ಕರುನಾಡು ಘರ್ಜನೆ ಸುದ್ದಿ: ಅಮಾಯಕರ ಬಲಿ ಪಡೆದ ಉಗ್ರರ ವಿರುದ್ಧ ಭಾರತ ಕೊನೆಗೂ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 22ರಂದು ಪಹಲ್ಗಾಮ್ನ ಬೈಸರನ್ನಲ್ಲಿ ಅಮಾಯಕ ಹಿಂದೂಗಳ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಪೈಶಾಚಿಕ ದಾಳಿ ನಡೆಸಿ, ಬರೋಬ್ಬರಿ 26 ಮಂದಿಯ ಜೀವವನ್ನು ತೆಗೆದಿದ್ದರು. ಈ ಕೃತ್ಯದ ಬೆನ್ನಲ್ಲೇ ಇಡೀ ದೇಶ ಪಾಕಿಸ್ತಾನದ ಮೇಲೆ ಕೆಂಡ ಕಾರಿತ್ತು.
ಒಂದು ಕಡೆ ಪಾಪಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಅಂತ ಆಕ್ರೋಶ ವ್ಯಕ್ತವಾಗುತ್ತಿತ್ತು. ಮತ್ತೊಂದು ಕಡೆ ಉಗ್ರರನ್ನು ಉಡಾಯಿಸಬೇಕೆಂದು ಭಾರತ ಸರ್ಕಾರ ಯುದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿತ್ತು.
ಅದರಂತೆ ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ.ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ’ ಆರಂಭಿಸಿವೆ. ಈ ಆಪರೇಷನ್ ಸಿಂಧೂರಗೆ ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕೇವಲ 23 ನಿಮಿಷದಲ್ಲಿ ಪಾಕ್ನ 9 ನೆಲೆಯನ್ನು ಉಡೀಸ್ ಮಾಡಿದೆ. ಜಸ್ಟ್ 23 ನಿಮಿಷದಲ್ಲೇ 70 ಉಗ್ರರು ಮೃತಪಟ್ಟಿದ್ದಾರೆ. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ 5 ಸ್ಥಳ ಮತ್ತು ಪಾಕ್ನ ನಾಲ್ಕು ಸ್ಥಳ ಸೇರಿ ಉಗ್ರರ ನೆಲೆ, ಟ್ರೆನಿಂಗ್ ಕ್ಯಾಂಪ್ಗಳ ಮೇಲೆ ಏಕಕಾಲದಲ್ಲಿ 9 ಕಡೆಯಲ್ಲಿ ದಾಳಿ ಮಾಡಿ ಹೊಡೆದುರುಳಿಸಿದೆ. ಇದರಲ್ಲಿ ಈ ಮೂಲಕ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿದೆ.