ಕರುನಾಡು ಘರ್ಜನೆ ಸುದ್ದಿ :ಗದಗ: ಬೆಂಗಳೂರಿನ ರಾಜರಾಜೇಶ್ವರಿ ನಗರ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನಕ್ಕೆ ಸೇರಿದ ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಶ್ರೀ ಕೈಲಾಸ ಆಶ್ರಮದ 33ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಜನವರಿ 28ರ ಮಂಗಳವಾರ ಬೆಳಿಗ್ಗೆ 11ಕ್ಕೆ ಜರುಗಲಿದೆ.
ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಸಂಸ್ಥಾಪಕರಾದ ಶ್ರೀ ತಿರುಚ್ಚಿ ಮಹಾಸ್ವಾಮಿಗಳವರ ಪರಿಪೂರ್ಣ ಕೃಪಾಶೀರ್ವಾದಳೊಂದಿಗೆ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳ ಸಾನ್ನಿಧ್ಯ ವಹಿಸುವರು. 
ಶಿವಾನಂದ ಮಠದ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು, ಶಿರಜಟ್ಟಿಯ ಫಕೀರೇಶ್ವರ ಮಹಾಸಂಸ್ಥಾನ ಮಠದ ಫಕೀರೇಶ್ವರ ಮಹಾಸ್ವಾಮಿಗಳು, ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಗದಗ-ವಿಜಯಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು, ಗದಗನ ಪ್ರಜಾಪಿತ ಬಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಹ್ಮಕುಮಾರಿ ಜಯಂತಿ ಅಕ್ಕನವರು “ಇಂದ್ರಿಯಾತೀತ ಜ್ಞಾನ ಅಥವಾ ಅನುಭವ” ಕುರಿತು ಉಪದೇಶಾಮೃತ ನೀಡುವರು.
ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಕೈಲಾಸ ಆಶ್ರಮದ ಧರ್ಮದರ್ಶಿಗಳಾದ ಎಸ್.ಕೆ. ಪಾಟೀಲ, ರವಿ ಎಂ. ಮೂಲಿಮನಿ, ಕೆ.ಆರ್. ಪ್ರಭು, ಎನ್.ಆರ್. ಸಾವಕಾರ, ಜೆ.ಕೆ. ಜಮಾದಾರ್, ಹಯಗ್ರೀವಾಚಾರ್, ಸಿ.ಬಿ. ಕರಿಕಟ್ಟಿ, ಎಂ.ಡಿ. ದುರ್ಗಣ್ಣವರ, ಶಿವರತ್ನಕುಮಾರ ಪಾಟೀಲ, ಡಿ.ಜಿ. ಜೋಗಣ್ಣವರ ಪಾಲ್ಗೊಳ್ಳುವರು.
ಸಂಜೆ 6ಕ್ಕೆ ಜಗನ್ಮಾತೆ ಶ್ರೀ ರಾಜರಾಜೇಶ್ವರಿ ಮತ್ತು ಶ್ರೀಗಳವರ ಹೂವಿನ ಪಲ್ಲಕ್ಕಿಯಲ್ಲಿ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.