ಕರುನಾಡು ಘರ್ಜನೆ ಸುದ್ದಿ :ಕಲಬುರಗಿ: ಒಂದಿಲ್ಲೊಂದು ಹಗರಣ ಹಾಗೂ ಆರೋಪಗಳಿಂದ ಸದಾ ಸುದ್ದಿಯಲ್ಲಿರುವ ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ಗುರುವಾರ (ಫೆ.27) ಲೋಕಾಯುಕ್ತದ ಐದು ತಂಡಗಳು ದಾಳಿ ನಡೆಸಿದೆ.
ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ವಿನಾಕಾರಣ ವಿಳಂಬ, ನಕಲು ಪ್ರಮಾಣ ಪತ್ರ ನೀಡಿಕೆ, ಎಲ್ಲದಕ್ಕೂ ಲಂಚ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ ನೇತೃತ್ವದಲ್ಲಿ ಏಕಕಾಲಕ್ಕೆ ಐದು ತಂಡಗಳೊಂದಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.