ಕರುನಾಡು ಘರ್ಜನೆ ಸುದ್ದಿ: ಗದಗ ಜಿಲ್ಲಾ ಪೊಲೀಸ್ ಇದರಲ್ಲಿ ಪಿರ್ಯಾಧಿದಾರರಾದ ಶಿಲ್ಪಾ ತಂದೆ ಕಾಶೀನಾಥ ಅರಾದಾರ ಸಾ || ಮುದ್ದೆಬಿಹಾಳ ತಾಜಬಿಜಾಪೂರ ಹಾಅವಸ್ತಿ ಬೆಂಗಳೂರ ಇವರು ತಮ್ಮ ಸಬಂಧಿಕರ ಮದುವೆಯ ಕುರಿತು
ಬೆಟಗೇರಿ ಶಹರದ ಸೆಟ್ಲಮೆಂಟ್ ಎ.ಎಸ್.ಎಸ್ . ಕಾಮರ್ಸ್ ಕಾಲೇಜ್ ಹತ್ತಿರ ಇರುವ ಮನೆಗೆ ಬಂದು ದಿನಾಂಕ : 17/05/2025 ರಂದು ಬಾಗಲಕೋಟೆ ಜಿಲ್ಲೆಯ ಮುದ್ದೇಬಿಹಾಳಕ್ಕೆ ತಮ್ಮ ಸಬಂಧಿಕರು ಮೃತಪಟ್ಟದ್ದರಿಂದ ಅಲ್ಲಿಗೆ ಹೋಗುವ ಕುರಿತು ವಿನಾಯಕ ಟ್ರಾವೇಲ್ಸ್ ಗದಗನಲ್ಲಿ ಕಾರ್ ಬುಕ್ ಮಾಡಿ ಸದರಿ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ತಮ್ಮ ಬ್ಯಾಗನ್ನು ಕಾರಿನ ಡಿಕ್ಕಿಯಲ್ಲಿಟ್ಟದ್ದು ಸದರಿ ಬ್ಯಾಗನಲ್ಲಿಟ್ಟಿದ್ದ 4 ಬಂಗಾರದ ಬಳೆಗಳು ಕಳ್ಳತನವಾದ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂಬರ್ : 58/2025 ಕಲಂ : 303 ( 2 ) ಬಿ.ಎನ್.ಎಸ್ -2023 ಪ್ರಕರಣವನ್ನು ದಿನಾಂಕ : 26/05/2025 ರಂದು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು .
ಈ ಕಳ್ಳತನ ಪ್ರಕರಣದಲ್ಲಿ ಮಾನ್ಯ ಶ್ರೀ ಟಿ.ಎಸ್ . ನೇಮಗೌಡ ಪೊಲೀಸ್ ಅಧೀಕ್ಷಕರು ಗದಗ ರವರು ಹಾಗೂ ಶ್ರೀ ಮುರ್ತುಜಾ ಖಾದ್ರಿ , ಉಪ – ಅಧಿಕ್ಷಕರು ಗದಗ ಉಪ ವಿಭಾಗ , ಶ್ರೀ ಧೀರಜ ಚಿ . ಶಿಂದೆ , ಸಿಪಿಐ ಬೆಟಗೇರಿ ವೃತ್ತ ಇವರ ಮಾರ್ಗದರ್ಶನದಲ್ಲಿ ಶ್ರೀ ಎಲ್.ಎಂ. ಆರಿ , ಪಿ.ಎಸ್.ಐ ( ಕಾವಸು ) ಬೆಟಗೇರಿ ಪೊಲೀಸ್ ಠಾಣಿ , ಶ್ರೀ ಎಸ್.ಎ. ಗುಡ್ಲಿಮಠ , ಸಿಹೆಚ್‌ಸಿ , 919 , ಪಿ.ಆರ್ . ರಾಠೋಡ , ಸಿಹೆಚ್‌ಸಿ -445 , ಕೆ.ಡಿ. ಜಮಾದಾರ , ಸಿಹೆಚ್‌ಸಿ -1023 , ಎಂ.ಎಸ್ . ಗಾಣಿಗೇರ ಸಿಪಿಸಿ -468 , ಎಸ್.ಡಿ.ಬಳ್ಳಾರಿ , ಸಿಪಿಸಿ -481 , ಹೆಚ್.ಐ. ಯಡಿಯಾಪೂರ , ಸಿಪಿಸಿ -1051 , ಪಿ.ಎ.ಭರಮಗೌಡ್ರ , ಸಿಪಿಸಿ -531 ಇವರು ಹಾಗೂ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿಯವರಾದ ಶ್ರೀ ಗುರುರಾಜ ಬೂದಿಹಾಳ , ಎ.ಆರ್.ಎಸ್.ಐ , ಎಸ್.ಸಿ. ಕೊರಡೂರ , ಸಿಪಿಸಿ -475 ನೇದ್ದವರನ್ನೊಳಗೊಂಡ ತಂಡವನ್ನು ರಚಿಸಿ ಪತ್ತೆ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನಾ ನಂಬರ್ : 58/2025 ಕಲಂ : 303 ( 2 ) ಬಿ.ಎನ್.ಎಸ್- 2023 ನೇ ಪ್ರಕರಣದಲ್ಲಿ ತನಿಖೆಯನ್ನು ಕೈಕೊಂಡು ಇದರಲ್ಲಿ ಪಿರ್ಯಾಧಿದಾರರು ಕಾರನ್ನು ಬಾಡಿಗೆ ಪಡೆದಿದ್ದ ವಿನಾಯಕ ಟ್ರಾವೇಲ್ಸ್ ಗದಗ ಇವರ ಕಾರ್ ನಂಬರ್ : ಕೆಎ -06 , ಝಡ್ -4363 ನೇದ್ದರ ಚಾಲಕನಾದ ಆರೋಪಿತ ನವೀನಕುಮಾರ ತಂದೆ ಶರಣಬಸವರಾಜ ದೊಡ್ಡಮನಿ , ವಯಾ : 28 ವರ್ಷ , ಜಾತಿ : ಹಿಂದೂ ಮಾದರ , ಉದ್ಯೋಗ : ಕಾರ್ ಡ್ರೈವರ್ , ಸಾ | ಗದಗ , ಹುಗ್ಗೋ ಕಾಲೋನಿ ಇವನಿಗೆ ದಿನಾಂಕ : 05/07/2025 ರಂದು ವಶಕ್ಕೆ ಪಡೆದುಕೊಂಡು ವಿಚಾರಣಿ ಮಾಡಿ ಸದರಿಯವನಿಂದ ಕಳ್ಳತನವಾಗಿದ್ದ 2,60.000 / – ರೂಗಳು ಕಿಮ್ಮತ್ತಿನ 45 ಗ್ರಾಂ ತೂಕದ 4 ಬಂಗಾರದ ಬಳೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಬಾಡಿಗೆ ಸ್ವೀಪ್ಟ್ ಡಿಸೈರ್ ಕಾರ್ ನಂಬರ್ : ಕೆಎ -06 , ಝಡ್ -4363 ನೇದ್ದನ್ನು ವಶಪಡಿಸಿಕೊಂಡಿದ್ದು ಇರುತ್ತದೆ . ಈ ಪತ್ತೆ ಕಾರ್ಯವನ್ನು ಕೈಕೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಬಿ.ಎಸ್ . ನೇಮಗೌಡ , ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರು ಶ್ಲಾಘಿಸಿದ್ದಾರೆ.