ಕರುನಾಡು ಘರ್ಜನೆ ಸುದ್ದಿ :ಗದಗ ಜನೆವರಿ 22: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜನೆವರಿ 23 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 28 – ಪಂಚಾಕ್ಷರಿ ನಗರ 2 ನೇ, 3 ನೇ ಕ್ರಾಸಗಳು ಉಳಿದ ಕೆಲವು ಭಾಗಗಳು. ವಾರ್ಡ್ 11, 12 – ನಿಸರ್ಗ ಬಡಾವಣೆ, ಕರಿಯಮ್ಮ ಕಲ್ಲು, ಗಣಪತಿ ಕಟ್ಟಿ, ಪಿ ಮತ್ತು ಟಿ ಕ್ವಾಟ್ರಸ, ರಾಘವೇಂದ್ರ ಗುಡಿ, ಬಾವಿಕಟ್ಟಿ, ಹನುಮಂತ ದೇವರ ಗುಡಿ, ಚರ್ಚ ಭಾಗ ಉಳಿದ ಕೆಲವು ಭಾಗಗಳು. ವಾರ್ಡ್ 6 – ಸಿದ್ದಲಿಂಗ ನಗರ ಪೂರ್ತಿ ಭಾಗಗಳು, ಕನ್ಯಾಳ ಅಗಸಿ ಉಳಿದ ಕೆಲವು ಭಾಗಗಳು. ವಾರ್ಡ್ 30, 34 – ವಡ್ಡರಗೇರಿ, ಕುಂಚಿ ಕೊರವರ ಓಣಿ, ಮೂರು ಶಿಳ್ಳಿನ ವಕಾರ, 1 ನೇ ಕ್ರಾಸ, ಶಿವಾನಂದ ಗಾರ್ಡನ, 46 ಪ್ಲಾಟ ಉಳಿದ ಕೆಲವು ಭಾಗಗಳು. ವಾರ್ಡ್ 20, 21, 25 – ಪಡಗದ ಭಾಗ 1,2 , ಸಿಂಧನೂರವರ ಲೈನ, ಬೇವಿನ ಮರದಮ್ಮ, ಹುಲಿಗೆಮ್ಮನ ಗುಡಿ, ಕೊಟ್ಟೂರ, ಎಸ ಟಿ ಡಿ, ಗೌಳಿಯವರ ಲೈನ, ಕೆರಕಲಮಟ್ಟಿ, ಸಿಟಿ ಹಾಲ ಭಾಗ-1,2 , ಕಲಬಂಡಿಯವರ ಲೈನ, 2 ನಂ ಶಾಲೆ, ಹಾಳದಿಬ್ಬ, ಸೋಮೇಶ್ವರ ಗುಡಿ, ಶರೀಫ ಅಜ್ಜನ ಗದ್ದುಗೆ, ಖಾನತೋಟ ಉಳಿದ ಕೆಲವು ಭಾಗಗಳು.
ತುಂಗಭದ್ರಾ ನದಿಯಿಂದ ಸರಬರಾಜು ಆಗುತ್ತಿರುವ ನೀರನ್ನು ಕಾಯಿಸಿ ಆರಿಸಿ ಕುಡಿಯಲು ನಿರ್ದೇಶನ ನೀಡಲಾಗಿದೆ ಹಾಗೂ ತಮಗೆ ನೀರು ಸಾಕಾದಾಗ ತಮ್ಮ ತಮ್ಮ ನೀರಿನ ನಳಗಳನ್ನು ಬಂದ ಮಾಡುವ ಮೂಲಕ ನೀರು ಪೋಲಾಗದಂತೆ ತಡೆಯುವಲ್ಲಿ ಮುತುವರ್ಜಿ ವಹಿಸಬೇಕೆಂದು ಹಾಗೂ ತಮ್ಮ ನೀರಿನ ಕರ ಪಾವತಿಸುವಲ್ಲಿ ತಾವು ವಿಳಂಬ ಮಾಡದೇ ತಮ್ಮ ಬಾಕಿ ಇರುವ ನೀರಿನ ಕರವನ್ನು ನಗರಸಭೆಗೆ ಪಾವತಿಸಬೇಕೆಂದು ತಿಳಿಸಿರುತ್ತಾರೆ. ಒಂದು ವೇಳೆ ಈ ರೀತಿ ಮಾಡದೇ ಹೋದ ಸಂದರ್ಭದಲ್ಲಿ ತಮಗೆ ದಂಡ ವಿಧಿಸಿ ತಮ್ಮ ನೀರಿನ ನಳವನ್ನು ಬಂದ ಮಾಡಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.