ಕರುನಾಡು ಘರ್ಜನೆ ಸುದ್ದಿ ಬಳ್ಳಾರಿ: ಬೆಂಗಳೂರಿನ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ್ದ ನಟ ದರ್ಶನ್ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, “ಹೈ ಸೆಕ್ಯುರಿಟಿ’ ಸೌಲಭ್ಯವುಳ್ಳ ಸೆಲ್ಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ಬಳ್ಳಾರಿ ಕೇಂದ್ರ ಕಾರಾಗೃಹ 800ರಿಂದ 1 ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿದೆ. ಸದ್ಯ ವಿಚಾರಣಾಧೀನ, ಸಜಾಬಂದಿಗಳು ಸೇರಿ ಒಟ್ಟು 368 ಕೈದಿಗಳಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ 5 ಬ್ಲಾಕ್ಗಳಿವೆ. ಸಜಾಬಂದಿಗಳಿಗೆ 200 ಪ್ರತ್ಯೇಕ ಸೆಲ್ಗಳಿವೆ.
“ಹೈ ಸೆಕ್ಯುರಿಟಿ’ ಸೆಲ್ಗಳು ನೀರು, ಶೌಚಾಲಯ ಸೌಲಭ್ಯ ಹೊಂದಿವೆ. ಸೆಲ್ನಲ್ಲಿದ್ದುಕೊಂಡೇ ಕೋರ್ಟ್ ಕಲಾಪ ವೀಕ್ಷಿಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದೆ. ಸಿಸಿ ಕೆಮರಾ ಅಳವಡಿಸಿ ನಿಗಾ ವಹಿಸಲಾಗುತ್ತದೆ. ಬಳ್ಳಾರಿ ಕಾರಾಗೃಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಜಿಲ್ಲೆಗಳ ಕೈದಿಗಳೇ ಇದ್ದಾರೆ.