ಕರುನಾಡು ಘರ್ಜನೆ ಸುದ್ದಿ : ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣವನ್ನು ಡಿಎಸ್ಪಿ ಗದಗ ರವರ ನೇತೃತ್ವದ ತಂಡ ಯಶಸ್ವಿಯಾಗಿ ಭೇದಿಸಿ,ಇಬ್ಬರು ಆರೋಪಿತರನ್ನು ಬಂಧಿಸಿದೆ. ಆರೋಪಿತರಿಂದ ₹4,30,000 ಮೌಲ್ಯದ ಬಂಗಾರದ ಆಭರಣಗಳನ್ನು , ಕೃತ್ಯಕ್ಕೆ ಬಳಸಿದ 2-ಬೈಕ್, 2-ಮೊಬೈಲ್ ಪೋನ್ ಸೇರಿದಂತೆ ಒಟ್ಟು ₹1,64,000 ಮೌಲ್ಯದ ಮುದ್ದೆಮಾಲುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದು ಇರುತ್ತದೆ
ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರ ಕಾರ್ಯಕ್ಷಮತೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.
ಪತ್ತೆಯಾದ ಆರೋಪಿತರ ಮೇಲೆ ಬಾಗಲಕೋಟೆ ಜಿಲ್ಲೆಯ ನವನಗರ ಠಾಣೆಯಲ್ಲಿ 1 ಪ್ರಕರಣ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಅನಂತಪುರ ಠಾಣೆ ಹಾಗೂ ಗುಂತಕಲ್ ಠಾಣೆಗಳಲ್ಲಿ ತಲಾ 1 ಪ್ರಕರಣಗಳು ದಾಖಲಾಗಿರುತ್ತವೆ.