ಕರುನಾಡು ಘರ್ಜನೆ ಸುದ್ದಿ : ಮಾನ್ಯ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಟೋ ಚಾಲಕರು ಮತ್ತು ಮಾಲಿಕರ ಸಭೆ ಎರ್ಪಡಿಸಿ ಎಲ್ಲ ಆಟೋ ಚಾಲಕರು ಕಡ್ಡಾಯವಾಗಿ
ಸಂಚಾರಿ ನಿಯಮಗಳನ್ನು ಪಾಲಿಸಿವುದು,ಸಮವಸ್ತ್ರ ದರಿಸುವುದು, ಅಗತ್ಯ ದಾಖಲಾತಿಗಳೊಂದಿಗೆ ಮಾತ್ರ ವಾಹನ ಚಲಾಯಿಸುವುದು,ಕರ್ಕಶ ಮತ್ತು ಅತಿಯಾದ ಶಬ್ದ ಮಾಡುವ ಹಾರ್ನ ಬಳಸದಂತೆ ಹಾಗೂ
ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚಿಸಲಾಯಿತು.ನಗರದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಎಲ್ಲರ ಸಹಕಾರದ ಅಗತ್ಯತೆ ಕುರಿತು ವಿವರಿಸಲಾಯಿತು.