Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅಪರಾಧ

ಗದಗ l ಅಂತರಾಜ್ಯ ವಂಚಕರ ಬಂಧನದಲ್ಲಿ ಯಶಸ್ವಿಯಾದ ಗದಗ ಜಿಲ್ಲಾ ಪೊಲೀಸ್.!

ಕರುನಾಡು ಘರ್ಜನೆ ಸುದ್ದಿ : ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ : – ದಿನಾಂಕ : -03.07.2024 ರಂದು ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯ ವ್ಯಾಪ್ತಿಯ ವಿವೇಕಾನಂದ ನಗರ 4 ನೇ ಕ್ರಾಸದಲ್ಲಿ ಪ್ರಕರಣ ವರದಿಯಾಗಿದ್ದು ,…

ಕರುನಾಡು ಘರ್ಜನೆ ಸುದ್ದಿ : ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ : – ದಿನಾಂಕ : -03.07.2024 ರಂದು ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯ ವ್ಯಾಪ್ತಿಯ ವಿವೇಕಾನಂದ ನಗರ 4 ನೇ ಕ್ರಾಸದಲ್ಲಿ ಪ್ರಕರಣ ವರದಿಯಾಗಿದ್ದು , ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯಲ್ಲಿ ಗುನ್ನಾ ನಂಬರ 55/2024 ಕಲಂ 318 ( 3 ) ಬಿ.ಎನ್.ಎಸ್ ಪ್ರಕರಣ ದಾಖಲಾಗಿದ್ದು , ಈ ಪ್ರಕರಣದಲ್ಲಿ ಇಬ್ಬರೂ ಆರೋಪಿತರು ತಾಮ್ರದ ಸಾಮಾನುಗಳನ್ನು ಸ್ವಚ್ಚ ಮಾಡುವ ಪೌಡರ ಮಾರಾಟ ಮಾಡುವವರು ಕಂಪನಿ ಹೊಸದಾಗಿ ಪ್ರಾರಂಭಿಸುತ್ತಿದ್ದು. ಜಾಹಿರಾತಿಗಾಗಿ ಪೌಡರ ಮಾರಾಟ ಮಾಡುತ್ತಿದ್ದೆವೆ ಅಂತಾ ಹೇಳಿ ಯಾವುದೋ ಒಂದು ಕಂಪನಿಯ ಕಾರ್ಡನ್ನು ತೋರಿಸಿ .

 

ನಿಮ್ಮ ಮನೆಯಲ್ಲಿನ ತಾಮ್ರದ ಸಾಮಾನುಗಳನ್ನು ಕೊಡಿ ಸ್ವಚ್ಚ ಮಾಡಿ ತೋರಿಸುತ್ತೇವೆ . ಅಂತಾ ತಾಮ್ರದ ಹಾಗೂ ಬೆಳ್ಳಿಯ ಸಾಮಾನುಗಳನ್ನು ಸ್ವಚ್ಛ ಮಾಡಿ ತೋರಿಸಿ ನಂಬಿಕೆ ಬರುವಂತೆ ಮಾಡಿ ಪಿರ್ಯಾದಿ ಧರಿಸಿದ್ದ 1 ) ಒಂದು 35 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಚೈನ ಅ : ಕಿ : 1,40,000-00ರೂ 2 ) 45 ಗ್ರಾಂ ತೂಕದ ನಾಲ್ಕು ಬಂಗಾರದ ಬಳೆಗಳು ಅ : ಕಿ : 1,80.000-00 ರೂ 3 ) ಒಂದು 10 ಗ್ರಾಂ ತೂಕದ ಬಂಗಾರದ ಚೈನ ಅ : ಕಿ : 40.000.00 4 ) ಒಂದು 03 ಗ್ರಾಂ ತೂಕದ ಬಂಗಾರದ ಉಂಗುರ ಅ : ಕಿ : 12000,00 ರೂ ಒಟ್ಟು 93.00 ಗ್ರಾಂ ದ ಬಂಗಾರದ ಆಭರಣಗಳು ಇವುಗಳ ಒಟ್ಟು ಕಿಮ್ಮತ್ತು 3.72,000-00 ರೂ ಆಭರಣಗಳನ್ನು ಆರೋಪಿತರು ಸ್ವಚ್ಚ ಮಾಡಿಕೊಡುತ್ತೇವೆ . ಅಂತಾ ಹೇಳಿ ಪಡೆದುಕೊಂಡು ಅವುಗಳನ್ನು ನೀರಿನಲ್ಲಿ ಹಾಕಿ ಅದರಲ್ಲಿ ಬ್ರೌನ ಬಣ್ಣದ ಪೌಡರ ಹಾಕಿ ಕಾಯಿಸಿಕೊಂಡು ಬನ್ನಿ ಅಂತಾ ಹೇಳಿ ಪಿರ್ಯಾಧಿದಾರರ ಗಮನ ಬೇರೆಕಡೆ ಸೆಳೆದು ಮೋಸ ಮಾಡಿ ತೆಗೆದುಕೊಂಡು ಹೋದ ಬಗ್ಗೆ ಶ್ರೀಮತಿ ಶಕುಂತಲಾ ಕೋಂ ಬಾಲಪ್ಪಾ ಮಡಿವಾಳರ ಸಾ : ಗದಗ ವಿವೇಕಾನಂದ ನಗರ 4 ನೇ ಕ್ರಾಸ ಇವರು ಬಡಾವಣೆ ಠಾಣಿಗೆ ಹಾಜರಾಗಿ ಪಿರ್ಯಾದಿಯನ್ನು ಸಲ್ಲಿಸಿದ್ದು ಇರುತ್ತದೆ . ಈ ಪ್ರಕರಣವನ್ನು ಭೇದಿಸುವ ಕುರಿತು ಶ್ರೀ ಬಿ.ಎಸ್ . ನೇಮಗೌಡ ಐಪಿಎಸ್ .

 

ಗದಗ ಜಿಲ್ಲಾ ಆರಕ್ಷಕ ಅಧೀಕ್ಷಕರು ಗದಗ ಜಿಲ್ಲೆ ಹಾಗೂ ಶ್ರೀ ಎಮ್.ಬಿ. ಸಂಕದ , ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ , ಶ್ರೀ ಪ್ರಭುಗೌಡ ಕಿರೇದಹಳ್ಳಿ , ಪೊಲೀಸ್ ಉಪ – ಅಧೀಕ್ಷಕರು ಪ್ರಭಾರ ಗದಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಧೀರಜ್ , ಬಿ . ಸಿಂಧೆ ಸಿಪಿಐ ಬೆಟಗೇರಿ ವೃತ್ತ ಗದಗ ರವರ ನೇತೃತ್ವದಲ್ಲಿ ತಂಡ ರಚಿಸಿ ಹಾಗೂ ಶ್ರೀ ಮಾರುತಿ ಎಸ್ . ಜೋಗದಂಡಕರ , ಪಿಎಸ್‌ಐ [ ಕಾ.ವ.ಸು ] , ಶ್ರೀ ಬಿ.ಟಿ.ರಿತ್ತಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಎನ್.ಡಿ.ಹುಬ್ಬಳ್ಳಿ ಸಿಎಚ್‌ಸಿ -968 , ಎಸ್.ಎಚ್ . ಕಮತರ ಸಿ.ಎಚ್.ಸಿ 1007 ಪ್ರವೀಣ ಹಳ್ಳಳ್ಳ ಸಿ.ಎಚ್.ಸಿ 572 ಪರಶುರಾಮ .ಎಚ್‌ , ದೊಡಮನಿ ಸಿಪಿಸಿ -1076 , ಅಶೋಕ ಗದಗ ಸಿಪಿಸಿ -555 , ನಾಗರಾಜ ಬರಡಿ , ಸಿಪಿಸಿ -743 , ಅಕ್ಷಯ ಬದಾಮಿ ಸಿಪಿಸಿ -1211 , ಶಿವಾನಂದ ಲಮಾಣಿ ಸಿಪಿಸಿ 761 ಮಾಲತೇಶ ಡಂಬರಮತ್ತೂರ ಸಿಪಿಸಿ 1234 ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ ಬುದಿಹಾಳ , ಎ.ಆರ್.ಎಸ್.ಐ. ಸಂಜು ಕೊರಡೂರ ಸಿಪಿಸಿ -475 ನೇದವರು ದಿನಾಂಕ : -27.03.2025 ರಂದು ಪ್ರಕರಣವನ್ನು ಪತ್ತೆ ಮಾಡಿದ್ದು , ಸದರಿ ಪ್ರಕರಣದಲ್ಲಿ ಆರೋಪಿತರಾದ 1 ] ಧೀಪಕ ಗುಪ್ತಾ ತಂದೆ ಅಶೋಕ ಗುಪ್ತಾ ವಯಾ 36 ವರ್ಷ ಜಾತಿ ಹಿಂದು ಥಟೀರಾ ಉದ್ಯೋಗ ಬಟ್ಟೆ

 

ವ್ಯಾಪಾರ ಸಾ : ಗೋವಿಂದಪೂರ ಘೋಸ್ಟ ತಾ : ಗೋಗಡಿ ಜಿಲ್ಲಾ ಕಗರಿಯಾ ರಾಜ್ಯ ಬಿಹಾರ 2 ] ಭೀಫಿನಕುಮಾರ ಶಾಹ ತಂದೆ ನಂದಕಿಶೋರ ಶಾಹ ವಯಾ 35 ವರ್ಷ ಜಾತಿ ಹಿಂದು ಥಟೀರಾ ಉದ್ಯೋಗ ಬಟ್ಟೆ ವ್ಯಾಪಾರ ಸಾ : ಜಮುನಿಯಾ ಪೋಸ್ಟ ತಾ : ನಗೋಟಿಯಾ ಜಿಲ್ಲಾ ಭಾಗಲಪೂರ ರಾಜ್ಯ ಬಿಹಾರ ಸದರಿ ಆರೋಪಿತರನ್ನು ಹುಬ್ಬಳ್ಳಿ ಶಹರದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳ ಪಡಿಸಿದ್ದು , ಒಂದು ಈ ಮೇಲ್ಕಂಡ ಪ್ರಕರಣದಲ್ಲಿ 1 ) ಒಂದು 35 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಚೈನ ಅ : ಕಿ : 2 ) 10 ಗ್ರಾಂ ತೂಕದ ಬಂಗಾರದ ಚೈನ 3 ) ಒಂದು 03 ಗ್ರಾಂ ತೂಕದ ಬಂಗಾರದ ಉಂಗುರ ಒಟ್ಟು 48.00 ಗ್ರಾಂ ದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ . 2 . > ಆರೋಪಿತರ ಮೇಲೆ ಈ ಕೆಳಕಂಡ ಜಿಲ್ಲೆಗಳ ಪೊಲೀಸ ಠಾಣೆಗಳಲ್ಲಿ ಹಳೆಯ ಪ್ರಕರಣಗಳದ್ದು , ಇವುಗಳು ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತವೆ . > ಮೈಸೂರ ಜಿಲ್ಲೆ > ಬೆಂಗಳೂರ ನಗರ > ಹುಬ್ಬಳ್ಳಿ ಧಾರವಾಡ ಉದಯಗಿರಿ ಪೊಲೀಸ ಠಾಣೆ ಗುನ್ನಾ ನಂ 138/2008 ಕಲಂ 399 402 ಐ.ಪಿಸಿ ಸುಬ್ರಮಣ್ಯ ನಗರ ಪೊಲೀಸ ಠಾಣೆ ಗುನ್ನಾ 53/2023 ಕಲಂ 420 ಸಹ ಕಲಂ 511 ಹಳೆ ಹುಬ್ಬಳ್ಳಿ ಪೊಲೀಸ ಠಾಣೆ ಗುನ್ನ ನಂ 20/2025 ಕಲಂ 318 ( 4 ) ಬಿ.ಎನ್.ಎಸ್ ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ರೀ . ಬಿ.ಎಸ್. ನೇಮಗೌಡ ಐಪಿಎಸ್ ಜಿಲ್ಲಾ ಆರಕ್ಷಕ ಅಧೀಕ್ಷಕರು ಗದಗ ಜಿಲ್ಲೆ , ಗದಗ ರವರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

 

 

 

Editor

Leave a comment