ಕರುನಾಡು ಘರ್ಜನೆ ಸುದ್ದಿ : ಗದಗ ಮಾರ್ಚ 3: ದಿನಾಂಕ: 02-03-2025 ರಂದು ಗಿಣಿಗೇರಾ-ಜಬ್ಬಲಗುಡ್ಡಾ ರೈಲ್ವೆ ನಿಲ್ದಾಣಗಳ ಮದ್ಯೆ ಒಬ್ಬ ಅಪರಿಚಿತ ಗಂಡಸು ವಯಾ ಸುಮಾರು 35-40 ವರ್ಷದವನು ಯಾವುದೋ ರೈಲಿಗೆ ಸಿಕ್ಕು ಮೃತಪಟ್ಟಿದ್ದು. ಈ ಸಂಬAಧ ಗದಗ ರೇಲ್ವೆ ಪೊಲೀಸ ಠಾಣೆ ಯುಡಿಆರ್ ನಂಬರ 08/2025 ಕಲಂ 194 ಬಿ.ಎನ್.ಎಸ್.ಎಸ್ ನೇದ್ದರ ರೀತ್ಯ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಒಂದು ವೇಳೆ ಸದರಿ ಮೃತನು ಪತ್ತೆ ಆದಲ್ಲಿ ಗದಗ ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ನಂ08372-278744 ಅಥವಾ ಮೊ.ನಂ.-9480802128 gadagrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080- 22871291 ನೇದ್ದಕ್ಕೆ ತಿಳಿಸಬಹದಾಗಿದೆ ಎಂದು ಗದಗ ರೇಲ್ವೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
ಮೃತನ ಚಹರೆ ಪಟ್ಟಿಯ ವಿವರ:-
ವಯಾ ಸುಮಾರು 35-40 ವರ್ಷ, ಸಾದಾ ಕಪ್ಪು ಮೈಬಣ್ಣ, ಸಾದಾರಣ ಮೈಕಟ್ಟು, ಸುಮಾರು 5 ಪೂಟ 2 ಇಂಚು ಎತ್ತರ, ತಲೆಯಲ್ಲಿ ಸುಮಾರು 2-3 ಇಂಚು ಕಪ್ಪು ಕೂದಲು. 1 ಇಂಚಿನಷ್ಟು ದಾಡಿ-ಮೀಸೆ ಬಿಟ್ಟಿರುತ್ತಾನೆ. ಮೃತನ ಬಲಗೈ ಮೇಲೆ “ದೇವರಾಜ” ಅಂತಾ ಅಚ್ಚೆ ಗುರ್ತು ಇರುತ್ತದೆ.
ಬಟ್ಟೆ ಬರೆಗಳ ವಿವರ :- ಮೃತನ ಮೈಮೇಲೆ ಒಂದು ಚಾಕಲೇಟ ಕಲರಿನ ನೈಟ್ ಪ್ಯಾಂಟ್ ಧರಿಸಿರುತ್ತಾನೆ.