Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಬ್ರೇಕಿಂಗ್‌ ನ್ಯೂಸ್

ಡಾ. ಪುನೀತ್ ರಾಜಕುಮಾರವರ ೩ನೇ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ, ಅನ್ನಸಂತರ್ಪಣೆ, ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮ 

ಕರುನಾಡು ಘರ್ಜನೆ ಸುದ್ದಿ ಗದಗ  ೨೯: ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟ (ರಿ), ಡಾ. ಶಿವರಾಜಕುಮಾರ ಅಭಿಮಾನಿ ಸಂಘ ಹಾಗೂ ರಾಜರತ್ನ ಡಾ. ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ ಗದಗ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ರತ್ನ,…

ಕರುನಾಡು ಘರ್ಜನೆ ಸುದ್ದಿ ಗದಗ  ೨೯: ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟ (ರಿ), ಡಾ. ಶಿವರಾಜಕುಮಾರ ಅಭಿಮಾನಿ ಸಂಘ ಹಾಗೂ ರಾಜರತ್ನ ಡಾ. ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ ಗದಗ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ರತ್ನ, ಪವರಸ್ಟಾರ್ ಡಾ. ಪುನೀತ್ ರಾಜಕುಮಾರ ಅವರ ೩ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಗದಗ ಡಿ.ಸಿ. ಮಿಲ್ ಹತ್ತಿರ ಡಾ. ಪುನೀತ್ ರಾಜಕುಮಾರ ಅವರ ೩ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ೩೦ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು ಈ ಪುಣ್ಯಸ್ಮರಣೆಯ ನಿಮಿತ್ಯವಾಗಿ ಬಡ ವಿದ್ಯಾರ್ಥಿಗಳಿಗೆ ನೋಟಬುಕ್, ಪೆನ್ಸಿಲ್ ವಿತರಣೆ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಜಿಲ್ಲಾ ಅಧ್ಯಕ್ಷರಾದ ವಿಠ್ಠಲ ಪರಾಪೂರ ಅವರು ಡಾ. ಪುನೀತ್ ರಾಜಕುಮಾರ ಅವರ ನಿಸ್ವಾರ್ಥ ಸಮಾಜ ಸೇವೆ ಹಾಗೂ ಅವರ ಆದರ್ಶಗಳನ್ನು ಈಗಿನ ಯುವ ಪೀಳಿಗೆ ಪಾಲನೆ ಮಾಡಬೇಕೆಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಸಂಗಾಪೂರ ಅವರು ಮಾತನಾಡಿ ಸಮಾಜದ ಹಿರಿಯರು ಮತ್ತು ಅಖಿಲ ಕರ್ನಾಟಕ ಡಾ. ರಾಜಕುಮಾರ, ಶಿವರಾಜಕುಮಾರ, ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ನಿಮ್ಮೆಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ನೆರವೇರಿಸಿ, ಪುನೀತ್ ರಾಜಕುಮಾರ ಅವರ ನೆನಪಿಗಾಗಿ ಕಳೆದ ವರ್ಷ ಗದಗ ಪ್ರಾಣಿ ಸಂಗ್ರಹಾಲಯದಲ್ಲಿ ಕೃಷ್ಣಮೃಗ (ಜಿಂಕೆ) ಯನ್ನು ದತ್ತು ಪಡೆದಿದ್ದೇವೆ. ಇವಾಗ ೩ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ, ಪಠ್ಯಪುಸ್ತಕ, ಅನ್ನಸಂತರ್ಪಣೆ ಕಾರ್ಯಕ್ರಮ ಅವರ ನೆನಪಿಗಾಗಿ ಹಮ್ಮಿಕೊಳ್ಳಲಾಗಿದೆ ಅವರ ಆದರ್ಶ, ಸಮಾಜ ಸೇವೆ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಪುನೀತ್ ರಾಜಕುಮಾರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಡಾ. ಪುನೀತ್ ರಾಜಕುಮಾರ ಅವರ ಅಭಿಮಾನಿಯಾದ ಜೈಭೀಮ್ ಸೇನೆ ರಾಜ್ಯ ಉಪಾಧ್ಯಕ್ಷರಾದ ಮೈಲಾರಪ್ಪ ವಿ. ಚಳ್ಳಮರದ ಮಾತನಾಡಿ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವAತಹ ವಿಠ್ಠಲ ಪರಾಪೂರ, ಮಲ್ಲಿಕಾರ್ಜುನ ಸಂಗಾಪೂರ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಡಾ. ಪುನೀತ್ ರಾಜಕುಮಾರ ಅವರ ಅಕಾಲಕ್ಕೆ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ, ದಾನ, ಧರ್ಮ ಮತ್ತು ರಕ್ತದಾನ, ಸಮಾಜ ಸೇವೆಗಳನ್ನು ಅವರ ಸ್ಪೂರ್ತಿ ನಾಯಕನಾಗಿ ಇಟ್ಟುಕೊಂಡು ಇನ್ನು ಹೆಚ್ಚು ಕಾರ್ಯಕೆಲಸಗಳು ಹೆಚ್ಚಿನ ರೀತಿಯಲ್ಲಿ ಆಗುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಓಣಿಯ ಹಿರಿಯರು ಹಾಗೂ ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳು, ಎಸ್.ಎನ್. ಬಳ್ಳಾರಿ ಗುರುಗಳು, ಹಾಗೂ ನಗರಸಭಾ ಸದಸ್ಯರಾದ ಕೃಷ್ಣಾ ಪರಾಪೂರ, ಕೊಪ್ಪಳ ಜಿಲ್ಲಾ ಅಧ್ಯಕ್ಷರು ಖಾದರ ಭಾಷಾ, ಅಶೋಕ ಕುಡತಿನಿ, ವಿಜಯ ಕಲ್ಮನಿ, ಉಪಾಧ್ಯಕ್ಷರಾದ ನಾಗರಾಜ ಗುತ್ತಿ, ಶಹರ ಅಧ್ಯಕ್ಷರಾದ ಮಲ್ಲೇಶ ಪರಾಪೂರ, ಪ್ರಕಾಶ ಕಲ್ಮನಿ, ರಾಮು ಬಳ್ಳಾರಿ, ಪರಶುರಾಮ ರಾಮಗಿರಿ, ಪರಶುರಾಮ ಬಳ್ಳಾರಿ, ಗಾಳೆಪ್ಪ ಹರ್ಲಾಪೂರ, ಯುವರಾಜ ಬಳ್ಳಾರಿ, ವೆಂಕಟೇಶ ಬಳ್ಳಾರಿ, ಮಹಿಳೆಯರಾದ ಶ್ರೀಮತಿ ತಾರಾಬಾಯಿ ದೊಡ್ಡಮನಿ, ಗಂಗವ್ವ ತಿಮ್ಮಾಪೂರ, ಲಕ್ಷö್ಮವ್ವ, ಗಂಗಾಧರ ಬ್ಯಾಗೋಟಿ, ರಾಘವೇಂದ್ರ ಗೆಜ್ಜೆಹಳ್ಳಿ, ಯುವಕರಾದ ಪೃಥ್ವಿ ಪರಾಪೂರ, ವಿನಾಯಕ ಗಜಕೋಶ, ಲಕ್ಷö್ಮಣ, ಪರಶುರಾಮ ಕಟ್ಟಿಮನಿ, ಮಂಜುನಾಥ ಪರಾಪೂರ, ಸಂಜು, ವಿಕ್ರಮ್, ಆಕಾಶ, ರಾಜಶೇಖರ ಅಗಸಿನಕೊಪ್ಪ, ಮಂಜುನಾಥ, ವಿರುಪಾಕ್ಷ ಸಂಗಾಪೂರ ಹಾಗೂ ಓಣಿಯ ಯುವಕರು, ಮಹಿಳೆಯರು, ಅಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು.

Editor

Leave a comment