ಕರುನಾಡು ಘರ್ಜನೆ ಸುದ್ದಿ :ಗದಗ ಜನೆವರಿ 18: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜನೆವರಿ 19 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 1–ಎಸ್‌ಎಂಕೃಷ್ಣ ನಗರ ಪೂರ್ತಿ ಭಾಗಗಳು. ವಾರ್ಡ್ 21, 22 – ವಿಜಯನಗರ ಶಾಲೆಯ ಭಾಗ, ಕುರುಗಲ ಲೇಔಟ, ವಾಲ್ಮೀಕಿ ಭವನ, ಕಮತರ ಪ್ಲಾಟ, ಟವರ ಕಂಬ ಉಳಿದ ಕೆಲವು ಭಾಗಗಳು. ವಾರ್ಡ್ 29 – ಸಾಯಿನಗರ, ದೇವರಾಜ ಹಾಸ್ಟೆಲ, ಕಲಾಮಂದಿರ ರಸ್ತೆ ಉಳಿದ ಕೆಲವು ಭಾಗಗಳು. ವಾರ್ಡ್ 21, 23 – ಬುಮಾ ಲೈನ, ಗುಳಗುಂದಿ ಲೈನ, ಸ್ಮಶಾನಗಟ್ಟಿ, ಹಕ್ಕಿ ಪ್ಲಾಟ, ಮುನವಳ್ಳಿ ಪ್ಲಾಟ, ಕಮತರ ಪ್ಲಾಟ, ಎಲಿಗಾರ ಪ್ಲಾಟ, ಮಸೂತಿ, ಲಕ್ಷ್ಮೇಶ್ವರ ಮನೆ ಲೈನ, ಕರಬಿಸ್ಟಿಯವರ ಲೈನ, ತುಪ್ಪದವರ ಲೈನ ಉಳಿದ ಕೆಲವು ಭಾಗಗಳು. ವಾರ್ಡ್ 33 – ಬಾಲಾಜಿ ನಗರ, 9 ನಂ ಶಾಲೆ, ಆರ ಕೆ ನಗರ ಉಳಿದ ಕೆಲವು ಭಾಗಗಳು. ವಾರ್ಡ್ 6 – ಪಂಪಣ್ಣವರ ಲೈನ, ನಾವಳ್ಳಿಯವರ ಲೈನ, ಪಂಚ ಲಕ್ಷ್ಮಿ ಬಡಾವಣೆ ಉಳಿದ ಕೆಲವು ಭಾಗಗಳು.
ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ, ತುಂಗಭದ್ರಾ ನದಿಯಿಂದ ಹೊಸದಾಗಿ ನೀರು ಸರಬರಾಜು ಆಗುತ್ತಿದೆ ಹಾಗಾಗಿ ನೀರನ್ನು ಕಾಯಿಸಿ ಆರಿಸಿ ಕುಡಿಯಲು ನಿರ್ದೇಶನ ನೀಡಲಾಗಿದೆ ತಮಗೆ ನೀರು ಸಾಕಾದಾಗ ತಮ್ಮ ತಮ್ಮ ನೀರಿನ ನಳಗಳನ್ನು ಬಂದ ಮಾಡುವ ಮೂಲಕ ನೀರು ಪೋಲಾಗದಂತೆ ತಡೆಯುವಲ್ಲಿ ಮುತುವರ್ಜಿ ವಹಿಸಬೇಕೆಂದು ಹಾಗೂ ತಮ್ಮ ನೀರಿನ ಕರ ಪಾವತಿಸುವಲ್ಲಿ ತಾವು ವಿಳಂಬ ಮಾಡದೇ ತಮ್ಮ ಬಾಕಿ ಇರುವ ನೀರಿನ ಕರವನ್ನು ನಗರಸಭೆಗೆ ಪಾವತಿಸಬೇಕು. ಒಂದು ವೇಳೆ ಈ ರೀತಿ ಮಾಡದೇ ಹೋದ ಸಂದರ್ಭದಲ್ಲಿ ತಮಗೆ ದಂಡ ವಿಧಿಸಿ ತಮ್ಮ ನೀರಿನ ನಳವನ್ನು ಬಂದ ಮಾಡಲಾಗುವುದು ಎಂದು ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.