ಕರುನಾಡು ಘರ್ಜನೆ ಸುದ್ದಿ : ಕೊಳ್ಳೇಗಾಲ: ಹೈ ಟೆನ್ಷನ್ ವಿದ್ಯುತ್ ಟವರ್ ಕಂಬ ಏರಿ ಯುವಕನೋರ್ವ ತಾಯಿ ಎದುರೇ ಪ್ರಾಣ ಬಿಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ನೆಡೆದಿದೆ.
ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ ಎಂಬ ಯುವಕನೆ ಸಾವನ್ನಪ್ಪಿದ್ದಂತಹ ಯುವಕನಾಗಿದ್ದಾನೆ.
ಮಂಗಳವಾರ ಮಾರ್ಚ್ 18, ಬೆಳ್ಳಗ್ಗೆ 8 ರಘಂಟೆ ವೇಳೆ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಕಂಡ ಸ್ಥಳೀಯರು ಇಳಿಯುವಂತೆ ಒತ್ತಾಯ ಮಾಡಿದ್ದಾರೆ ಅಲ್ಲದೆ ಆ ವೇಳೆ ಸ್ಥಳದಲ್ಲಿ ತಾಯಿಯೂ ಕೂಡ ಇಳಿಯುವಂತೆ ಹೇಳಿದಾಗ ನಂತರ ಟವರ್ ನಲ್ಲಿ ವಿದ್ಯುತ್ ವೈರ್ ಗೆ ಹಿಡಿದು ಪ್ರಾಣ ಬಿಟ್ಟಿದ್ದಾನೆ.
ಕೊಳ್ಳೇಗಾಲ ಪಟ್ಟಣದ ಲಿಂಗಾಣಪುರ ಹೊರ ವಲಯದ ಜಮೀನಲ್ಲಿ ಹಾದು ಹೋಗಿರುವ 63 ಕೆವಿ ವಿದ್ಯುತ್ ಟವರ್ ಲೈನ್ ತಂತಿ ಹಿಡಿದು ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈತ ದೊಡ್ಡಮಲ್ಲ ಅವರ ಜಮೀನಿನಲ್ಲಿ ಹಾಕಿರುವ ವಿದ್ಯುತ್ ಟವರ್ ಅನ್ನು ಬೆಳಗ್ಗೆ ಮಸಣಶೆಟ್ಟಿ ಏರಿದ್ದ. ಇದನ್ನು ನೋಡಿದ ಸ್ಥಳೀಯರು ಹಾಗೂ ಅಕ್ಕಪಕ್ಕದ ಜಮೀನಿನ ರೈತರು ಕೆಳಗಿಳಿಯಲು ಹೇಳಿದ್ದಾರೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸೆಸ್ಕ್ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ಗಳು, ಅಗ್ನಿ ಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ ಕೇಳಿಕೊಂಡರು.
ಆದರೆ, ಮಸಣಶೆಟ್ಟಿ ನನ್ನ ತಾಯಿಯನ್ನು ಕರೆಸಿ ನಾನು ಆಕೆಯೊಂದಿಗೆ ಮಾತನಾಡಬೇಕು ಎಂದ. ಸ್ಥಳಕ್ಕೆ ತಾಯಿ ಸಿದ್ದರಾಜಮ್ಮ ಧಾವಿಸಿದರು. ಈ ವೇಳೆ ಕೆಳಗೆ ಇಳಿಯುವಂತೆ ಪರಿ ಪರಿಯಾಗಿ ಕೇಳಿಕೊಂಡರೂ ನೋಡು ನೋಡುತ್ತಿದ್ದಂತೆ ವಿದ್ಯುತ್ ತಂತಿ ಹಿಡಿದು ಮೃತಪಟ್ಟ. ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಬೇಕಾಗಿದೆ.
ಇನ್ನು ಯುವಕ ಆತ್ಮಹತ್ಯೆಗೀಡಾದ ಭಯಾನಕ್ ದೃಶ್ಯವನ್ನು ಸ್ಥಳೀಯರು ನೋಡಿ ಭಯ ಭೀತಿ ಗೊಂಡಿದ್ದಾರೆ ಇಂತಾ ಭಯಾನಕ ಘಟನೆ ನಡೆದಿದೆ.