ಕರುನಾಡು ಘರ್ಜನೆ ಸುದ್ದಿ : ಇಂದು ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗಂಗಿಮಡಿಯಲ್ಲಿ ಈ ಎರಡು ಶಾಲೆಗಳಿಗೆ ಎಂ. ಜಿ. ಚಾರಿಟೇಬಲ್ ಟ್ರಸ್ಟ್, ಹಾಗೂ ಅಬುಹುರೇರಾ ಮಸ್ಜಿದ್ ವತಿಯಿಂದ 5,6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಚಾರಿಟೇಬಲ್ ಟ್ರಸ್ಟನ ಕಾರ್ಯದರ್ಶಿಗಳಾದ ಮೌಲಾನಾ ಅಬ್ದುಲಗಪೂರಸಾಬ ಪಲ್ಲೇದರವರು ಮಕ್ಕಳನ್ನು ಉದ್ದೇಶಿಸಿ ಶಿಕ್ಷಣವೆಂಬುದು ಬಹು ಮಹತ್ವವಾದ ಹಾಗೂ ಜೀವನವನ್ನು ರೂಪಿಸಿಕೊಳ್ಳಲು ಅಗತ್ಯವಾದ ಸಾಧನ. ಎಷ್ಟೇ ಸಿರಿವಂತಿಕೆ, ಆಸ್ತಿ, ಹಣ ಇದ್ದರೂ ಕೂಡ ಸಿಗದೇ ಇರುವ ಒಂದು ಗೌರವ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಹಿರಿಯರೊಂದಿಗೆ ಗುರುಗಳೊಂದಿಗೆ ಸುಸಂಸ್ಕೃತ ವಾಗಿ ನಡೆದುಕೊಳ್ಳುವ ಬಗ್ಗೆ ಜೊತೆಗೆ ಪಠ್ಯಪುಸ್ತಕಗಳು, ಪೆನ್ನು ,ಹಾಳೆ ಇವೆಲ್ಲವುಗಳು ವಿದ್ಯೆ ನೀಡುವುದರಿಂದ ಬಹು ಗೌರವದಿಂದ ಶಿಸ್ತಿನಿಂದ ನಡೆದುಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು.
ಮುಂದಿನ ದಿನಗಳಲ್ಲಿ ಮಕ್ಕಳಿಗೆ ಓದು ಹಾಗೂ ಬರಹದ ಬಗ್ಗೆ ಒಂದು ಸ್ಪರ್ಧೆಯನ್ನು ನಡೆಸಿ ಉತ್ತಮವಾಗಿ ಹಾಗೂ ಸ್ಪಷ್ಟವಾಗಿ ಬರೆದು ಓದಿದ ಮಕ್ಕಳಿಗೆ 10,000 ಬಹುಮಾನವನ್ನು ನೀಡುವುದಾಗಿ ಅವರು ಹೇಳಿದರು. 
ಈ ಸಂದರ್ಭದಲ್ಲಿ ಶಹರ ವಲಯದ ಬಿ ಆರ್ ಪಿ ಯಾದ ಎಂ.ಎ ಯರಗುಡಿ ಅವರು ಮಾತನಾಡುತ್ತಾ
ಶಾಲೆಯಲ್ಲಿ ಪ್ರತಿ ಮಗು ಓದು ಬರಹ ಹಾಗೂ ಕನಿಷ್ಠ 30ರವರೆಗೆ ಮಗ್ಗಿಗಳನ್ನು ಹೇಳುವುದನ್ನು ರೂಢಿ ಮಾಡಿಕೊಳ್ಳಬೇಕು. ಮುಂದೆ ಪ್ರೌಢಶಾಲೆಗೆ ಹೋಗುವ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಪ್ರತಿದಿನ ಸ್ಪಷ್ಟ ಹಾಗೂ ಶುದ್ಧ ಎರಡು ಪುಟಗಳನ್ನು ಬರೆಯುವ ರೂಢಿ ಮಾಡಿಕೊಳ್ಳಬೇಕು. ಅದಕ್ಕಾಗಿತಮಗೆ ಈ ನೋಟ್ ಪುಸ್ತಕಗಳನ್ನು ಕೊಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಿ.ಆರ್.ಪಿ ಶಿಲ್ಪಾ ಹಳ್ಳಿಕೇರಿ ಅವರು ಅವರು ಮಾತನಾಡುತ್ತಾ ಇಲಾಖೆಯ ಆಶಯದಂತೆ ಸರಕಾರವು ನೀಡುವ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಚೆನ್ನಾಗಿ ಓದಬೇಕು ಹೀಗಾಗಿ ತಾವು ಶಾಲೆಯಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡು ಭವಿಷ್ಯ ನಿರ್ಮಾಣ ಮಾಡಿಕೊಳ್ಳುವುದರ ಕಡೆಗೆ ಗಮನಕೊಡಬೇಕು ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆರ್ ಬಿ ಸಂಕಣ್ಣವರ ನಮ್ಮ ಶಾಲೆಗೆ ಇಂದು ಬಂದು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಕೊಡುತ್ತಿರುವ ಎಂ.ಜಿ ಚಾರಿಟೇಬಲ್ ಟ್ರಸ್ಟ್ ನವರು ಸದಾ ನಮ್ಮ ಶಾಲೆಯೊಂದಿಗೆ ಇರುವುದರೊಂದಿಗೆ ಮಕ್ಕಳ ಸರ್ವಾಂಗಣ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು .
ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ. ಸೈನಾಜ ಚಾಹುಸೇನ್ ಅವರು ಮಾತನಾಡುತ್ತಾ ಇಂದು ನಮ್ಮ ಶಾಲೆಗೆ ಬಂದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲು ಕಾಣಿಕೆ ರೂಪದಲ್ಲಿ ಲೇಖನ ಸಾಮಗ್ರಿ ಕೊಡುತ್ತಿರುವುದು ನಿಜಕ್ಕೂ
ಸಂತಸದಾಯಕ ಎಂದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಎಂ ಜಿ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರಾದ ಮಕ್ತುಮಸಾಬ ನಾಯಕ, ಅಬುಹುರೇರಾ ಮಸೀದಿಯ ಅಧ್ಯಕ್ಷರಾದ ಚಾಂದಸಾಬ ಅಬ್ಬಿಗೇರಿ,
ಕಾರ್ಯದರ್ಶಿ ಮಹಮ್ಮದಸಾಬ ಬೋದ್ಲೆಖಾನ, ಖಜಾಂಚಿ ಮೈನುದ್ದಿನ್ ಗುಜಮಾಗಡಿ, ಮೋದಿನಸಾಬ ಕನಕವಾಡ,ಮಹಮ್ಮದ ರಫೀಕ ಬಾಗಲಕೋಟ, ಖಾನಸಾಬ ಗುಜ್ಮಾಗಡಿ ಹಾಗೂ ಎರಡು ಶಾಲೆಯ ಶಿಕ್ಷಕರ ಬಳಗ ಹಾಗೂ ಅಬುಹುರೇರಾ ಮಸೀದಿಯ ಹಿರಿಯರು ಹಾಗೂ ಎಂ ಜಿ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು ಹಾಜರಿದ್ದರು.