ಕರುನಾಡು ಘರ್ಜನೆ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಡ್ಡಹುಟ್ಟಿದ ತಂಗಿಯನ್ನು ಅಣ್ಣ ಕೊಲೆ ಮಾಡಿದ ಘಟನೆ ನಡೆದಿದೆ
ಆಸ್ತಿ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಮುಕ್ತಾಯವಾದ ಘಟನೆ ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರದಲ್ಲಿ ನಡೆದಿದೆ. ಒಡಹುಟ್ಟಿದ ತಂಗಿಗೆ ಹೊಟ್ಟೆಗೆ ಚಾಕುವಿನಿಂದ ಇರಿದು, ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ.ಎಂದು ತಿಳಿದು ಬಂದಿದೆ.
ಕಾಳಮ್ಮ ರಂಗಪ್ಪ ಕ್ಯಾದಿಗೆಹಳ್ಳಿ (34) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ.
ಆಸ್ತಿ ವಿವಾದದ ವಿಷಯಕ್ಕೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಕೊಲೆಯ ನಂತರ ಪೊಲೀಸ್ ಠಾಣೆಗೆ ಆರೋಪಿ ಈಶ್ವರಪ್ಪ ರಂಗಪ್ಪ ಕ್ಯಾದಿಗೆಹಳ್ಳಿ ಶರಣಾಗಿದ್ದಾನೆ .
ಸುದ್ದಿ ತಿಳಿದು ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ .