ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲೆಯ ಜನರಿಗೆ ದೀಪಾವಳಿ ಹಬ್ಬ ಬಂದರೆ ಸಾಕು , ಇಸ್ಪೀಟ್ ಆಡುವವರಿಗೆ ಅದೇನೋ ಒಂಥರಾ ಹುಮ್ಮಸ್ಸು . ದೀಪಾವಳಿ ಹಬ್ಬಕ್ಕಾಗಿ ಕಾದು ಕುಳಿತುಕೊಳ್ಳುವ ಇಸ್ಪೀಟು ಗ್ಯಾಂಗ್ ಗಳಿವೆ . ಈ ಒಂದು ರಾತ್ರಿಯಲ್ಲೇ ಲಕ್ಷಾಂತರ ಹಣ ಗಳಿಸುತ್ತಾರೆ .ಇಸ್ಪಿಟ್ ಆಟದಲ್ಲಿ ಪಳಗಿದವರು . ದೀಪಾವಳಿ ಹಬ್ಬದ ನೆಪದಲ್ಲಿ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಇಸ್ಪೀಟ್ ಆಟವಾಡುವವರು ಹಗಲು ರಾತ್ರಿ ಇಸ್ಪೀಟ್ ಆಡುವುದರಲ್ಲಿ ಫುಲ್ ಬ್ಯುಸಿಯಾಗಿರುತ್ತಾರೆ .
ದೀಪಾವಳಿ ಸಮಯದ ಮೂರು ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಇಸ್ಪೀಟ್ ಆಟವನ್ನು ಆಡುತ್ತಾರೆ . ಹೀಗಾಗಿ ಈ ಜಿಲ್ಲೆಯಲ್ಲಿ ಈ ವರ್ಷ ಇಸ್ಪೀಟ್ ಆಟ- ಕೈ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ . ಹಬ್ಬದ. ನೆಪದಲ್ಲಿ ಇಸ್ಪೀಟ್ ಆಡುವರಿಗೆ ಬಿ.ಎಸ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ ಇಸ್ಪೀಟ್ ಆಡುವರನ್ನು ಬಂಧನ ಮಾಡಿ ಅವರ ಮೇಲೆ ಕೇಸ್ ಅನ್ನು ಹಾಕಲಾಗುವುದು. ನಗರದ ಎಲ್ಲಿಯೂ ಕೂಡ ಇಸ್ಪೀಟ್ ಆಟವನ್ನು ಆಡಿದರೆ ಹಾಗೂ ಆಡಿಸಿದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡು ಕೇಸನ್ನು ದಾಖಲಿಸಲಾಗುವುದು ಎಂದು ನಮ್ಮ ದಿನಪತ್ರಿಕೆಗೆ ಮಾಹಿತಿ ನೀಡಿದರು .
ನಂತರ ಮಾತನಾಡಿದ ಅವರು ದೀಪಾವಳಿ ಹಬ್ಬ ಸಂಭ್ರಮದ ಹಬ್ಬವಾಗಿದ್ದು ಹಬ್ಬದ ಆಚರಣೆಯನ್ನು ಮಾಡುವುದು ಬಿಟ್ಟು ಕೆಲವರು ಇಸ್ಪೀಟ್ ಆಡಿಸುವುದನ್ನು ಹಾಗೂ ಆಡುವುದರಿಂದಾಗಿ ಇಸ್ಪೀಟ್ ಆಟದಲ್ಲಿ ಹಣವನ್ನು ಕಳೆದುಕೊಂಡ ಜನರ ಕುಟುಂಬದ ದೀಪಾವಳಿಯ ಬೆಳಕು ಇಲ್ಲದಂತಾಗುತ್ತದೆ .
ಆರ್ಥಿಕ ಸಂಕಷ್ಟವು ಉಂಟಾಗುತ್ತದೆ ಆದ್ದರಿಂದ ಸಾರ್ವಜನಿಕರು ಹಬ್ಬದ ಆಚರಣೆಯನ್ನು ದೀಪದಿಂದ ದೀಪ ಬೆಳಗಿಸುವಂತೆ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಎಂದು ಸಾರ್ವಜನಿಕರಿಗೆ ಬದ ಕೋರುವರೊಂದಿಗೆ ಇಸ್ಪೀಟ್ ಆಡುವವರ ವಿರುದ್ಧ ಕಡಕ್ ಸಂದೇಶವನ್ನು ನೀಡಿದ್ದಾರೆ .