ಕರುನಾಡು ಘರ್ಜನೆ ಸುದ್ದಿ: ಗದಗ ನೆತ್ತಿ ಮೇಲೆ ಸೂರ್ಯ ಸುಡುತ್ತಿರೋವಾಗ ತಣ್ಣಗೆ ನೀರಲ್ಲಿ ಸ್ವಿಮ್ಮಿಂಗ್ ಮಾಡ್ಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ. ಸದ್ಯ ಗದಗ ಜಿಲ್ಲೆಯ ಜನರು . ಮರುಭೂಮಿಯಲ್ಲಿ ಎಳನೀರು ಸಿಕ್ತು ಅಂತ ಫುಲ್ ಖುಷ್ ಆಗಿರೋ ಜನ ಸ್ವಿಮ್ಮಿಂಗ್ ಮಾಡಿ ಸಖತ್ ಎಂಜಾಯ್ ಮಾಡ್ತಿದ್ದಾರೆ .ಥಂಡ ಥಂಡ ಕೂಲ್ ಕೂಲ್ ಸ್ವಿಮ್ಮಿಂಗ್ ಪೂಲ್ನಲ್ಲಿ ಫುಲ್ ಎಂಜಾಯ್. ಆಹಾ, ಚಿಲ್ ಅಂತ ಹೀಗೆ ಸ್ವಿಮ್ಮಿಂಗ್ ಪೂಲ್ಗೆ ಹಾರಿ ಸ್ವಿಮ್ ಮಾಡ್ತಿದ್ರೆ ಸ್ವರ್ಗ ರಪ್ ಅಂತ ಪಾಸ್ ಆದ ಹಾಗೆ ಆಗುತ್ತೆ. ಸೂರ್ಯಂಗೆ ಟಾರ್ಚು ಅನ್ನೋ ಹಾಗೆ, ಬಿಸಿಲಿನ ಬೇಗೆಗೆ ಬೇಸತ್ತ ಗದಗ ಜನ್ರು ಹೀಗೆ ಸ್ವಿಮ್ಮಿಂಗ್ ಪೂಲ್ ಮೊರೆ
ಹೋಗಿ ಸೂರ್ಯಂಗೆ ಸೆಡ್ಡು ಹೊಡೆದಿದ್ದಾರೆ.ಬಿಸಿಲು. ರಣ ಬಿಸಿಲು.. ಬೀರು ಬೇಸಿಗೆಯ ಆರ್ಭಟ.. ರಾಜ್ಯದಲ್ಲಿ ಸೂರ್ಯ ತನ್ನ 2 ಕಣ್ಣನ್ನ ತೆರೆದು ಭೂಮಿ ತಾಯಿಯನ್ನ ದಿಟ್ಟಿಸಿ ನೋಡಿದ ಹಾಗಿದೆ. ಬಿಸಿಲಿನ ಆರ್ಭಟಕ್ಕೆ ಗದಗ ಜಿಲ್ಲೆಯ ಜನರು ಥಂಡಾ ಹೊಡೆದು ಹೋಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು 41 ಡಿಗ್ರಿ ಸೆಲ್ಸಿಯಸ್ಗೂ ಅಧಿಕ ತಾಪಮಾನವಿದೆ. ಬಿಸಿಲಿನ ತಾಪಮಾನಕ್ಕೆ ಹೆದರಿ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದಾರೆ.ಭೀಕರ ಬರಗಾಲದಿಂದ ತತ್ತರಿಸಿರುವ ಉತ್ತರ ಕರ್ನಾಟಕದಲ್ಲಿ ಇದೀಗ ರಣಬಿಸಿಲಿನ ಆರ್ಭಟ ಜೋರಾಗಿದೆ.ಗದಗ ಕೋಪ್ಪಳ ರಾಯಚೂರು. ಕಲಬುರಗಿ ಹಾಗೂ ಯಾದಗಿರಿಯ ಹಲವು ಕಡೆಗಳಲ್ಲಿ ದಾಖಲೆಯ ಬಿಸಿಲು ದಾಳಿ ಮಾಡ್ತಿದೆ.. ಕಳೆದ ವಾರ ರಣ ಬಿಸಿಲಿನ ಆರ್ಭಟಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ರು. ಅಧಿಕ ತಾಪಮಾನದಿಂದ.ರಣ ಬಿಸಿಲಿನ ಆರ್ಭಟಕ್ಕೆ ಕಂಗಾಲಾಗಿರೋ ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗು ಹಲವು ಕಡೆ ಸ್ವಿಮ್ಮಿಂಗ್ ಪೂಲ್ ಮಾಡಲಾಗಿದೆ. ಈಜು ಕೊಳಕ್ಕೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರ್ತಿದ್ದು, ನೀರಿಗೆ ಜಿಗಿದು ಫುಲ್ ಎಂಜಾಯ್ ಮಾಡ್ತಿದ್ದಾರೆ.. ಪುಟಾಣಿ ಮಕ್ಕಳೊಂದಿಗೆಯೇ ಸಾರ್ವಜನಿಕರು ಸ್ವಿಮ್ಮಿಂಗ್ ಪೂಲ್ಗೆ ಬಂದು ಮಸ್ತ್ ಮಜಾ ಮಾಡ್ತಿದ್ದಾರೆ. ಆದ್ರೆ ಈಜುಕೊಳಕ್ಕೆ ಬರ್ತಿರೋ ಜನರಿಗೆ ದರ ಏರಿಕೆಯ ಬಿಸಿಯೂ ತಟ್ಟಿದಂತಾಗ್ತಿದೆ.. ಮಕ್ಕಳಿಗೆ 50 ರೂಪಾಯಿ ವಯಸ್ಕರಿಗೆ 100 ರೂಪಾಯಿ ದರ ನಿಗದಿ ಮಾಡಲಾಗಿದ್ದು ಈ ದುಬಾರಿ ದರ ಕಡಿಮೆ ಮಾಡಬೇಕು ಅಂತ ಜನರು ಮನವಿ ಮಾಡ್ತಿದ್ದಾರೆ.ಇನ್ನೂ.
ರಣ ಬಿಸಿಲಿನ ಆರ್ಭಟಕ್ಕೆ ಕಂಗಾಲಾಗಿರೋ ಜನತೆ ಕೂಲ್ ಕೂಲ್ ಆಗೋದಕ್ಕೆ ಈಜುಕೊಳಕ್ಕೆ ಮೊರೆ
ಕರುನಾಡು ಘರ್ಜನೆ ಸುದ್ದಿ: ಗದಗ ನೆತ್ತಿ ಮೇಲೆ ಸೂರ್ಯ ಸುಡುತ್ತಿರೋವಾಗ ತಣ್ಣಗೆ ನೀರಲ್ಲಿ ಸ್ವಿಮ್ಮಿಂಗ್ ಮಾಡ್ಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ. ಸದ್ಯ ಗದಗ ಜಿಲ್ಲೆಯ ಜನರು . ಮರುಭೂಮಿಯಲ್ಲಿ ಎಳನೀರು ಸಿಕ್ತು ಅಂತ ಫುಲ್ ಖುಷ್ ಆಗಿರೋ ಜನ ಸ್ವಿಮ್ಮಿಂಗ್…