ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ, ಹರ್ಲಾಪುರ ಗ್ರಾಮದ ಮಾದರಿ ಪ್ರಾಥಮಿಕ ಶಾಲೆಯ ಬಾಲಕರ ಖೋ ಖೋ ತಂಡವು ಫೈನಲ್ ಪಂದ್ಯದಲ್ಲಿ ಯಾವಗಲ್ ತಂಡದ ವಿರುದ್ಧ ಅದ್ಭುತವಾದ ಪ್ರದರ್ಶನವನ್ನು ತೋರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರು ಮತ್ತು ದೈಹಿಕ ಶಿಕ್ಷಕರಾದ ಶ್ರೀ ಟಿ. ಉದಯಕುಮಾರ ಹಾಗೂ ಊರಿನ ಕ್ರೀಡಾ ಪ್ರೇಮಿಗಳ ಪರಿಶ್ರಮದಿಂದಾಗಿ ಈ ಬಾರಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿನ ಸೋಲಿನ ಕೊಂಡಿಯನ್ನು ಕಳಚಿ ಪ್ರಪ್ರಥಮಬಾರಿಗೆ ವಲಯ ಮಟ್ಟಕ್ಕೆ ಲಗ್ಗೆ ಇಟ್ಟಿರುವುದು ಊರಿನ ತುಂಬೆಲ್ಲ ಸಂಭ್ರಮದ ವಾತಾವರಣ ಮನೆಮಾಡಿದೆ. ಈ ಅಭೂತಪೂರ್ವ ವಿಜಯಕ್ಕೆ ಕಾರಣಿಭೂತರಾದ ಎಲ್ಲರಿಗೂ ಧನ್ಯವಾದಗಳು.ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು , ಶಿಕ್ಷಣ ಪ್ರೇಮಿಗಳು ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕಿಯರು ಹಾಗೂ ಊರಿನ ಎಲ್ಲಾ ಯುವಕ ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.
ಗದಗ : ಹರ್ಲಾಪುರ ಪ್ರಾಥಮಿಕ ಶಾಲೆಯ ಬಾಲಕರ ಖೋ ಖೋ ಪಂದ್ಯದಲ್ಲಿ ಭರ್ಜರಿ ಜಯ್.!
ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ, ಹರ್ಲಾಪುರ ಗ್ರಾಮದ ಮಾದರಿ ಪ್ರಾಥಮಿಕ ಶಾಲೆಯ ಬಾಲಕರ ಖೋ ಖೋ ತಂಡವು ಫೈನಲ್ ಪಂದ್ಯದಲ್ಲಿ ಯಾವಗಲ್ ತಂಡದ ವಿರುದ್ಧ ಅದ್ಭುತವಾದ ಪ್ರದರ್ಶನವನ್ನು ತೋರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.…