ಕರುನಾಡು ಘರ್ಜನೆ ಸುದ್ದಿ ಗದಗ: ಈ ಎರಡು ದಿನಗಳ ಹಿಂದೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ನ ಕೃಷ್ಣಾ ಪರಾಪುರ ಆಯ್ಕೆಯಾಗಿದ್ದು ಉಪಾಧ್ಯಕ್ಷಿ ಶಕುಂತಲಾ ಅಕ್ಕಿ ಆಯ್ಕೆ ಆಗಿದ್ದಾರೆ 17 ಕಾಂಗ್ರೆಸ್ ಸದಸ್ಯರು, ಓರ್ವ ಶಾಸಕರ ಮತದಿಂದ ಅಭ್ಯರ್ಥಿಗಳು ಆಯ್ಕೆಗೊಂಡಿದ್ದು ಬಹಳ ಹೈಡ್ರಾಮಾದಿಂದ ನಡೆದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ!
ಉಚ್ಚ ನ್ಯಾಯಾಲಯ ಅಧಿಕಾರಿಕ್ಕೆ ತಡೆಯಾಜ್ಞೆ..!
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ದಿನಾಂಕ 28.02.2025 ರ ಚುನಾವಣೆಯ ಪ್ರಕ್ರಿಯೆಯ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಈ ಮೂಲಕ ತಿಳಿಸುವುದೆನೆಂದರೆ , ಸದರಿ ಗದಗ ಬೆಟಗೇರಿ ನಗರ ಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಇವರ ಡಬ್ಲ್ಯೂಪಿ ನಂ .100124 / 2025 ದಿನಾಂಕ 28.02.2025 ರ ಆದೇಶದಂತೆ , ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಇವರ ಮುಂದಿನ ಚುನಾವಣೆ , ನಡವಳಿಯಂತೆ ಘೋಷಿತ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು ,
ತಡೆಹಿಡಿಯಲಾಗಿದ್ದು , ಕಾರಣ ಘೋಷಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸದರ ನಗರಸಭೆಯ ಆಧಿಕಾರಭಾರ ಮತ್ತು ಯಾವುದೇ ಕಾರ್ಯ ಕಲಾಪಗಳನ್ನು ನಡೆಸದಂತೆ ಈ ಮೂಲಕ ಸೂಚಿಸಿದೆ. ಆದೇಶದವರೆಗೆ ತಮ್ಮ ಉಪವಿಭಾಗಾಧಿಕಾರಿ , ಗದಗ ಉಪವಿಭಾಗ ಗದಗ ಬೆಟಗೇರಿ ಇವರ ಉಪವಿಭಾಗಾಧಿಕಾರಿಗಳು ಪತ್ರದ ಮುಖಾಂತರ ತಿಳಿಸಿರುತ್ತಾ.