ಕರುನಾಡು ಘರ್ಜನೆ ಸುದ್ದಿ : ಧಾರವಾಡ: ನವಲೂರ ಬಳಿಯ ಮನೆಯೊಂದರಲ್ಲಿ ದಂಪತಿಗಳಿಗೆ ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣಕ್ಕೆ
ಸಂಬಂಧಿಸಿದಂತೆ ಆರೋಪಿಯೋರ್ವನ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ ಘಟನೆ ರಾಯಾಪುರದ ಬಳಿ ನಡೆದಿದೆ.
ಆಂದ್ರ ಮೂಲದ ವೆಂಕಟೇಶ್ವರ ಎಂಬಾತನ ಮೇಲೆ ಪಿ.ಎಸ್.ಐ ಪ್ರಮೋದ್ ಅವರು ಗುಂಡು ಹಾರಿಸಿದ್ದಾರೆ.
ಇದಕ್ಕೂ ಮೊದಲು ಪಿಎಸ್‌ಐ ಹಾಗೂ ಪೊಲೀಸ್ ಮೇಲೆ ಹಲ್ಲೆ ಯತ್ನ ನಡೆದಿದೆ.