಎಂದು ತಮ್ಮ ಅವಗಾನೆಗೆ ಈ ಮನವಿ ಸಲ್ಲಿಸಿದ್ದು ಇರುತ್ತದೆ.
ಆದ್ದರಿಂದ ದಯಾಳುಗಳಾದ ತಾವು ಇಲ್ಲಿಯವರೆಗೆ ನಡೆದ ವಿಳಂಬವನ್ನು ಮನಗೊಂಡು ನಿಷ್ಠೆಯಿಂದ ಈಗಲಾದರೂ ಚುನಾವಣೆ ಘೋಷಣೆ ಮಾಡಿ. ಪಾರದರ್ಶಕ ಆಡಳಿತಕ್ಕೆ ಮಾದರಿ ಅಗಬೇಕು ಎಂದು ಗದಗಿನ ಎಲ್ಲ ಸಮಸ್ತ ಮುಸ್ಲಿಂ ಬಾಂಧವರು ಪರವಾಗಿ ಕಳಕಳಿಯ ವಿನಂತಿ. ಎಂದರು.ಈ ಸಂದರ್ಭದಲ್ಲಿ ಗದುಗಿನ ಸಮಾಜದ ಹಿರಿಯರು ಮತ್ತು ಕಿರಿಯರು ಭಾಗವಹಿಸಿದ್ದರು.