Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅಪರಾಧ

ಡಾವಣಗೆರಿ l ದರೋಡೆ ಪ್ರಕರಣದ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ.!

ಕರುನಾಡು ಘರ್ಜನೆ ಸುದ್ದಿ : ದಾವಣಗೆರೆ: ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.   ಸೋಮವಾರ (ಮಾ.31) ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.…

ಕರುನಾಡು ಘರ್ಜನೆ ಸುದ್ದಿ : ದಾವಣಗೆರೆ: ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಸೋಮವಾರ (ಮಾ.31) ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ, 2024 ರ ಅ.

 

26 ರಂದು ಬ್ಯಾಂಕ್ ದರೋಡೆ ನಡೆಸಿದ್ದ ವಿಜಯ ಕುಮಾರ್, ಅಜಯ್‌ಕುಮಾರ್, ಅಭಿಷೇಕ, ಮಂಜುನಾಥ್, ಚಂದ್ರು, ಪರಮಾನಂದ್ ಎಂಬುವರ ಬಂಧಿಸಿ, ಅವರಿಂದ 17.1 ಕೆಜಿ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

 

ತಮಿಳುನಾಡು ಮೂಲದ ವಿಜಯಕುಮಾರ್, ಅಜಯ್‌ಕುಮಾರ್ ಮತ್ತು ಪರಮಾನಂದ, ಸುಮಾರು ವರ್ಷಗಳಿಂದ ನ್ಯಾಮತಿ ಪಟ್ಟಣದಲ್ಲಿ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಮಂಜುನಾಥ್, ಅಭಿಷೇಕ ಮತ್ತು ಚಂದ್ರು ಹೊನ್ನಾಳಿ ಮತ್ತು ನ್ಯಾಮತಿಯವರು. ಪರಾರಿಯಾಗಿದ್ದ ಪರಮಾನಂದ ಎಂಬಾತನನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.

 

ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮತ್ತವರ ತಂಡ ಎಲ್ಲ ದರೋಡೆಕೋರರನ್ನ ಬಂಧಿಸಿ, ಎಲ್ಲ ಬಂಗಾರದ ಆಭರಣ ವಶಪಡಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

 

ಅತ್ಯಂತ ವೃತ್ತಿಪರತೆಯಿಂದ ದರೋಡೆ ಮಾಡಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಕಿತ್ತು ಹಾಕಿದ್ದರು. ದರೋಡೆ ಮಾಡಿ ವಾಪಸ್ ಹೋಗುವಾಗ ಡಿವಿಆರ್ ಸಹ ತೆಗೆದು ಹೋಗಿದ್ದರು. ಶ್ವಾನದಳದ ದಿಕ್ಕು ತಪ್ಪಿಸುವ ಉದ್ದೇಶದಿಂದ ಕಾರದಪುಡಿ ಚೆಲ್ಲಿ ಹೋಗಿದ್ದರು. ಇಡೀ ದರೋಡೆ ಪ್ರಕರಣಕ್ಕೆ ಒಂದೇ ಒಂದು ಸಾಕ್ಷಿ ಸಹ ಸಿಕ್ಕಿರಲಿಲ್ಲ. ಆದರೂ, ನಮ್ಮ ಪೊಲೀಸರು ಬಹಳ ಚಾಣಾಕ್ಷತನದಿಂದ ಇಡೀ ದರೋಡೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

 

ದರೋಡೆ ನಡೆದ ಪ್ರಾರಂಭಿಕ ಹಂತದಲ್ಲಿ ಅಂತಾರಾಜ್ಯ ದರೋಡೆಕೋರರ ತಂಡ ಬ್ಯಾಂಕ್ ದರೋಡೆ ಮಾಡಿರಬಹುದು ಎಂದು ತಿಳಿದುಕೊಂಡಿದ್ದೆವು. ಭದ್ರಾವತಿಯಲ್ಲೂ ಅದೇ ರೀತಿ ಬ್ಯಾಂಕ್ ದರೋಡೆ ನಡೆದಿತ್ತು. ಹಾಗಾಗಿ ಅಂತಾರಾಜ್ಯ ದರೋಡೆಕೋರರ ಕೃತ್ಯ ಎಂದೇ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ತಿಳಿಸಿದರು.

 

ಉತ್ತರ ಪ್ರದೇಶದ ಕಕ್ರಾಳ ಮೂಲದ ತಂಡ ಎಂದು ಸ್ಥಳೀಯ ಪೊಲೀಸರ ನೆರವಿನಿಂದ ಪತ್ತೆ ಹಚ್ಚುವ ಕಾರ್ಯ ನಡೆಸಲಾಗಿತ್ತು. ಆದರೆ, ಅವರು ಯಾರು ಭಾಗಿಯಾಗಿರಲಿಲ್ಲ ಎಂದು ತಿಳಿದು ಬಂದಿತು. ಹಾಗಾಗಿ ಕರ್ನಾಟಕದ ತಂಡದ ಬಗ್ಗೆ ಗಮನ ಹರಿಸಲಾಯಿತು ಎಂದು ತಿಳಿಸಿದರು.

 

ಸಾಕಷ್ಟು ತನಿಖೆ ನಡೆಸಿದ ನಂತರ ಸ್ಥಳೀಯರೇ ಭಾಗಿಯಾಗಿರುವುದು ಮಾಹಿತಿ ಸಿಕ್ಕಿತು. ನ್ಯಾಮತಿಯ ವಿಜಯ್ ಕುಮಾರ್ ಮತ್ತು ಅವರ ತಂಡ ದರೋಡೆ ನಡೆಸಿದ್ದು ಗೊತ್ತಾಯಿತು. ತಾಂತ್ರಿಕ ಅಂಶದ ಆಧಾರದಲ್ಲಿ ಬಹಳ ಚಾಕುಚಕ್ಯತೆಯಿಂದ ಎಲ್ಲ ದರೋಡೆಕೋರರನ್ನು ಬಂಧಿಸುವಲ್ಲಿ ದಾವಣಗೆರೆ ಜಿಲ್ಲೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

 

ಅಪರೂಪದಲ್ಲಿ ಅಪರೂಪದ ಪತ್ತೆ ಕಾರ್ಯಕ್ಕೆ ಗೃಹ ಸಚಿವರು, ಡಿಜಿ ಮತ್ತು ಐಜಿಪಿ ನಗದು ಬಹುಮಾನ ಘೋಷಿಸಿದ್ದಾರೆ. ತನಿಖಾ ತಂಡದಲ್ಲಿ ಹತ್ತು ಜನರಿಗೆ ಮುಖ್ಯಮಂತ್ರಿ ಪದಕ ದೊರೆತಿದೆ ಎಂದು ತಿಳಿಸಿದರು.

 

ದರೋಡೆಕೋರರಲ್ಲಿ ವಿಜಯ್ ಕುಮಾರ್, ಅಜಯ್ ಕುಮಾರ್ ಅಣ್ಣ ತಮ್ಮ. ಪರಮಾನಂದ ಭಾವಮೈದುನ. ಇನ್ನುಳಿದ ಮೂವರು ಗೆಳೆಯರು. ಇದೇ ಮೊದಲ ಬಾರಿಗೆ ಕೃತ್ಯ ನಡೆಸಿದ್ದಾರೆ ಎಂದು ತಿಳಿಸಿದರು.

 

ಬೇಕರಿ ನಡೆಸುತ್ತಿದ್ದ ವಿಜಯ್ ಕುಮಾರ್ 15 ಲಕ್ಷ ಸಾಲಕ್ಕೆ ಎಸ್ ಬಿಐ ಶಾಖೆಗೆ 2023 ರಲ್ಲಿ ಅರ್ಜಿ ಸಲ್ಲಿಸಿದ್ದರು. ‌ಸಿಬಿಲ್ ಸ್ಕೋರ್ ಕಡಿಮೆ ಎನ್ನುವ ಕಾರಣಕ್ಕೆ ಅರ್ಜಿ ತಿರಸ್ಕೃತವಾಗಿತ್ತು. ಸಂಬಂಧಿಕರ ಹೆಸರಲ್ಲಿ ಸಲ್ಲಿಸಿದ್ದ ಅರ್ಜಿಯೂ ತಿರಸ್ಕೃತವಾಗಿತ್ತು. ದಿಢೀರ್ ಶ್ರೀಮಂತ ಆಗಬೇಕು ಎನ್ನುವ ಕಾರಣಕ್ಕಾಗಿ ಮತ್ತು ಬ್ಯಾಂಕ್ ನವರು ಅರ್ಜಿ ತಿರಸ್ಕರಿಸಿದ್ದರಿಂದ ಕೋಪಗೊಂಡು ದರೋಡೆ ಮಾಡಿದ್ದಾಗಿ ವಿಜಯ್ ಕುಮಾರ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಸಾಲ ಮಂಜೂರಾತಿಗೆ ಬ್ಯಾಂಕ್ ನವರು 60 ಸಾವಿರ ಕೇಳಿದ್ದರು ಎಂದು ವಿಜಯ್ ಕುಮಾರ್ ನೀಡಿರುವ ಬಗ್ಗೆ ಬ್ಯಾಂಕ್ ನವರ ಗಮನಕ್ಕೆ ತರಲಾಗಿದೆ. ಆಂತರಿಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.

 

ವಿಜಯ್ ಕುಮಾರ್, ಅಜಯ್ ಕುಮಾರ್ ಮತ್ತು ಪರಮಾನಂದ ಕೃತ್ಯದ ಬಗ್ಗೆ ಕುಟುಂಬದವರಿಗೂ ಸಣ್ಣ ಸುಳಿವು ನೀಡಿರಲಿಲ್ಲ. ದರೋಡೆ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ದರೋಡೆಯಲ್ಲಿ ಭಾಗಿಯಾಗಿದ್ದ ಎಲ್ಲರಿಂದ ಆಣೆ ಮಾಡಿಸಿಕೊಂಡಿದ್ದ. ಮಾತ್ರವಲ್ಲದೆ ದರೋಡೆಗೆ ಮುನ್ನ ಮತ್ತು ನಂತರ ಅಷ್ಟದಿಗ್ಭಂಧನ, ದೇವರಿಗೆ ಹರಕೆ ಪೂಜೆ ಸಹ ಸಲ್ಲಿಸಿದ್ದನು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬ್ಯಾಂಕ್ ದರೋಡೆ ಕಥೆ ಕುರಿತಾದ ಧಾರಾವಾಹಿ ಯನ್ನು ಆರು ತಿಂಗಳ ಕಾಲ ನೋಡಿದ್ದನು.‌ ಅದರಂತೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ದರೋಡೆ ನಡೆಸಿದ್ದರು ಎಂದು ತಿಳಿಸಿದರು.

 

ದರೋಡೆ ಬಗ್ಗೆ ಸಣ್ಣ ಸುಳಿವೂ ಸಿಗಬಾರದು ಎಂದು ಯಾರೂ ಸಹ ಮೊಬೈಲ್ ಬಳಕೆ ಮಾಡಿರಲಿಲ್ಲ. ‌ಸಿಸಿ ಟಿವಿ ಇರುವ ಬಗ್ಗೆ ಎಲ್ಲ ಮಾಹಿತಿ ಇದ್ದುದ್ದರಿಂದ ಸಿಸಿ ಟೀವಿ ಕ್ಯಾಮೆರಾ ಕಣ್ಣು ತಪ್ಪಿಸಿಯೇ ಓಡಾಟ ಮಾಡಿದ್ದರು. ದರೋಡೆ ದಿನ ಎರಡೂವರೆ ಕಿಲೋಮೀಟರ್ ನಡೆದುಕೊಂಡೇ ಬಂದಿದ್ದರು. ದರೋಡೆ ಮಾಡಿದ ಎಲ್ಲವನ್ನೂ ತಮಿಳುನಾಡುನಲ್ಲಿ ವಿಜಯ್ ಕುಮಾರ್ ಕುಟುಂಬದವರಿಗೆ ಸೇರಿದ ಬಾವಿಯಲ್ಲಿ ಸುರಕ್ಷಿತವಾಗಿ ಇರಿಸಿದ್ದರು. ಒಂದು ವರ್ಷದ ನಂತರ ಬಳಕೆ ಮಾಡಲು ಉದ್ದೇಶಿಸಿದ್ದರು ಎಂದು ತಿಳಿಸಿದರು.

 

ದರೋಡೆ ಬಗ್ಗೆ ಸಣ್ಣ ಸುಳಿವೂ ಸಿಗಬಾರದು ಎಂದು ಯಾರೂ ಸಹ ಮೊಬೈಲ್ ಬಳಕೆ ಮಾಡಿರಲಿಲ್ಲ. ‌ಸಿಸಿ ಟಿವಿ ಇರುವ ಬಗ್ಗೆ ಎಲ್ಲ ಮಾಹಿತಿ ಇದ್ದುದ್ದರಿಂದ ಸಿಸಿ ಟೀವಿ ಕ್ಯಾಮೆರಾ ಕಣ್ಣು ತಪ್ಪಿಸಿಯೇ ಓಡಾಟ ಮಾಡಿದ್ದರು. ದರೋಡೆ ದಿನ ಎರಡೂವರೆ ಕಿಲೋಮೀಟರ್ ನಡೆದುಕೊಂಡೇ ಬಂದಿದ್ದರು. ದರೋಡೆ ಮಾಡಿದ ಎಲ್ಲವನ್ನೂ ತಮಿಳುನಾಡುನಲ್ಲಿ ವಿಜಯ್ ಕುಮಾರ್ ಕುಟುಂಬದವರಿಗೆ ಸೇರಿದ ಬಾವಿಯಲ್ಲಿ ಸುರಕ್ಷಿತವಾಗಿ ಇರಿಸಿದ್ದರು. ಒಂದು ವರ್ಷದ ನಂತರ ಬಳಕೆ ಮಾಡಲು ಉದ್ದೇಶಿಸಿದ್ದರು ಎಂದು ತಿಳಿಸಿದರು.

 

ಒಂದೇ ಒಂದು ಸಣ್ಣ ತಾಂತ್ರಿಕ ಆಧಾರದಲ್ಲಿ ದರೋಡೆ ಪತ್ತೆ ಹಚ್ಚಲು ಸಾಧ್ಯವಾಯಿತು. ಸಣ್ಣ ಸುಳಿವು ಸಹ ಇರದಿದ್ದರೂ ಪೊಲೀಸರು ಬಹಳ ಚಾಣಾಕ್ಷತನದಿಂದ ದರೋಡೆ ಪ್ರಕರಣದ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

 

ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಅಧೀಕ್ಷಕರಾದ ಜಿ. ಮಂಜುನಾಥ್, ವಿಜಯ್ ಕುಮಾರ್ ಎಂ. ಸಂತೋಷ್, ಸಹಾಯಕ ರಕ್ಷಣಾಧಿಕಾರಿ ಸ್ಯಾಮ್ ವರ್ಗೀಸ್, ಗ್ರಾಮಾಂತರ ಉಪಾಧೀಕ್ಷಕ ಬಿ.ಎಸ್. ಬಸವರಾಜ್ ಇತರರು ಇದ್ದರು.

Editor

Leave a comment