ಕರುನಾಡು ಘರ್ಜನೆ ಸುದ್ದಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಿಪಿಐ, ಬೆಟಗೇರಿ ರವರ ನೇತ್ರತ್ವದಲ್ಲಿ ಗದಗ ಸಂಚಾರ ಠಾಣೆಯ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ನಂಬರ್ ಪ್ಲೇಟ್ಗಳನ್ನು ಮರೆಮಾಚಿ /ನಂಬರ್ ಪ್ಲೇಟ್ ಇಲ್ಲದ 40 ದ್ವಿಚಕ್ರ ವಾಹನಗಳನ್ನು ಜಪ್ತ ಮಾಡಿಕೊಂಡು
ಪ್ರಕರಣಗಳನ್ನು ದಾಖಲಿಸಿದ್ದಾರೆ. ವಾಹನಗಳ ನಂಬರ್ ಪ್ಲೇಟ್ಗಳನ್ನು ಮರೆಮಾಚಿ ವಾಹನಗಳನ್ನು ಓಡಿಸುವುದು ಕಾನೂನು ಬಾಹಿರ, ಅಂತಹ ವಾಹನಗಳ ವಿರುದ್ಧ ನಿರಂತರ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದರಿ ವಿಶೇಷ
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಸಿಬ್ಬಂದಿರವರ ಕರ್ತವ್ಯವನ್ನು ಮಾನ್ಯ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಶ್ಲಾಘಿಸಿದ್ದಾರೆ.