ಕರುನಾಡು ಘರ್ಜನೆ ಸುದ್ದಿ:
ಗದಗ ೭: ಗದಗ-ಬೆಟಗೇರಿ ಮುಸ್ಲಿಂ ಸಮುದಾಯ ನಿಯೋಜಿತ ಸಮಿತಿ ಗದಗ ವತಿಯಿಂದ ಇಂದು ಜಿಲ್ಲಾ ಮಾನ್ಯ ವಕ್ಫ ಜಿಲ್ಲಾಧ್ಯಕ್ಷರಿಗೆ ಗದಗ-ಬೆಟಗೇರಿ ಅಂಜುಮನ್ –ಏ-ಇಸ್ಲಾಂ ಸಂಸ್ಥೆಗೆ ಚುನಾವಣೆಗೆ ಘೋಷಿಸಲು ಮನವಿ ಸಲ್ಲಿಸಲಾಯಿತು.

ಮನವಿ ಅರ್ಜಿ ಸ್ವೀಕರಿಸಿದ ಮಾನ್ಯ ಅಧ್ಯಕ್ಷರು ಸುಮಾರು ವರ್ಷಗಳಿಂದ ಗದಗ ಅಂಜುಮನ್ ಸಂಸ್ಥೆಗೆ ಚುನಾವಣೆ ನಡೆದಿಲ್ಲ ಈ ಹಿಂದೆ ಮನವಿಗಳು ಬಂದಿದ್ದು ಈಗ ಗದಗ-ಬೆಟಗೇರಿ ನಗರದ ೫೦ಕ್ಕೂ ಹೆಚ್ಚು ಜಮಾತಗಳು ತಮ್ಮ ಮನವಿ ಪತ್ರವನ್ನು ಈ ಒಂದು ನಿಯೋಜಿತ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನೀಡಿದ್ದೀರಿ ಆದ್ದರಿಂದ ಚುನಾಯಿತ ಸಿದ್ದತೆಗಳನ್ನು ನಡೆಸಲು ಹಿಂದಿನ ಕಮೀಟಿಯವರು ಅರ್ಜಿ ನಮೂನೆ ೪೨ ನ್ನು ಸಲ್ಲಿಸಿರುತ್ತಾರೆ. ಮುಂದಿನ ಜಿಲ್ಲಾ ಬೋರ್ಡನ ಸಭೆಯಲ್ಲಿ ವಿಷಯನ್ನು ತೆಗೆದುಕೊಂಡು ರಾಜ್ಯ ಸಮಿತಿಗೆ ಕಳುಹಿಸಿ ಬೈಲಾ ಅನುಮೋದನೆ ಪಡೆದುಕೊಂಡು ಮುಂದಿನ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ನಮ್ಮ ವಕ್ಪ ಆಫೀಸರ್ ಅರ್ಪಿಸುವರು ಆದಷ್ಟು ಬೇಗ ಈ ಚುನಾವಣೆ ಪ್ರಕ್ರಿಯೆಉ ನಡೆಸುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಮಸಜ್ಜೀದ ಎ ಇಸ್ಮಾಯಲ್, ಅಬೂಬಕರ ಮಜ್ಜೀದ, ಬೆಟಗೇರಿ ಗದಗ ರಹೆಮಾನಶಾವಲಿ ದರ್ಗಾ ಮತ್ತು ಮಸಜೀದ ಕಮೀಟಿ, ಅಲ್ ಅರಪಾತ ಜಮಾತ ಟ್ರಸ್ಟ್, ಯಾಸೀರ ಏಜ್ಯುಕೇಶನಲ್ ಆ್ಯಂಡ್ ಸೋಸಿಯಲ್ ವೆಲ್ಫೇರ್ ಟ್ರಸ್ಟ್ ಯಾಸೀರ ಮಸಜೀದ ಮುಸ್ಲಿಂ ಜಮಾತ, ಮಸಜೀದ ಎ ರಹತ, ನೂರಾನಿ ಮಸ್ಜೀದ ಮುಸ್ಲಿಂ ಜಮಾತ, ಖಾನಬಾಗ ಮುಸ್ಲಿಂ ಜಮಾತ, ಅಕ್ಷಾ ಮಜೀದ ಜಮಾತ್, ಮುಬಾರಕ ಮಸಜೀದ, ಇಸ್ಲಾಮಿಯಾ ಜಮಾತ್, ನೌಜವಾನ ಯಂಗ್ ಕಮೀಟಿ, ರಹಮನಿಯಾ ಮಜ್ಜೀದ ಜಮಾತ್, ಅಲ್ಲಾ ನರಗರಡಿ ಮುಸ್ಲಿಂ ಜಮಾತ್, ಅಹದ್ ಜಮಾತ, ನಿಜಾಮುದ್ದೀನ ಜಮಾತ, ಮುಕ್ತುಮ್ ಮಜ್ಜೀದ್, ಈ ಎಲ್ಲ ಜಮಾತಿನವರು ಮತ್ತು ಈ ಹೋರಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು.