ಕರುನಾಡು ಘರ್ಜನೆ ಸುದ್ದಿ : ಗದಗ 7 : ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಮೇ 8 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 22- ಅಮರೇಶ್ವರ ನಗರ ಉಳಿದ ಕೆಲವು ಭಾಗಗಳು. ವಾರ್ಡ್ 5 – ನರಸಾಪುರ ಆಶ್ರಯ ಕಾಲೋನಿ ಪೂರ್ತಿ ಭಾಗಗಳು. ವಾರ್ಡ್ 28 – ಪಂಚಾಕ್ಷರಿ ನಗರ 5, 6 ನೇ ಕ್ರಾಸಗಳು. ವಾರ್ಡ್ 33 – ಜಾಕೀರ ಹುಸೈನ ಕಾಲೋನಿ, ಗಡ್ಡಿ ಪಂಪ ಹಿಂದಿನ ಭಾಗ ಉಳಿದ ಕೆಲವು ಭಾಗಗಳು. ವಾರ್ಡ್ 7 – ಮಿಸ್ಕಿನ ಪ್ಲಾಟ ಉಳಿದ ಕೆಲವು ಭಾಗಗಳು. ವಾರ್ಡ್ 6 – ಪಿ ಪಿ ಗುಡಿ ಉಳಿದ ಕೆಲವು ಭಾಗಗಳು. ವಾರ್ಡ್ 11 – ನಿಸರ್ಗ ಬಡಾವಣೆ, ಶಿವಬಸವ ನಗರ, ಹನುಮಂತ ದೇವರ ಗುಡಿ, ರಿಂಗ ರೋಡ, ಗಾಣಿಗೇರ ಭವನ ಉಳಿದ ಕೆಲವು ಭಾಗಗಳು.
ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ, ತುಂಗಭದ್ರಾ ನದಿಯಿಂದ ಸರಬರಾಜು ಆಗುತ್ತಿರುವ ನೀರನ್ನು ಕಾಯಿಸಿ ಆರಿಸಿ ಕುಡಿಯಲು ನಿರ್ದೇಶನ ನೀಡಲಾಗಿದೆ ಹಾಗೂ ತಮಗೆ ನೀರು ಸಾಕಾದಾಗ ತಮ್ಮ ತಮ್ಮ ನೀರಿನ ನಳಗಳನ್ನು ಬಂದ ಮಾಡುವ ಮೂಲಕ ನೀರು ಪೋಲಾಗದಂತೆ ತಡೆಯುವಲ್ಲಿ ಮುತುವರ್ಜಿ ವಹಿಸಬೇಕೆಂದು ಹಾಗೂ ತಮ್ಮ ನೀರಿನ ಕರ ಪಾವತಿಸುವಲ್ಲಿ ತಾವು ವಿಳಂಬ ಮಾಡದೇ ತಮ್ಮ ಬಾಕಿ ಇರುವ ನೀರಿನ ಕರವನ್ನು ನಗರಸಭೆಗೆ ಪಾವತಿಸಬೇಕೆಂದು ತಿಳಿಸಿರುತ್ತಾರೆ. ಒಂದು ವೇಳೆ ಈ ರೀತಿ ಮಾಡದೇ ಹೋದ ಸಂದರ್ಭದಲ್ಲಿ ತಮಗೆ ದಂಡ ವಿಧಿಸಿ ತಮ್ಮ ನೀರಿನ ನಳವನ್ನು ಬಂದ ಮಾಡಲಾಗುವುದು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.