ಕರುನಾಡು ಘರ್ಜನೆ ಸುದ್ದಿ ಗದಗ : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಗದಗ ನಗರಸಭೆ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ( ಇಂಜಿನಿಯರ ) ಎಚ್ . ಬಂಡಿವಡ್ಡರ ಅವರನ್ನು ಪೌರಾಡಳಿತ ನಿರ್ದೇಶನಾಲಯ ಸೇವೆಯಿಂದ ಅಮಾನತುಗೊಳಿಸಿ ಶುಕ್ರವಾರ ಸಂಜೆ ಆದೇಶಿಸಿದೆ .
ಇತ್ತೀಚೆಗೆ ಬಂಡಿವಡ್ಡರ ನಿವಾಸ , ಅವರ ಸಹೋದರರ ನಿವಾಸ , ಸೀಮೀಕೆರಿ ಗ್ರಾಮದ ಮನೆ , ತೋಟದ ಮನೆ ಸೇರಿ ಇತರೆಡೆ ಲೋಕಾಯುಕ್ತರು ದಾಳಿ ನಡೆಸಿದ್ದರು . ದಾಳಿ ವೇಳೆ ಶೇ . 145 ರಷ್ಟು ಅಕ್ರಮ ಆಸ್ತಿ ಗಳಿಕೆಯನ್ನು ಲೋಕಯುಕ್ತರು ಪತ್ತೆ ಹಚ್ಚಿದ್ದರು . ಚರ , ಸ್ಥಿರ ಆಸ್ತಿಗಳ ಮೌಲ್ಯಕ್ಕೂ , ಬಂಡಿವಡ್ಡರ ಅವರ ಮೂಲ ಸಂಪಾದನೆಗೂ ವ್ಯತ್ಯಾಸ ಕಂಡು ಬಂದಿತ್ತು .
ಲೋಕಾ ಪರಿಶೀಲನೆಗೂ ಮುನ್ನ ಬಂಡಿವಡ್ಡರ ಅವರ ಆಸ್ತಿ ಮೌಲ್ಯ 1.50 ಲಕ್ಷ ರೂ ಇತ್ತು ಎಂದು ದಾಖಲೆ ಪರಾವೆ ತಿಳಿವೆ . ಲೋಕಾ ಪರಿಶೀಲನೆ ಅಂತ್ಯಕ್ಕೆ 1.74 ಕೋಟಿ ಮೌಲ್ಯ ಕಂಡು ಬಂದಿದೆ . ಪರಿಶೀಲನೆ ಅವಧಿಯಲ್ಲಿ ಚರ ಮತ್ತು ಸ್ಥಿರ ಆಸ್ತಿಗಳ ಮೌಲ್ಯ 1.72 ಕೋಟಿ ಪತ್ತೆ ಆಗಿದ್ದು , ಆರೋಪಿತ ಬಂಡಿವಡ್ಡರ ಅವರ ಒಟ್ಟು ಆದಾಯ 86 ಲಕ್ಷ ಎಂದು ಲೋಕಾ ತನಿಖೆ ವೇಳೆ ಕಂಡು ಬಂದಿದೆ .
ಲೋಕಾ ದಾಳಿ ಹಿನ್ನೆಲೆ ಕರ್ನಾಟಕ ನಾಗರಿಕ ಸೇವಾ ( ವರ್ಗೀಕರಣ , ನಿಯಂತ್ರಣ , ಮೇಲ್ಮನವಿ ) 1957 ರ ನಿಯಮ 9 / 2 / C ನಿಯಮದಂತೆ ಪೌರಾಡಳಿ ಇಲಾಖೆ ಅಮಾನತು ಆದೇಶ ನೀಡಿದೆ . ಮತ್ತು ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆಗೆ ಕಿರಿಯ ಅಭಿಯಂತರ ಹುದ್ದೆಗೆ ಬಂಡಿವಡ್ಡರ ಅವರನ್ನು ವರ್ಗಾಯಿಸಿದೆ .
ಅಮನಾತ್ತಿನ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಪರವಾನಿಗೆ ಇಲ್ಲದೇ ಕೇಂದ್ರಸ್ಥಾನ ( ಇಳಕಲ್ ) ತೊರೆಯದಂತೆ ಆದೇಶದಲ್ಲಿ ತಿಳಿಸಿದೆ .ಲೋಕಾ ದಾಳಿ ನಂತರ ಅಧಿಕಾರಿಗಳ ಮೇಲೆ ಸಕ್ಷಮ ಪ್ರಾಧಿಕಾರ ಕ್ರಮ ಕೈಗೊಳ್ಳಲಾಗಿದೆ.