ಕರುನಾಡು ಘರ್ಜನೆ ಸುದ್ದಿ: ಗದಗ ೦೨: ನಮ್ಮ ಗದಗ ನಗರಕ್ಕೆ ಕುಡಿಯುವ ನೀರು ಬರದೆ ೧೦ ದಿನಗಳು ಕಳೆದಿವೆ, ಇನ್ನೂ ಕನಿಷ್ಠ ನೀರು ಬರಬೇಕಾದರೆ ಎಂಟು ದಿನಗಳು ಬೇಕಾಗುತ್ತದೆ ಎಂದು ನಗರಸಭೆ ಸಿಬ್ಬಂದಿಯಲ್ಲಿ ಮಾಹಿತಿ ದೊರೆತಿದೆ. ನಮ್ಮ ಗದಗ ನಗರದಲ್ಲಿ ಸ್ವತಂತ್ರ ನಂತರ ೪೫ ವರ್ಷಗಳ ಕಾಲ ಕಾಂಗ್ರೆಸ್ ಶಾಸಕರು ಆಡಳಿತ ನಡೆಸಿ, ಸಮರ್ಪಕವಾಗಿ ಕುಡಿಯುವ ನೀರು ಕೊಡಲು ಸಾಧ್ಯವಾಗದೇ ಇರುವುದು ಗದಗ ನಗರದ ಜನರ ಗೋಳು. ಅದೇ ರೀತಿ ನಗರಸಭಾ ಆಡಳಿತ ನಡೆಸುವ ಆಡಳಿತ ಪಕ್ಷವು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ದುರಾದೃಷ್ಟಕರ ಗದಗ ನಗರಕ್ಕೆ ನೀರು ಪಡೆದುಕೊಳ್ಳುವ ನದಿಯಲ್ಲಿ ಪೂರ್ಣ ಪ್ರಮಾಣದ ನೀರು ಬತ್ತಿ ಹೋಗುವ ಪೂರ್ವದಲ್ಲಿಯೇ ನೀರು ಬಿಡಸದೇ ಇರುವುದಕ್ಕೆ ಯಾರು ಹೊಣೆಗಾರರು ಎಂಬುದು ಅರ್ಥವಾಗುತ್ತಿಲ್ಲ, ನಮ್ಮ ಗದಗ ನಗರದಲ್ಲಿ ಕುಡಿಯುವ ನೀರು ದೊರೆಯಬೇಕೆಂದರೆ ದೇವರ ವರ ಪಡೆದಷ್ಟೇ ಕಷ್ಟ, ಇಂತಹ ಜನಪ್ರತಿನಿಧಿಗಳ ಮಧ್ಯದಲ್ಲಿ ಮತ್ತೇ ನಾವು ಜೈಕಾರ ಹಾಕುವುದು ನಮ್ಮೆಲ್ಲರ ಅದೃಷ್ಟವೇ ಸರಿ. ಎಂದು ಹಾಜಿಅಲಿ ಹೆಚ್. ಕೊಪ್ಪಳ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗದಗ ಬೆಟಗೇರಿ ನಗರಸಭೆ ಗೆ ಧೀಕಾರ ಕೂಗಿದ್ದಾರೆ.
ಗದಗ ನಗರದಲ್ಲಿ ಕುಡಿಯುವ ನೀರಿನ ಗೋಳು ಕೇಳೋರಿಲ್ಲ ಯಾರು..? : ಹಾಜಿಅಲಿ ಕೊಪ್ಪಳ
ಕರುನಾಡು ಘರ್ಜನೆ ಸುದ್ದಿ: ಗದಗ ೦೨: ನಮ್ಮ ಗದಗ ನಗರಕ್ಕೆ ಕುಡಿಯುವ ನೀರು ಬರದೆ ೧೦ ದಿನಗಳು ಕಳೆದಿವೆ, ಇನ್ನೂ ಕನಿಷ್ಠ ನೀರು ಬರಬೇಕಾದರೆ ಎಂಟು ದಿನಗಳು ಬೇಕಾಗುತ್ತದೆ ಎಂದು ನಗರಸಭೆ ಸಿಬ್ಬಂದಿಯಲ್ಲಿ ಮಾಹಿತಿ ದೊರೆತಿದೆ. ನಮ್ಮ ಗದಗ ನಗರದಲ್ಲಿ ಸ್ವತಂತ್ರ…