ಕರುನಾಡು ಘರ್ಜನೆ ಸುದ್ದಿ ಕೇಂದ್ರದಲ್ಲಿ ಹನ್ನೊಂದು ವರ್ಷ ಭಾರತೀಯ ಜನತಾ ಪಾರ್ಟಿ ಸರ್ಕಾರವಿದೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ, ಭದ್ರತೆ ಜವಾಬ್ದಾರಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ
ಈ ಪ್ರದೇಶವನ್ನು ಅತ್ಯಂತ ಸುರಕ್ಷಿತ ಪ್ರದೇಶವನ್ನು ಪರಿಗಣಿಸಲಾಗಿದೆ ಅಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ 2000 ಪ್ರವಾಸಿಗರಿರುವಲ್ಲಿ ಸೈನಿಕ ಕಾವಲಿಲ್ಲ ಅಂದ್ರೆ ಹೇಗೆ? ಆದ್ದರಿಂದ ಕೇಂದ್ರ ಗೃಹ ಸಚಿವಾಲಯದ ನೇರ ವ್ಯಾಪ್ತಿಗೆ ಬರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಇಂತಹ ದಾಳಿ ನಡೆಯಲು ಕಾರಣವಾದ ಗುಪ್ತಚರ ವೈಫಲ್ಯಗಳು ಹಾಗೂ ಭದ್ರತಾ ವೈಫಲ್ಯಗಳ ಬಗ್ಗೆ ಸಮಗ್ರ ಮತ್ತು ಸಮಗ್ರ ತನಿಖೆ ನಡೆಸುವುದು ಅತ್ಯಗತ •ವಿಶಾಲ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ಪ್ರಶ್ನೆಗಳನ್ನು ಎತ್ತುವುದು ಅವಶ್ಯಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುವ ಏಕೈಕ ಮಾರ್ಗ ಇದೊಂದೇ
ಭಯೋತ್ಪಾದಕರ ಈ ಹೇಡಿತನದ ಅಮಾನವೀಯ ದುಷ್ಕೃತ್ಯ ನಮ್ಮ ಗಣರಾಜ್ಯದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ದೇಶಾದ್ಯಂತ ಭಾವನೆಗಳನ್ನು ಕೆರಳಿಸಲು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಲಾಗುತ್ತಿದೆ
ದೇಶ ಸುರಕ್ಷಿತವಾಗಿಯೇ ಇದೆ ಆದರೆ ದೇಶ ಸುರಕ್ಷಿತರ ಕೈಯಲ್ಲಿ ಇಲ್ಲಾ ಹಾಗಾಗಿ ಮಾನ್ಯ ಕೇಂದ್ರದ ಗೃಹಮಂತ್ರಿ ಅಮಿತ್ ಶಾ ರವರು ಕೂಡಲೇ ಭದ್ರಾತಾ ವೈಫಲ್ಯ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಿಹಿಸುತ್ತೇವೆ
ವರದಿ : ರಮೇಶ್ ಭೀ ಚಲವಾದಿ ಸಾಮಾಜಿಕ ಹೋರಾಟಗಾರ