ಕರುನಾಡು ಘರ್ಜನೆ ಸುದ್ದಿ ದಾವಣಗೆರೆ: ಬದುಕಿನ ಕೊನೆಯುಸಿರಿನಲ್ಲೂ ವೃದ್ಧ ದಂಪತಿ ಒಂದಾಗಿದೆ. ಕಸ್ತೂರಿ ರಂಗಪ್ಪ (65) ಜಯಮ್ಮ (61) ಒಟ್ಟಿಗೆ ನಿಧನರಾಗಿದ್ದಾರೆ.
ಪತಿ ಕಸ್ತೂರಿ ರಂಗಪ್ಪ ಜೀವ ಬಿಟ್ಟಿರುವ ವಿಚಾರ ತಿಳಿದ ಪತ್ನಿ ಜಯಮ್ಮಗೆ ಹೃದಯಾಘಾತ ಆಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರ ಹಳ್ಳಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.ನಿನ್ನೆ ಕಸ್ತೂರಿ ರಂಗಪ್ಪ ಪಡಿತರ ಅಕ್ಕಿ ತರಲು ಹೋಗಿದ್ದರು, ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನ ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು. ಕಸ್ತೂರಿ ರಂಗಪ್ಪ ಅವರ ವಿಚಾರವನ್ನು ಸ್ಥಳೀಯರು ಪತ್ನಿ ಜಯಮ್ಮಗೆ ಕರೆ ಮಾಡಿ ತಿಳಿಸಿದ್ದಾರೆ. ಫೋನ್ ಮೂಲಕ ವಿಚಾರ ತಿಳಿಯುತ್ತಿದ್ದಂತೆಯೇ ಜಯಮ್ಮ ಕುಸಿದು ಬಿದ್ದಿದ್ದರು. ದೇವರಹಳ್ಳಿ ಗ್ರಾಮದಲ್ಲಿ ಒಟ್ಟಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.