ಕರುನಾಡು ಘರ್ಜನೆ ಸುದ್ದಿ : ಗಾಜಿಯಾಬಾದ್ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರಿಗೆ ಆಕೆಯ ಪತಿಯ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಬೆದರಿಕೆ ಹಾಕುತ್ತಿರುವ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಈ ವೇಳೆ ಚೌಕಿ ಇನ್ಚಾರ್ಜ್ ವಿಮಲ್ ಕುಮಾರ್ ಎಂಬಾತ ಮಹಿಳೆಯ ಜೊತೆ ಕೆಲ ಕಾಲ ಮಾತನಾಡಿದ್ದಾನೆ.
ಈ ವೇಳೆ ಮಹಿಳೆಯ ಮಾತಿನಿಂದ ಸಿಟ್ಟಾದ ಅಧಿಕಾರಿ ನೀವು ತುಂಬಾ ಮಾತನಾಡುತ್ತಿದ್ದೀರಿ, ನಾವು ಏನು ಕ್ರಮಕೈಗೊಳ್ಳಬೇಕು ಅಂತ ನಮಗೆ ಗೊತ್ತಿದೆ, ಇಲ್ಲಿ ಲಾಯರ್ ಆಗೋಕೆ ಬರಬೇಡಿ, ಜಾಸ್ತಿ ಮಾತಾಡಿದರೆ ಸುಳ್ಳು
ರೇಪ್ ಕೇಸ್ ಹಾಕಿ ನಿನ್ನ ಗಂಡನನ್ನು ಜೈಲಿಗೆ ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.ಅಲ್ಲದೇ ಮಹಿಳೆಗೆ ಪೊಲೀಸ್ ಅಧಿಕಾರಿ ನಿಂದನೆ ಮಾಡಿದ್ದಾನೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ
ವೈರಲ್ ಆಗಿದ್ದು, ಅಧಿಕಾರದ ದರ್ಪದಿಂದ ಪೊಲೀಸ್ ಅಧಿಕಾರಿ ಈ ರೀತಿ ಮಾತನಾಡುತ್ತಿದ್ದಾನೆ, ಮಹಿಳೆಯರ ಬಳಿ ಯಾವ ರೀತಿ ಮಾತನಾಡಬೇಕು ಎಂಬ ಪ್ರಜ್ಞೆ ಕೂಡ ಇಲ್ಲ, ಕೂಡಲೇ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಕಿಡಿಕಾರಿದ್ದಾರೆ.