ಕರುನಾಡು ಘರ್ಜನೆ ಸುದ್ದಿ : ಗದಗ ಮಾರ್ಚ್ 09: ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯ ಖಸಾಯಿ ಖಾನೆಗಳಲ್ಲಿ ಪ್ರಾಣಿವಧೆ ಮಾಡುವ ಹಾಗೂ ಮಾಂಸ ಮಾರಾಟಗಾರರ ಗಮನಕ್ಕೆ ಡಾ|| ಬಿ ಆರ್ ಅಂಬೇಡ್ಕರ ಜಯಂತಿ ಅಂಗವಾಗಿ ದಿನಾಂಕ: 14-04-2025 ರಂದು
ಜಾನುವಾರುಗಳ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಕಾರಣ ಮಾಂಸ ಮಾರಾಟ ಮಾಡುವದಾಗಲಿ ಹಾಗೂ ಜಾನುವಾರುಗಳನ್ನು ವಧೆ ಮಾಡದಿರಲು ಸೂಚಿಸಲಾಗಿದೆ. ಈ
ಆದೇಶವನ್ನು ಉಲ್ಲಂಘಿಸಿದಲ್ಲಿ ಅಂಥವರ ಲೈಸನ್ಸನ್ನು ರದ್ದು ಮಾಡಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.