ಕರುನಾಡು ಘರ್ಜನೆ ಸುದ್ದಿ ಗದಗ : ಭಾರತದ ಅಖಂಡತೆಗೆ ಧಕ್ಕೆ ತರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳ ರವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನೀಡಬೇಕು. ಶಾಸಕರಾದ ಮೇಲೆ ವಿಧಿವತ್ತಾಗಿ ವಿಧಾನಸಭೆಯಲ್ಲಿ ಭಾಗವಹಿಸಲು ಪ್ರತಿಜ್ಞಾ ವಿಧಿ ಸ್ವೀಕರಿಸಿ ಪ್ರಜೆಗಳ ದುಡ್ಡಿನಲ್ಲಿ ಮೆರೆಯುತ್ತಿರುವ
ಶಾಸಕ ಸ್ಥಾನಕ್ಕೆ ಅಪವಾದವಾಗಿದ್ದಾರೆ. ಅವರು ವಿಧಾನಸಭೆಯಲ್ಲಿ “ನಾನು ಕಾನೂನಿನ ಪ್ರಕಾರ ಭಾರತದ ಸಂವಿಧಾನ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿ ಮತ್ತು ನಾನು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ.” ಎಂದು ಹೇಳಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೂಟಾಟಿಕೆ ಮತ್ತು ಸಮಾಜದಲ್ಲಿ ಹೊಲಸ ಬಾಯಿಂದ ಬಾಯ್ದೆರೆದು ಮಾತನಾಡಿದರೆ ಅಶಾಂತಿ, ಕೋಮುಗಲಭೆ ಮತ್ತು ಸಾಮಾಜಿಕ ವಾತಾವರಣವನ್ನು ಹದಗೆಡಿಸುವ ಮಾತುಗಳನ್ನೇ ಆಡುತ್ತಾರೆ. ಇತ್ತೀಚಿಗೆ ಕೊಪ್ಪಳದಲ್ಲಿ ನಡೆದ ಕೊಲೆ ಸಂಬಂಧಿಸಿದಂತೆ ಮಾತನಾಡಿ ಮುಸ್ಲಿಂ ಹುಡುಗಿಯನ್ನು
ಹಿಂದೂ ಹುಡುಗ ಮದುವೆಯನ್ನು ಮಾಡಿಕೊಂಡರೆ 5 ಲಕ್ಷ ಕೊಡುತ್ತೇನೆ ಎಂದು ಹೇಳಿರುವ ಮಾತು ಮುಸ್ಲಿಂ ಧರ್ಮದ ಎಲ್ಲರ ಭಾವನೆಗೆ ಧಕ್ಕೆ ತಂದಿದೆ. ಸರಕಾರ ಈಗಾಗಲೇ ತಪ್ಪು ಮಾಡಿದವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸುತ್ತಿದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಂಡು ತನಿಖೆ ಮಾಡುವ ಸಂದರ್ಭದಲ್ಲಿ ಸೌಹಾರ್ದತೆಯ ವಾತಾವರಣಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿರುವ ಜನಪ್ರತಿನಿಧಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಈ ಕೂಡಲೇ ರಾಜೀನಾಮೆ ನೀಡಿ ವಿಧಾನಸಭೆಯಿಂದ ನಿರ್ಗಮಿಸಬೇಕೆಂದು ಗದಗ ಶಹರ ಕಾಂಗ್ರೆಸ್ ಕಮೀಟಿ ಗದಗ ಶಹರ ಉಪಾಧ್ಯಕ್ಷರಾದ ಎಂ ಎನ್ ಶಾಲಗಾರ ಅವರು ಆಗ್ರಹಿಸಿದ್ದಾರೆ.