ಕರುನಾಡು ಘರ್ಜನೆ ಸುದ್ದಿ : ಗದಗ : ನಗರದ ತಹಸೀಲ್ದಾರ್ ಕಚೇರಿಯಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಉಪ ತಹಸೀಲ್ದಾರ್ ಡಿ,ಟಿ ವಾಲ್ಮೀಕಿ ಅಮಾನತು ಯಾಕೆ? ಎಂಬುದು ಪ್ರಶ್ನಾರ್ತಿತವಾಗಿದೆ.
ಕ್ಷುಲ್ಲಕ ಕಾರಣಕ್ಕಾಗಿ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಜಗಳದಲ್ಲಿ ಕಚೇರಿಯ ಒಳಗೆ ನುಗ್ಗಿದ ಜನರನ್ನು ಕಚೇರಿಯಲ್ಲಿ ಯಾಕೆ ಜಗಳವಾಡುತ್ತಿದ್ದೀರಿ ಕಚೇರಿಯಲ್ಲಿ ದಾಖಲಾತಿಗಳು ಹಾಗೂ ಪೀಠೋಪಕರಣಗಳು ಕಂಪ್ಯೂಟರ್ ಇತ್ಯಾದಿ ವಸ್ತುಗಳ ಹಾನಿಯಾಗುತ್ತವೆ ಎಂಬ ಉದ್ದೇಶದಿಂದ ಜಗಳ ಮಾಡುತ್ತಿದ್ದವರನ್ನು ಕಚೇರಿಯಿಂದ ಹೊರಗೆ ಹೋಗುವಂತೆ ಉಪ ತಹಸೀಲ್ದಾರ್ ಡಿ,ಟಿ,ವಾಲ್ಮೀಕಿ ಅವರು ಹೇಳಿರುವುದು ತಪ್ಪಾಗಿದೆ ಅವರ ಮೇಲೆ ರಾಜಕೀಯ ಪ್ರೇರಿತವಾದಂತಹ ಕಾಂಗ್ರೆಸ್ಸಿಗರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಳ ಆರೋಪಗಳನ್ನು ಮಾಡುತ್ತಿದ್ದಾರೆ ಅವರು ಪಕ್ಷಾತೀತವಾಗಿ ಕಚೇರಿಯ ಕೆಲಸವನ್ನು ಮಾಡುವಂತಹ ಅವರಿಗೆ ಅಮಾನತು ಯಾಕೆ ಎಂಬುದು ಪ್ರಶ್ನಾರ್ಥಕವಾಗಿದೆ?
ಸಾರ್ವಜನಿಕರ ಸೇವೆಗೆ ಸಂಬಂಧಿಸಿದಂತೆ ಸರಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ತಮಗೆ ವಹಿಸಿದಂತಹ ಕೆಲಸವನ್ನು ನಿರ್ವಹಿಸಲು ಕಚೇರಿಯ ಅವಧಿಯನ್ನು ಹೊರತುಪಡಿಸಿ ತಮ್ಮ ಕಾರ್ಯವನ್ನು ನಿರ್ವಹಿಸುವುದು ಅನಿವಾರ್ಯತೆ ಉಂಟಾಗುವ ಪರಿಸ್ಥಿತಿಗಳು ಎದುರಾಗುತ್ತಿರುತ್ತದೆ ಉಪ ತಹಸೀಲ್ದಾರ್ ಡಿ,ಟಿ ವಾಲ್ಮೀಕಿ ಅವರು ಕಚೇರಿಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಕಚೇರಿಯ ಮುಂದೆ ಜಗಳವಾಡುತ್ತಿದ್ದವರು ಏಕಾಏಕಿ ಕಚೇರಿಯ ಒಳಗಡೆ ನುಗ್ಗಿ ಜಗಳವಾಡುತ್ತಿದ್ದರು ಆ ಸಂದರ್ಭದಲ್ಲಿ ಜಗಳವಾಡುತ್ತಿದ್ದವರಿಗೆ ಹೊರಗೆ ಹೋಗುವಂತೆ ಸೂಚನೆಯನ್ನು ಕೊಟ್ಟಿದ್ದಾರೆ ಹೊರತು ಕಚೇರಿಯಲ್ಲಿ ನಡೆದ ಜಗಳಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಅವರನ್ನು ಅಮಾನತ್ತು ಗಳಿಸಿರುವುದು ಯಾಕೆ ಎಂಬುದು ಪ್ರಶ್ನೆಯಾಗಿದೆ?.
ಸಾರ್ವಜನಿಕರ ಕಚೇರಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವವರು ನಿಷ್ಠೆ ಹಾಗೂ ಪ್ರಾಮಾಣಿಕ ಅಧಿಕಾರಿಯ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ?
ಕಚೇರಿಯಲ್ಲಿ ಕೆಲಸಕ್ಕೆ ಆಗಮಿಸುವ ಯಾವುದೇ ವ್ಯಕ್ತಿಯ ಜಾತಿ ಭೇದ ತಾವು ಯಾವ ಪಕ್ಷದವರು ಎಂದು ಕೇಳದೆ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ ಹೊರತು ಪಕ್ಷ ಹಾಗೂ ಜಾತಿ ಭೇದವನ್ನು ಮಾಡಿದೆ ತಮ್ಮ ಕಾರ್ಯವನ್ನು ನಿರ್ವಹಿಸಿದ ಅವರಿಗೆ ಈ ಅಮಾನತು ಯಾಕೆ ಎಂಬುದು ಪ್ರಶ್ನಾರ್ತಿತವಾಗಿದೆ?