ಕರುನಾಡು ಘರ್ಜನೆ ಸುದ್ದಿ: ರೋಣ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಜಕ್ಕಲಿಯಲ್ಲಿ ಜನಮನ ರಂಜಿಸಿದ ಕನ್ನಡ, ಹಿಂದಿ ಚಲನಚಿತ್ರ ಗೀತೆಗಳು ಕಲೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರ ಸಂಜೆ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಶ್ರೀ ಕಲೇಶ್ವರ ದೇವಸ್ಥಾನ ಸಮಿತಿ ಹಾಗೂ ಶ್ರೀ ಬಸವೇಶ್ವರ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮದ ಅಭಿನವ ಮೆಲೋಡಿಸ್ (ರಸಮಂಜರಿ) ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳನ್ನು ಯುವ ಕಲಾವಿದರು ಹಾಡಿ ಜನಮನ ರಂಜಿಸಿದರು.
ಕಲಾವಿದೆಯರಾದ ಗಜೇಂದ್ರಗಡದ ರತ್ನಾ ಕುಂಬಾರ ಹಾಗೂ ಗದುಗಿನ ಪ್ರಿಯಾಂಕಾ ಜೂತೆಗೂಡಿ ನಂಜುಡಿ ಕಲ್ಯಾಣ ಚಿತ್ರದ ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು ಬಿಸಿಯಾಗಿದೆ ನಶೆಯೇರಿದೆ ಮಿತಿ ಮೀರಿದ ಜೋಪಾನ.. ಮತ್ತು ರಾಣಿ ಮಹಾರಾಣಿ ಚಿತ್ರದ ಕೂಗೊ ಕೋಳಿಗೆ ಖಾರ ಮಸಾಲೆ ಮೇಯೊ ಮೇಕೆಗೆ ಮಿರ್ಚಿ ಮಸಾಲೆ.. ಹಾಗೂ ಜಗಮೆಚ್ಚಿದ ಮಗ ಚಿತ್ರದ ಏರಿ ಮೇಲೆ ಏರಿ ಅಹ ಮೇಲೆ ಕೆಳಗೆ ಹಾರಿ ಅಹ..ಹಕ್ಕಿ ಬಂತು ಕುಂತೈಯ್ತಲ್ಲೋ ಮಾವಾ… ಮತ್ತು ಖುಷಿ ಚಿತ್ರದ ಕಳ್ಳ ಚಂದಮಾಮ ಚೆಂದ ಅಂದ ಪ್ರೇಮ.. ಟೈಟಲ್ ಸಾಂಗ್‌ಗೆ ಹುಡುಗರು ಟಪ್ಪಾಂಗುಚ್ಚಿ ಶೈಲಿಯ ನೃತ್ಯವನ್ನು ಅಭಿನಯಸಿದರು.
ಕೃಷ್ಣ ರುಕ್ಕಿಣಿ ಚಿತ್ರದ ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು ಹಾಡುವೆ ಕೇಳಿ.. ಹಾಗೂ ಸಿ. ಅಶ್ವತ್‌ರವರ ಭಾವಗೀತೆ ಕಾಣದ ಕಡಲಿಗೆ ಹಂಬಲಿಸಿದೆ ಮನ.. ಎಂಬ ಹಾಡುಗಳು ಬಸವರಾಜ ಪಲ್ಲೇದ ಅವರ ಪ್ರತಿಭೆಗೆ ಸಾಕ್ಷಿಯಾಯಿತು. ಸುಮಧುರ ಗಾಯನದಿಂದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ
ಹಾಡನ್ನು ಪ್ರವೀಣ ವಾಲಿ ಇವರು ಸೊಗಸಾಗಿ ಹಾಡಿದರು… ವಂಶಿ ಚಿತ್ರದ ಭುವನಂ ಗಗನಂ ಸಕಲಂ ಶರಣಂ… ಪ್ರವೀಣ ಕೊಪ್ಪದ, ಶ್ರೀ ಮಂಜುನಾಥ ಚಿತ್ರದ ತನುವಿನ ಮನೆಗೆ ಬಾ ಅತಿಥಿ.. ಶ್ರೀಧರ ಗಾಣಿಗೇರ, ಏನಾಗಲಿ ಮುಂದೆ ಸಾಗು ನೀ. ಬಯಸಿದ್ದೆಲ್ಲಾ ಸಿಗದು ಬಾಳಲೀ… ವೀರಭದ್ರಪ್ಪ ಮೆಣಸಗಿ ಹಾಡಿದ ಚಿತ್ರಗೀತೆಗಳು ಜನಮನ ಸೂರೆಗೊಂಡವು. ದೀವಾನಾ ಚಿತ್ರದ ಐಸಿ ದೀವಾನಾಗಿ ದೇಖೀ ನಹೀಂ ಕಭೀ, ಮೈನೇ ಇಸಲಿಯೇ…ಎಂಬ ಹಿಂದಿ ಸಾಂಗ್‌ನ್ನು ಯಲಬುರ್ಗಾದ ಆಕಾಶ ಮೆಲೋಡಿಸ್‌ದ ಪ್ರತಿಭಾನ್ವಿತ ಕಲಾವಿದ ಖಾಜಾವಲಿ ಗುಳಗುಳಿ ಹಾಡಿ ಜನಮನ ಗೆದ್ದರು. ಈ ವೇಳೆ ಮಂತ್ರ ಮುಗ್ಧರಾಗಿ ಹಾಡುಗಳನ್ನು ಆಲಿಸಿದ ಮಹಿಳೆಯರು ಬದುಕಿನ ಜಂಜಾಟಗಳನ್ನೂ ಮರೆತು ಕುಳಿತ್ತಿದ್ದರು. ಕಲಾವಿದರು ತಮ್ಮ ಸುಶ್ರಾವ ಕಂಠದಿಂದ ಸುಮಾರು 4 ಗಂಟೆಗೂ ಹೆಚ್ಚು ಕಾಲ ಹಾಡಿದರೂ ಕೂಡಾ ನೂರಾರು ಪ್ರೇಕ್ಷಕರು ತುಂತುರು ಮಳೆಹನಿಯಲ್ಲಿಯೇ ಕಾಲ್ಕಿತ್ತದಂತೆ ಹರ್ಷಚಿತ್ತರಾಗಿ ವೀಕ್ಷಿಸಿದರು.
ತಮ್ಮಿಷ್ಟದ ಹಾಡುಗಳಿಗೆ ವೇದಿಕೆ ಮೇಲೆ ಕಲಾವಿದರು ನೃತ್ಯ ಮಾಡುವುದನ್ನು ಕಂಡು ನೆರೆದಿದ್ದ ಪ್ರೇಕ್ಷಕರು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟುತ್ತಿದ್ದ ಪಡ್ಡೆ ಹುಡುಗರಂತೂ ಕುಳಿತ ಜಾಗದಲ್ಲಿಯೇ ಎದ್ದುನಿಂತು ಹುಚ್ಚೆದ್ದು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಇನ್ನು ಕೆಲವರು ತಮ್ಮ ಇಷ್ಟದ ಚಲನಚಿತ್ರದ ಹಾಡುಗಳನ್ನು ಹಾಡಲು ತಂಡದವರಿಗೆ ಮನವಿ ಮಾಡಿ, ಆ ಹಾಡು ಕೇಳಿ ಆನಂದಿಸಿದರು. ಕೆಲವರಂತೂ ವೇದಿಕೆ ಮುಂಭಾಗದಲ್ಲಿ ತಮ್ಮ ಮೊಬೈಲ್ದಿಂದ ಚಿತ್ರ ಸೆರೆಹಿಡಿಯುವುದು, ವಿಡಿಯೋ ಚಿತ್ರೀಕರಣ, ಸೆಲ್ಪಿತೆ ಗೆದುಕೊಳ್ಳುವುದು ಕಂಡು ಬಂದಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜನಪ್ರಿಯ ಕಲಾವಿದ ಮಲ್ಲಣ್ಣವರ ಮೇಟಿ ಇವರು ಬಯಲಾಟದಲ್ಲಿ ನಡೆದ ಒಂದು ಹಾಸ್ಯ ಪ್ರಸಂಗದ ಸನ್ನಿವೇಶವನ್ನು ಹೇಳಿ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿದರು ಹಾಗೂ ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಭೀಷ್ಮಾಚಾರ್ಯರ ಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ನರೇಗಲ್ಲ ಪೊಲೀಸ್ ಠಾಣಾ ఎఎనోఐ ಎಸ್.ಎಲ್. ಹೊಸಳ್ಳಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾರಂಭಕ್ಕೆ ತುಂತುರು ಮಳೆಹನಿ ಉದುರಿ ಆತಂಕ ಸೃಷ್ಟಿಸಿತ್ತು. ಬಳಿಕ ನೆಲಾವೆಲ್ಲಾ ತಂಪಾಗಿಸಿ ಅಷ್ಟಕ್ಕೆ ನಿಂತಿತು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶೇಖರಪ್ಪ ಮೇಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಎ.ವಿ. ನರೇಗಲ್ಲ, ಪುಂಡಪ್ಪ ಮಡಿವಾಳರ, ಪ್ರಭುರಾಜ ರೇಣುಕಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೇಖರ ಯಾವಗಲ್ಲ, ಸಂಗಮೇಶ ಮೆಣಸಗಿ, ಉಮೇಶ ಮೇಟಿ, ಪ್ರಮೋದ ಯಾವಗಲ್ಲ, ಮುತ್ತು ಮೇಟಿ, ವಿನಯ ನರೇಗಲ್ಲ, ವಿನಾಯಕ ಅಥಣಿ, ವಿನಾಯಕ ಉಮತಾರ, ದಾನೇಶ ಮುಗಳಿ, ನಾಗರಾಜ ಸಂಗನಬಶೆಟ್ಟರ, ವೀರೇಶ ನರೇಗಲ್ಲ,ರವಿ ಆದಿ, ಮಲ್ಲಪ್ಪ ಅವರಾದಿ, ಸಾಗರ ಆದಿ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಕಲಾಭಿಮಾನಿಗಳು ಕಲಾವಿದರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬಾಬು ಮೆಣಸಗಿ ಸ್ವಾಗತಿಸಿನಿರೂಪಿಸಿದರು.ಕಾರ್ಯಕ್ರಮದ ಪ್ರಯುಕ್ತ ವಿಶೇಷ ಭೋಜನದ ವ್ಯವಸ್ಥೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು.