ಕರುನಾಡು ಘರ್ಜನೆ ಸುದ್ದಿ ಗದಗ : ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಮುಂಡರಗಿ ರಸ್ತೆಯಲ್ಲಿ ಕಾರು ಮತ್ತು ಗ್ಯಾಸ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ.
ತಾಲೂಕಿನ ಅಡವಿಸೋಮಾಪೂರ ಗ್ರಾಮದ ಮುಂಡರಗಿ ರಸ್ತೆಯಲ್ಲಿ ಇಂದು ಸಂಜೆ 7 ಗಂಟೆಗೆ ಭೀಕರ ಅಪಘಾತ ನಡೆದಿದೆ.
ಪೆಟ್ರೋಲ್ ಬಂಕ್ ಗೆ ಗ್ಯಾಸ್ (cng) ವಿತರಿಸುವ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತದಲ್ಲಿ ಲಾರಿಯ ಮುಂದಿನ ಚಕ್ರ ಕಿತ್ತುಕೊಂಡು ಹೋಗಿದೆ. ಕಾರು ರಸ್ತೆ ಪಕ್ಕ ಇರುವ ಗುಂಡಿಗೆ ಉರುಳಿದೆ.ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಕಾರಿನ ಪ್ರಯಾಣೆಸುವರಿಗೆ ಗಂಭೀರ ಗಾಯಗೊಂಡು ಸ್ಥಳಿಯರ ಸಹಾಯದಿಂದ ಶಿರೋಳ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ
ಗದಗ ಗ್ರಾಮೀಣ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.