ಕರುನಾಡು ಘರ್ಜನೆ ಸುದ್ದಿ ಗದಗ ೧೨: ಅಗಷ್ಟ್ ೧೭ ರಿಂದ ಉತ್ತರ ಕರ್ನಾಟಕ ಎಸ್.ಎಸ್.ಎಲ್.ಡಿ.ಡಿ.ಎಂ.ಕೆ ಸಂಘದ ವತಿಯಿಂದ ಕೃತಪುರ ಉತ್ಸವ ೨೦೨೪, ೩ನೇ ಅಧಿವೇಶನ ನಡೆಯಲಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್. ಕೆ ಪಾಟೀಲರು ಉದ್ಘಾಟನೆ ಮಾಡಲಿದ್ದಾರೆ. ದಿವ್ಯ ಸಾನಿಧ್ಯವನ್ನು ಹಾಳಕೇರಿ ಸಂಸ್ಥಾನ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿಗಳು ವಹಿಸಿಕೊಳ್ಳಲಿದ್ದು, ಶಾಸಕ ಜಿ. ಎಸ್ ಪಾಟೀಲ, ಮಾಜಿ ಶಾಸಕ ಡಿ. ಆರ್ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಉತ್ತರ ಕರ್ನಾಟಕದ vಸಂಘದ ಅಧ್ಯಕ್ಷ ಅಮರೇಶ ಹಿರೇಮಠ ಮಾಹಿತಿ ನೀಡಿದರು.
ನಗರದ ಎಪಿಎಂಸಿ ಯಾರ್ಡಿನಲ್ಲಿರುವ ಕೆ. ಎಚ್ ಪಾಟೀಲ ಸಭಾಭವನದಲ್ಲಿ ಸೋಮವಾರ ಕೃತಪುರ ಉತ್ಸವ ೨೦೨೪ರ ಲೋಗೋ ಅನಾವರಣಗೊಳಿಸಿ ಮಾತನಾಡಿದ ಅವರು, ಅಗಷ್ಟ್ ೧೭ ರಂದು ಬೆಳಿಗ್ಗೆ ಪೂಜಾ ಸಮಾರಂಭ, ದ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ನಂತರ ಭವ್ಯ ಮೆರವಣಿಗೆ, ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಗುವುದು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪ.ಪೂ. ಡಾ: ಕಲ್ಲಯ್ಯಜ್ಜನವರಿಗೆ ತುಲಾಭಾರ ಹಾಗೂ ಕೃತಪುರ ಉತ್ಸವ ೨೦೨೪ರ ಉದ್ಘಾಟನೆ ಹಾಗೂ ಲಕ್ಕಿ ಡ್ರಾ, ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗುವವು ಎಂದು ಮಾಹಿತಿ ನೀಡಿದರು.
ಅಗಷ್ಟ್ ೧೮ರಂದು ವಸ್ತು ಪ್ರದರ್ಶನ ಮಳಿಗೆಗಳ ವೀಕ್ಷಣೆ, ಸಂಘಟನೆಯ ಬಗ್ಗೆ ವಿಚಾರ ವಿನಿಮಯ, ಉಪನ್ಯಾಸ ಪ್ರಧಾನ ಕಾರ್ಯದರ್ಶಿಗಳ ಅನಿಸಿಕೆ ಅಭಿಪ್ರಾಯ ಹಾಗೂ ಸವಿ ನೆನಪಿನ ಕಾಣಿಕೆ ವಿತರಣೆ, ಎರಡನೇ ದಿನದ ಸಮಾರೋಪ ಸಮಾರಂಭ ಹಾಗೂ ಲಕ್ಕಿ ಡ್ರಾ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಉತ್ತರ ಕರ್ನಾಟಕದ ಎಸ್.ಎಸ್.ಎಲ್.ಡಿ.ಡಿ.ಎಂ.ಕೆ ಸಂಘದ ಗೌರವಾಧ್ಯಕ್ಷ ಕೆ. ನರಸಿಂಹಮೂರ್ತಿ ವಹಿಸಿಕೋಳ್ಳಲಿದ್ದಾರೆ. ಸಾಯಂಕಾಲದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಮಹಾಸ್ವಾಮೀಜಿಗಳು ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ. ಸಿ ಪಾಟೀಲ, ಚಂದ್ರು ಲಮಾಣಿ, ಎಸ್ ವ್ಹಿ ಸಂಕನೂರ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ ಪೂರ್ಣಚಂದ್ರರಾವ್, ಎನ್ ರಾಮರಾವ್, ಕೆ. ಎನ್ ನರಸಿಂಹಮೂರ್ತಿ, ಚನ್ನಬಸವ ಗಸ್ತಿ, ಮೋಹನ್ ಗಜಘೋಷ, ರವಿಂದ್ರ ಎಸ್, ಸುರೇಶ್ ಕಲಬುರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.