ಕರುನಾಡು ಘರ್ಜನೆ ಸುದ್ದಿ ಗದಗ : ಗದಗನಲ್ಲಿ ಪೊಲೀಸರು ಬಡ್ಡಿ ದಂಧೆಕೋರರಿಗೆ ಸರಿಯಾದ ಪಾಠ ಮಾಡ್ತಿದ್ದಾರೆ . ಗದಗನಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದೆ . ಹೀಗಾಗಿ ಇವರ ಹಾವಳಿಗೆ ಬ್ರೇಕ್ ಹಾಕೋಕೆ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತುಕೊಂಡಿದೆ .
ಎರಡು ದಿನಗಳ ಹಿಂದಷ್ಟೇ ಸುಮಾರು 12 ಜನರಿಗೆ ಬಿಸಿ ಮುಟ್ಟಿಸಿದ್ದ ಖಾಕಿ , ಇದೀಗ ಗದಗನ ದೊಡ್ಡ ಬಡ್ಡಿ ಕುಳಕ್ಕೆ ಸೇರಿದ 12 ಕಡೆ ದಾಳಿ ಮಾಡಿ ಕಂತೆ ಕಂತೆ ಹಣ ಜಪ್ತಿ ಮಾಡಿದ್ದು , ಬಡ್ಡಿ ಕಿರುಕುಳ ಅನುಭವಿಸ್ತಿದ್ದ ಬಡಪಾಯಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ . ಎರಡು ದಿನಗಳ ಹಿಂದಷ್ಟೇ , ಸುಮಾರು 12 ಜನ ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ಮಾಡಿ ಸುಮಾರು 26 ಲಕ್ಷ ಕ್ಕೂ ಅಧಿಕ ಹಣ ಜಪ್ತಿ ಮಾಡಿದ್ದರು .
ಈಗ ಒಬ್ಬನೇ ವ್ಯಕ್ತಿಗೆ ಸೇರಿದ ಬಡ್ಡಿಕುಳನ ಮನೆ ಮೇಲೆ , ಸುಮಾರು 12 ಕಡೆ ದಾಳಿ ಮಾಡಿ ಕೋಟಿ ಕೋಟಿ ಹಣ ಜಪ್ತಿ ಮಾಡಿದ್ದಾರೆ.ಈ ಮೂಲಕ ಅಕ್ರಮ ಬಡ್ಡಿ ದಂಧೆಕೋರರರಿಗೆ ನಡುಕ ಹುಟ್ಟಿಸಿದ್ದಾರೆ .
ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ ಮತ್ತು ಅವನ ಸಂಬಂಧಿಕರ ಮನೆ ಸೇರಿದಂತೆ 12 ಕಡೆ ದಾಳಿ ಮಾಡಿ 1.50 ಕೋಟಿ ಅಧಿಕ ಹಣ ಜಪ್ತಿ ಮಾಡಿದ್ದಾರೆ . ಜೊತೆಗೆ ಸಾಕಷ್ಟು ಚಿನ್ನಾಭರಣ ಹಾಗೂ ಅಡಮಾನದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.