ಕರುನಾಡು ಘರ್ಜನೆ ಸುದ್ದಿ :ಗದಗ ಜಿಲ್ಲೆಯ ಪ್ರವಾಸದಲ್ಲಿರುವ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರು ಗದಗ ಜಿಲ್ಲೆಯ ಹುಲಿಕೋಟೆಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ ಸಹಯೋಗದಿಂದ ಕಾರ್ಮಿಕರ ಸಮುದಾಯ ಭವನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ
ಮಾನ್ಯ ಶ್ರೀ ಎಚ್ ಕೆ ಪಾಟೀಲ್ ಮಾನ್ಯ ಕಾನೂನು ಸಚಿವರು ಮತ್ತು ಶ್ರೀ ಸಂತೋಷ್ ಲಾಡ್, ಮಾನ್ಯ ಕಾರ್ಮಿಕ ಸಚಿವರು ಇವರ ಉಪಸ್ಥಿತಿಯಲ್ಲಿ ನೆರವೇರಿತು.ನಂತರ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರು ಗದಗ ಸರ್ಕ್ಯೂಟ್ ಹೌಸ್ ನಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಸಿ.ಎಂ.ಶ್ರೀಧರ್, ಪೋಲೀಸ್ ವರಿಷ್ಠಾಧಿಕಾರಿಗಳಾದ ನೇಮಗೌಡ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಂಕನೂರು , ಶ್ರೀ ಜಿ.ಎಸ್.ಪಾಟೀಲ್, ಮಾನ್ಯ ಶಿರಹಟ್ಟಿ ಕ್ಷೇತ್ರದ ಶಾಸಕರು, ಸ್ಥಳೀಯ ಮುಖಂಡರು ಬಾಗವಹಿಸಿ ಚರ್ಚೆ ಮಾಡಿದರು