ಕರುನಾಡು ಘರ್ಜನೆ ಸುದ್ದಿ: ವಿಜಯಪುರ: ಇಲ್ಲಿನ ಅಂಜುಮನ್ ಇಸ್ಲಾಂ ಕಮಿಟಿಯ ನವೀಕರಣಕ್ಕಾಗಿ ₹ಒಂದೂವರೆ ಲಕ್ಷ ರೂ. ಲಂಚ ಪಡೆಯುವಾಗ ಜಿಲ್ಲಾ ವಕ್ಪ್ ಬೋರ್ಡ್ ಲೆಕ್ಕಾಧಿಕಾರಿ ಮಹಮ್ಮದ್ ಮೊಸಿನ್ ಜಮಖಂಡಿ ಹಾಗೂ ಆತನ ಸಹೋದರ ಮುಜಾಹಿದ್ ಜಮಖಂಡಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಲಂಚದ ಹಣವನ್ನು ಸೋಮವಾರ ರಾತ್ರಿ ಪಡೆದುಕೊಳ್ಳುವಾಗ ಲೋಕಾಯುಕ್ತ ಎಸ್.ಪಿ ಟಿ.ಮಲ್ಲೇಶ್, ಇನ್ಸ್ಪೆಕ್ಟರ್ಗಳಾದ ಆನಂದ ಟಕ್ಕಣ್ಣವರ ಮತ್ತು ಆನಂದ ದೋಣಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.