Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಜಿಲ್ಲೆ

ರಾಜ್ಯಪಾಲರ ನಡವಳಿಕೆ ಅನೈತಿಕ, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕ: ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ.

ಕರುನಾಡು ಘರ್ಜನೆ ಸುದ್ದಿ :ಗದಗ: ಸ್ವಾತಂತ್ರ‍್ಯ ದಿನಾಚರಣೆ ಮರುದಿನವೆ ರಾಜ್ಯಪಾಲರು ವಿಷಯವೇ ಅಲ್ಲದ ಮುಡಾ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆಯಂದು ಸಂವಿಧಾನ- ಸಾಂವಿಧಾನಿಕ ಮೌಲ್ಯಗಳ ಕುರಿತು ದೊಡ್ಡ ದೊಡ್ಡ ಮಾತನಾಡಿದ ಬಿಜೆಪಿಯವರು, ಜೆಡಿಎಸ್‌ನವರು…

ಕರುನಾಡು ಘರ್ಜನೆ ಸುದ್ದಿ :ಗದಗ: ಸ್ವಾತಂತ್ರ‍್ಯ ದಿನಾಚರಣೆ ಮರುದಿನವೆ ರಾಜ್ಯಪಾಲರು ವಿಷಯವೇ ಅಲ್ಲದ ಮುಡಾ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆಯಂದು ಸಂವಿಧಾನ- ಸಾಂವಿಧಾನಿಕ ಮೌಲ್ಯಗಳ ಕುರಿತು ದೊಡ್ಡ ದೊಡ್ಡ ಮಾತನಾಡಿದ ಬಿಜೆಪಿಯವರು, ಜೆಡಿಎಸ್‌ನವರು ಸ್ಪಷ್ಟವಾಗಿ ರಾಜಭವನವನ್ನು ದುರುಪಯೋಗ ಪಡಿಸಿಕೊಂಡು ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರು ವಿರೋಧ ಪಕ್ಷಗಳ ನಡೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಪಾಲರು 26-07-2024 ಕೊಟ್ಟಿದ್ದ ನೋಟಿಸ್‌ಗೆ ವಿವರವಾದ ಉತ್ತರವನ್ನು ರಾಜ್ಯಪಾಲರ ಕಚೇರಿಗೆ ದಾಖಲೆಗಳ ಸಮೇತ ಕಳುಹಿಸಿಕೊಟ್ಟಿದ್ದರೂ, 01-08-2024ರಂದು ಸಂಪುಟ ಸಭೆ ನಡೆಸಿದ ಸರ್ಕಾರವು ರಾಜ್ಯಪಾಲರ ನೋಟಿಸ್ ದೋಷಪೂರಿತ ಹಾಗೂ ದ್ವೇಷ, ಪಿತೂರಿಕಾರಕ ಎಂದು ಹೇಳಿ ತಿರಸ್ಕರಿಸಲಾಗಿತ್ತು. ಅಲ್ಲದೇ, ದಾಖಲೆಗಳ ಸಮೇತ ಸರ್ಕಾರವು ಉತ್ತರ ಕೊಟ್ಟಿತ್ತು.

ಮುಡಾ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ ಎಂಬುದು ರಾಜ್ಯಪಾಲರಿಗೂ ತಿಳಿದಿದೆ. ಆದರೂ ಸಹ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡಿರುವುದು ಈ ರಾಜ್ಯದ ಸಮಸ್ತ ಜನರಿಗೆ ಮಾಡಿರುವ ದ್ರೋಹವಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂಬ ಜೆಡಿಎಸ್ ಮತ್ತು ಬಿಜೆಪಿಯವರು ಸೇರಿಕೊಂಡು ಈ ಅನೈತಿಕವಾದ ಆಟವನ್ನು ಆಡುತ್ತಿದ್ದಾರೆ. ಆ ಆಟಕ್ಕೆ ಮೈದಾನವನ್ನು ರಾಜ್ಯಪಾಲರು ತಮ್ಮ ಕಚೇರಿಯನ್ನು ಒದಗಿಸಿಕೊಟ್ಟಿದ್ದಾರೆ. ರಾಜ್ಯಪಾಲರು ತಮ್ಮ ಹುದ್ದೆಯ ಘನತೆ ಮತ್ತು ಸಂವಿಧಾನದ ಆಶಯಗಳನ್ನು ಕೊಂದು ಹಾಕಿದ್ದಾರೆ. ಅವರು ಒಂದು ಪಕ್ಷದ ಏಜೆಂಟರAತೆ ವರ್ತಿಸಿದ್ದಾರೆ ಎಂಬುದು ಸಂಶಯಾತೀತವಾಗಿದೆ.

ರಾಜ್ಯಪಾಲರು ಸಂವಿಧಾನದ ಮೌಲ್ಯಗಳಿಗೆ ಬದ್ದರಾಗಿದ್ದರೆ ಕರ್ನಾಟಕ ಲೋಕಾಯುಕ್ತವು ಪ್ರಾಸಿಕ್ಯೂಷನ್ನಿಗೆ ಅನುಮತಿ ಕೇಳಿರುವ ಗಂಭೀರವಾದ ವಿಷಯಗಳ ಕುರಿತು ಯಾಕೆ ಮೌನವಹಿಸಿದ್ದಾರೆ. ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಲವು ಬಿಜೆಪಿ ಮತ್ತು ಜೆಡಿಎಸ್‌ನ ಮುಖಂಡರ ಕುರಿತಂತೆ ಯಾಕೆ ಅನುಮತಿಯನ್ನು ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಶಶಿಕಲಾ ಜೊಲ್ಲೆ, ಪರಣ್ಣ ಮುನವಳ್ಳಿ ಮುಂತಾದವರ ಮೇಲೆ ಲಂಚ ವಸೂಲಿ ಕುರಿತ ಪ್ರಾಥಮಿಕ ಸಾಕ್ಷ್ಯಗಳು ಲಭಿಸಿವೆ. ಅವರ ಮೇಲೆ ತನಿಖೆ ನಡೆಸುವ ಅಗತ್ಯವಿದೆ. ಅನುಮತಿ ಕೊಡಿ ಎಂದು ಲೋಕಾಯುಕ್ತದವರು 09-12-2021ರಂದು ಕೋರಿದ್ದಾರೆ. ಆದರೂ ರಾಜ್ಯಪಾಲರು ಅನುಮತಿಯನ್ನು ಇದುವರೆಗೂ ಕೊಟ್ಟಿಲ್ಲ. 23-11-2023ರಂದು ಇದೇ ಲೋಕಾಯುಕ್ತದವರು ಕುಮಾರಸ್ವಾಮಿಯವರ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ಕೋರಿ ದಾಖಲೆಗಳ ಸಮೇತ ಬರೆದು ಅನುಮತಿ ಕೇಳಿದ್ದಾರೆ. ಶ್ರೀ. ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಬೋಗಸ್ ಸಂಸ್ಥೆಗೆ 6-10-2007ರಂದು 550 ಎಕರೆ ಅಮೂಲ್ಯ ಗಣಿ ಸಂಪತ್ತನ್ನು ನೀಡಿ ಸಾವಿರಾರು ಕೋಟಿ ರೂ. ಲೂಟಿ ಮಾಡಲು ಅನುಮತಿ ನೀಡಿದ್ದಾರೆ. ಹಾಗೂ ಲೂಟಿಯಲ್ಲಿ ಅವರ ಪಾತ್ರವಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಹಾಗಾಗಿ ಈ ಕುರಿತು ವಿವರವಾದ ತನಿಖೆ ಮಾಡಿರುವ ಲೋಕಾಯುಕ್ತವು ಈ ಪ್ರಕರಣದಲ್ಲಿ ಕುಮಾರಸ್ವಾಮಿಯವರ ನೇರ ಪಾತ್ರವಿದೆ ಎಂಬುದನ್ನು ಮನಗಂಡು ಅನುಮತಿ ಕೇಳಿದೆ. ಈ ಪ್ರಕರಣವನ್ನೂ ಸಹ ರಾಜ್ಯಪಾಲರು ಕಳೆದ ನವೆಂಬರಿನಿAದ ತಮ್ಮಲ್ಲಿಯೆ ಬಾಕಿ ಇಟ್ಟುಕೊಂಡು ಕೂತಿದ್ದಾರೆ.

26-2-2024ರಿಂದ ಮುರುಗೇಶ್ ನಿರಾಣಿಯವರು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಸಾಕ್ಷ್ಯಗಳ ಸಮೇತ ಲೋಕಾಯುಕ್ತದವರು ವಿಚಾರಣೆಗೆ ಅನುಮತಿ ಕೇಳಿದ್ದಾರೆ. ಇದಕ್ಕೂ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ.

13-5-2024ರಂದು ಜನಾರ್ಧನ ರೆಡ್ಡಿಯವರ ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಕುರಿತು ಪ್ರಾಥಮಿಕ ತನಿಖೆ ಮಾಡಿ ಅಕ್ರಮ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ವಿವರವಾದ ತನಿಖೆಯ ಅಗತ್ಯವಿದೆ ಎಂದು ಹೇಳಿ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೇಳಿದ್ದಾರೆ. ಇಷ್ಟೆಲ್ಲ ಗಂಭೀರವಾದ ಪ್ರಕರಣಗಳಿದ್ದರೂ ಬಿಜೆಪಿಯ ಕಚೇರಿಯಂತಾಗಿರುವ ರಾಜಭವನ ಮತ್ತು ರಾಜ್ಯಪಾಲರು ಇದುವರೆಗೆ ಈ ಪ್ರಕರಣಗಳ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡಿಲ್ಲ. ಆದರೆ ಕೆಲವೇ ದಿನಗಳ ಹಿಂದೆ ಅನೇಕ ಕ್ರಿಮಿನಲ್ ಅಪರಾಧಗಳನ್ನು ಎದುರಿಸುತ್ತಿರುವ ಪ್ರದೀಪ್‌ಕುಮಾರ್, ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ನಿರಾಧಾರ ದೂರುಗಳನ್ನು ಆಧರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಟ್ಟಿದ್ದಾರೆ. ಇದರ ಜೊತೆಗೆ ಜೆಡಿಎಸ್ ವಕ್ತಾರ ಎಸ್.ಪಿ. ಪ್ರದೀಪ್ ಕುಮಾರ್ ಎನ್ನುವವರು ಅನುಮತಿ ಕೋರಿದ್ದಾರೆ.

ರಾಜ್ಯಪಾಲರ ಕಚೇರಿಯು ಯಾವಾಗ ಬಿಜೆಪಿ, ಜೆಡಿಎಸ್ ಹಾಗೂ ಆರೆಸ್ಸೆಸ್ ಕಚೇರಿಯಾಗಿ ಮಾರ್ಪಾಟಾಯಿತೊ ಆಗಿನಿಂದಲೆ ಕಾಂಗ್ರೆಸ್ ಸರ್ಕಾರದ ಮೇಲೆ ದುಷ್ಟರ ಕಣ್ಣು ಬಿದ್ದಿದೆ ಎಂದು ತೀರ್ಮಾನಿಸಿದ್ದೆವು. ಸಂವಿಧಾನ ವಿರೋಧಿ,

ಜನವಿರೋಧಿಯಾದ ಬಿಜೆಪಿ, ಜೆಡಿಎಸ್ ಹಾಗೂ ಆರೆಸ್ಸೆಸ್‌ಗಳ ದುಷ್ಟಕೂಟಕ್ಕೆ ಯಾವಾಗ ಆಪರೇಷನ್ ಕಮಲ ಎಂಬ ಚಟವಟಿಕೆಗೆ ರಾಜ್ಯದಲ್ಲಿ ಅವಕಾಶವಿಲ್ಲವೆಂದು ಮನವರಿಕೆಯಾಯಿತೊ ಆಗಿನಿಂದಲೆ ರಾಜಭವನವನ್ನು ದುರುಪಯೋಗಪಡಿಸಿಕೊಂಡು ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡಿ ಅಧಿಕಾರಕ್ಕೆ ಬಂದು ಪಾಳೇಗಾರಿ ಹಾಗೂ ಕೋಮುವಾದಿ ಸರ್ಕಾರ ರಚಿಸಬೇಕೆಂದು ತೀರ್ಮಾನಿಸಿವೆ. ಇದೆಲ್ಲದರ ಭಾಗವೆ ಈ ನೋಟೀಸು, ಪ್ರಾಸಿಕ್ಯೂಷನ್ನಿಗೆ ಅನುಮತಿ ಎಂಬ ನಾಟಕ ನಡೆದಿದೆ.

ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟೀಸು ನೀಡುವ ಮೊದಲು ಯಾವುದೇ ಲೀಗಲ್ ಒಪಿನಿಯನ್ ತೆಗೆದುಕೊಂಡಿಲ್ಲ. ಅವರು ಬಿಜೆಪಿ, ಜೆಡಿಎಸ್ ರವರ ಒಪಿನಿಯನ್ ಮಾತ್ರ ತೆಗೆದುಕೊಂಡಿದ್ದಾರೆ. ಅದಕ್ಕೆ ಪೂರಕವೆಂಬAತೆ ಪ್ರಹ್ಲಾದ್ ಜೋಶಿ ಮತ್ತು ಕುಮಾರಸ್ವಾಮಿಯವರು ಇನ್ನು 10 ತಿಂಗಳಲ್ಲಿ ಈ ಸರ್ಕಾರ ಬಿದ್ದು ಹೋಗುತ್ತೆ ಎಂದು ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದರು. ಹಾಗಾಗಿ ಇದೆಲ್ಲವೂ ಪೂರ್ವ ಪಿತೂರಿಯ ಭಾಗ ಮತ್ತು ಚುನಾಯಿತ ಸರ್ಕಾರವನ್ನು ವಾಮಮಾರ್ಗದಲ್ಲಿ ಕಿತ್ತೊಗೆಯುವ ಕಾರ್ಯ. ಇದು ರಾಜಕೀಯ ಸಂಘರ್ಷ. ಇದನ್ನು ನಾವು ಕಾನೂನಾತ್ಮಕವಾಗಿ, ಪ್ರಜಾಪ್ರಭುತ್ವದ ನೆಲೆಯಲ್ಲಿ ಹೋರಾಟ ಮಾಡುತ್ತೇವೆ. ಅವರ ದುಷ್ಕೃತನದ ವಿರುದ್ಧ ಜನರ ಬಳಿಗೆ ಸತ್ಯಾಂಶವನ್ನು ತೆಗೆದುಕೊಂಡು ಹೋಗುತ್ತೇವೆ.

ಇದು ನಿರೀಕ್ಷಿತ ಪಿತೂರಿ ಹಾಗೂ ದುಷ್ಟಕೂಟದ ಈ ಪಿತೂರಿಗೆ ನಾವು ಹೆದರುವುದಿಲ್ಲ. ರಾಜ್ಯಪಾಲರ ಪಿತೂರಿ ಬೆತ್ತಲೆ ಮಾಡುತ್ತೇವೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಅನೈತಿಕವೂ ಪ್ರಜಾಪ್ರಭುತ್ವ ವಿರೋಧಿಯೂ ಆದ ಈ ಶಕುನಿ ರಾಜಕಾರಣವನ್ನು ನಾವು ನೈತಿಕ ನೆಲೆಗಟ್ಟಿನಲ್ಲಿ, ಸಂವಿಧಾನದ ಶಕ್ತಿಯನ್ನು ಬಳಸಿ ನೈತಿಕ ರಾಜಕಾರಣ ಮಾಡುತ್ತೇವೆ.

ಪ್ರಜಾಪ್ರಭುತ್ವದಲ್ಲಿ ಜನರು ನಮ್ಮ ಮಾಲೀಕರೆ ಹೊರತು, ಈ ದುಷ್ಟರು ನಮ್ಮ ಮಾಲೀಕರಲ್ಲ. ಅವರನ್ನು ನಮ್ಮ ಶತ್ರುಗಳು ಹಾಗೂ ಸಮಸ್ತ ಶೋಷಿತ ಜನರ ಶತ್ರುಗಳು ಎಂದು ತೀರ್ಮಾನಿಸಿದ್ದೇವೆ. ಈ ದುಷ್ಟರನ್ನು ನಾವು ರಾಜಕೀಯವಾಗಿಯೇ ಎದುರಿಸುತ್ತೇವೆ. ಇದಕ್ಕೆಲ್ಲ ಹೆದರುವ ಪ್ರಶ್ನೆ ಇಲ್ಲ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.

Editor

Leave a comment