ಕರುನಾಡು ಘರ್ಜನೆ ಸುದ್ದಿ ಗದಗ ೧೪: ಪೌರಾಯುಕ್ತರಿಗೆ ಪ್ರತಿನಿತ್ಯ ಸರ್ಕಾರದ ಕೆಲಸ ಕಾರ್ಯಗಳಿಗೆ ಒಂದು ವರ್ಷದ ಅವಧಿಗೆ ಟೆಂಡರ್ ಆಹ್ವಾನಿಸಲಾಗಿತ್ತು ಗದಗ ಬೆಟಗೇರಿ ನಗರಸಭೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್೧ ಟೆಂಡರದಾರನಾಗಿದ್ದು, ಸುಮಾರು ವರ್ಷಗಳಿಂದ ಇಲ್ಲಿ ಟಾಟಾಏಸ್ ವಾಹನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಗದಗ ಬೆಟಗೇರಿ ನಗರಸಭೆಯ ಅಧಿಕಾರಿಗಳಿಗೆ ಇದು ಗೊತ್ತಿರುವ ಸಂಗತಿಯಾಗಿದ್ದರು. ಗದಗ-ಬೆಟಗೇರಿ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳು ನಗರಸಭೆಯ ಟಾಟಾಏಸ್ ವಾಹನ ಚಾಲನೆ ಮಾಡದೆ ಇದ್ದರು ಸಹ ಪ್ರತಿದಿನ ಹಾಜರಿ ಪುಸ್ತಕದಲ್ಲಿ ಲಂಚ ಪಡೆದು ಹಾಜರಿ ಹಾಕಿದ್ದಾರೆ. ಟೆಂಡರ್ ನೀಡುವಲ್ಲಿಯು ಲಂಚ ಪಡೆದು ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ.
ಆದರೆ ಗದಗ ಬೆಟಗೇರಿ ನಗರಸಭೆಯ ಹೊರಗುತ್ತಿಗೆ ನೌಕರನಿಗೆ ಟೆಂಡರ್ ನೀಡಿ ಕಾನೂನು ಉಲ್ಲಂಘಿಸಿದ್ದಾರೆ ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಟಾಟಾಏಸ್ ವಾಹನ ಚಾಲನೆಯ ಹಾಜರಿ ಪುಸ್ತಕದಲ್ಲಿ ಪ್ರತಿನಿತ್ಯ ಹಾಜರಿ ಹಾಕಿದ್ದಾರೆ ಈಗಲು ಸಹ ಪ್ರತಿದಿನ ಪೌರಾಯುಕ್ತರ ವಾಹನ ಚಾಲಕನಾಗಿ ಕಾರ್ಯವನ್ನು ನಿರ್ವಹಿಸುತ್ತಿರುವನು ಮೇಲ್ನೋಟಕ್ಕೆ ಇಲ್ಲಿ ಅಧಿಕಾರಿಗಳ ಲಂಚಾವತಾರ ಎದ್ದು ಕಾಣುತ್ತದೆ
ಕೂಡಲೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಗದಗ-ಬೆಟಗೇರಿ ನಗರಸಭೆ ಕಾನೂನು ಬಾಹಿರವಾಗಿ ನೀಡಿದ ಈ ಟೆಂಡರ ಆದೇಶವನ್ನು ರದ್ದು ಮಾಡಬೇಕು ಹಾಗೂ ಟಾಟಾಏಸ್ ಚಾಲಕನಾಗಿ ಹಾಗೂ ಪೌರಾಯುಕ್ತರ ವಾಹನ ಚಾಲಕನಾಗಿ ಏಕಕಾಲಕ್ಕೆ ಎರಡು ಕಡೆ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರನನ್ನು ಸೇವೆಯಿಂದ ವಜಾ ಮಾಡಲು ಪೌರಾಯುಕ್ತರಿಗೆ ನಿರ್ದೇಶನ ನೀಡಬೇಕು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳಿಗೆ ಅಧಿಕಾರ ದುರುಪಯೋಗದಡಿ ಕನಿಷ್ಠ ಮೂರು ತಿಂಗಳ ಕಾಲ ಸೇವೆಯಿಂದ ವಜಾ ಮಾಡಬೇಕು ಸದರಿ ಟೆಂಡರ್‌ನ ಎಲ್೨ ಟೆಂಡರದಾರರಿಗೆ ಟೆಂಡರ್ ನೀಡಿ ನ್ಯಾಯ ಒದಗಿಸಬೇಕೆಂದು ಡಾ. ಬಿ. ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಶಿವಾನಂದ ತಮ್ಮಣ್ಣವರ ಪತ್ರಿಕಾ ಪ್ರಕಟಣೆಯ ಮೂಲಕ ಮಾನ್ಯ ಗದಗ ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಗದಗ-ಬೆಟಗೇರಿ ಇವರಿಗೆ ವಿನಂತಿಸಿದ್ದಾರೆ.