Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅಪರಾಧ

ರಾಜಸ್ಥಾನದ: ಮೂವರು ಬಾಲಕಿಯರ ಅಪಹರಣ ಅಪಹರಣಕಾರರಿಗೆ ಎಚ್ಚರಿಕೆ ನೀಡಿದ ಸಚಿವ.!

ಕರುನಾಡು ಘರ್ಜನೆ ಸುದ್ದಿ : ರಾಜಸ್ಥಾನದ ಸುಕೇತ್​​ ನಗರದಲ್ಲಿ ಮೂವರು ಬಾಲಕಿಯರು ಅಪಹರಣವಾಗಿದ್ದು, ಅವರನ್ನು ಬಿಡುಗಡೆ ಮಾಡಲು ಸಚಿವ ಮದನ್ ದಿಲಾವರ್ ಸೂಚನೆ ನೀಡಿದ್ದಾರೆ.   ಕೋಟಾ (ರಾಜಸ್ಥಾನ) : “ಅಪಹರಣವಾದ ಅಪ್ರಾಪ್ತ ಬಾಲಕಿಯರನ್ನು ಮರಳಿಸದಿದ್ದರೆ, ಆರೋಪಿಗಳಿಗೆ ಸಂಬಂಧಿಸಿದ ಮನೆ, ಆಸ್ತಿ-…

ಕರುನಾಡು ಘರ್ಜನೆ ಸುದ್ದಿ : ರಾಜಸ್ಥಾನದ ಸುಕೇತ್​​ ನಗರದಲ್ಲಿ ಮೂವರು ಬಾಲಕಿಯರು ಅಪಹರಣವಾಗಿದ್ದು, ಅವರನ್ನು ಬಿಡುಗಡೆ ಮಾಡಲು ಸಚಿವ ಮದನ್ ದಿಲಾವರ್ ಸೂಚನೆ ನೀಡಿದ್ದಾರೆ.

 

ಕೋಟಾ (ರಾಜಸ್ಥಾನ) : “ಅಪಹರಣವಾದ ಅಪ್ರಾಪ್ತ ಬಾಲಕಿಯರನ್ನು ಮರಳಿಸದಿದ್ದರೆ, ಆರೋಪಿಗಳಿಗೆ ಸಂಬಂಧಿಸಿದ ಮನೆ, ಆಸ್ತಿ- ಪಾಸ್ತಿಯನ್ನು ಬುಲ್ಡೋಜರ್​ನಿಂದ ನಾಶ ಮಾಡಲಾಗುವುದು” ಎಂದು ರಾಜಸ್ಥಾನದ ಶಿಕ್ಷಣ ಮತ್ತು ಪಂಚಾಯತ್ ರಾಜ್ ಸಚಿವ ಮದನ್ ದಿಲಾವರ್ ಅವರು ಎಚ್ಚರಿಕೆ ನೀಡಿದ್ದಾರೆ.

 

ಇತ್ತೀಚೆಗೆ ಸುಕೇತ್​​ ನಗರದಲ್ಲಿ ಮೂವರು ಅಪ್ರಾಪ್ತ ಮಕ್ಕಳನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ ಎಂದು ತಿಳಿಸಿದಾಗ, “ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳು ಮಕ್ಕಳನ್ನು ವಾಪಸ್​​ ಕರೆತರಬೇಕು. ಇಲ್ಲವಾದಲ್ಲಿ ಅವರ ಮನೆಗಳ ಮೇಲೆ ಬುಲ್ಡೋಜರ್​ ಹತ್ತಿಸಲಾಗುವುದು ಎಂದು ಗುಡುಗಿದರು.

 

ತುಂಬು ಸಭೆಯಲ್ಲಿ ಬಹಿರಂಗವಾಗಿ ಅಪರಾಧಿಗಳಿಗೆ ಎಚ್ಚರಿಕೆ ರವಾನಿಸಿದ ಸಚಿವರು, ಗೂಂಡಾಗಳೇ ಕೇಳಿಸಿಕೊಳ್ಳಿ. ಎರಡು-ಮೂರು ದಿನಗಳಲ್ಲಿ ಅಪ್ರಾಪ್ತೆಯನ್ನು ಬಿಡುಗಡೆ ಮಾಡದಿದ್ದರೆ, ನೀವು ಕೆಟ್ಟ ಪರಿಸ್ಥಿತಿಯನ್ನು ಎದುರಿಸಲಿದ್ದೀರಿ. ನಿಮ್ಮ ಮನೆಗಳ ಮೇಲೆ ಬುಲ್ಡೋಜರ್ ಪ್ರಹಾರವಾಗಲಿದೆ. ಇಷ್ಟೇ ಅಲ್ಲ, ನಿಮ್ಮ ಎಲ್ಲ ಆಸ್ತಿ- ಪಾಸ್ತಿಗಳನ್ನು ನಾಶ ಮಾಡಲಾಗುವುದು. ಗೂಂಡಾಗಳ ಕುಟುಂಬಗಳೂ ಇದರಲ್ಲಿ ಭಾಗಿಯಾಗಿದ್ದರೆ, ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದರು.

 

 

ನಾವೆಲ್ಲರೂ ಬಂಧುಗಳಂತೆ ಬದುಕುತ್ತಿದ್ದೇವೆ. ಇದರರ್ಥ ನಿಮ್ಮ ಗೂಂಡಾಗಿರಿ ಸಹಿಸಿಕೊಳ್ಳುತ್ತೇವೆ ಎಂದಲ್ಲ. ನಾವು ಮನಸ್ಸು ಮಾಡಿದರೆ, ನಿಮ್ಮನ್ನು ಅಧೋಗತಿಗೆ ತರಲಾಗುವುದು ಎಂದು ಹೇಳಿ, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಡಿಎಸ್​​ಪಿ ಅವರಿಗೆ ಇರುವ ಎಲ್ಲ ಕೆಲಸಗಳನ್ನು ಬಿಟ್ಟು ಕಾಣೆಯಾದ ಬಾಲಕಿಯರನ್ನು ಹುಡುಕುವಂತೆ ತಾಕೀತು ಮಾಡಿದರು.

 

ಪೊಲೀಸರಿಂದಲೂ ವಿವರಣೆ: ಸ್ಥಳದಲ್ಲಿದ್ದ ಸುಕೇತ್ ಪೊಲೀಸ್ ಠಾಣಾಧಿಕಾರಿ ಚೋಟು ಸಿಂಗ್ ಅವರನ್ನು ಎಷ್ಟು ಹುಡುಗಿಯರು ಕಾಣೆಯಾಗಿದ್ದಾರೆ ಎಂದು ಪ್ರಶ್ನಿಸಿದರು. ಮೂವರು ಎಂದು ಅಧಿಕಾರಿ ಹೇಳಿದರು. ಮಕ್ಕಳನ್ನು ಹುಡುಕಿ ತರಲು ಸ್ವಲ್ಪ ಸಮಯ ಬೇಕು ಎಂದು ಇದೇ ವೇಳೆ ಕೋರಿದರು. ಆರೋಪಿಗಳ ಮೊಬೈಲ್ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತಂಡಗಳು ತನಿಖೆ ನಡೆಸುತ್ತಿವೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು. ಮಕ್ಕಳ ಪತ್ತೆಗೆ ರಚಿಸಲಾಗಿರುವ ತಂಡಗಳನ್ನು 20 ಕ್ಕೆ ಹೆಚ್ಚಿಸಲು ಸೂಚಿಸಿ, ಒಂದು ವಾರದೊಳಗೆ ಅವರನ್ನು ಹುಡುಕುವಂತೆ ಆದೇಶಿಸಿದರು.

Editor

Leave a comment